ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭ್ಯರ್ಥಿ ಯಾರೇ ಆಗಿರಲಿ, ಬಿಜೆಪಿ ಕ್ಲೀನ್ ಸ್ವೀಪ್: ಪ್ರಮೋದ್ ಮಧ್ವರಾಜ್ ಸಂದರ್ಶನ

ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದರು ಕೂಡಾ ಬಿಜೆಪಿಯ ನಾಯಕರು ನನಗೆ ಉತ್ತಮ ಸಹಕಾರವನ್ನು ನೀಡುತ್ತಿದ್ದಾರೆ. ಕೆಲವೊಂದು ಮಂದಿಗೆ ನಾನು ಅಡ್ಡ ಆಗಬಹುದು ಎಂದು ಅವರದ್ದೇ ಆದ ಭಯ ಇರಬಹುದೇ ವಿನಃ ನಾವು ಯಾರಿಗೂ ಅಡ್ಡ ಅಲ್ಲ.

By ಬಾಲರಾಜ್ ತಂತ್ರಿ
|
Google Oneindia Kannada News

2018ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಐದು ಕ್ಷೇತ್ರಗಳನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಅದೇ ವಿಶ್ವಾಸ ಇದೇ ಬರುವ ಮೇ ತಿಂಗಳೊಳಗೆ ನಡೆಯಬೇಕಿರುವ ಚುನಾವಣೆಯಲ್ಲಿ ಕೂಡಾ ಬಿಜೆಪಿ ನಾಯಕರಿಗೆ ಇದೆಯೇ?

Recommended Video

Pramod Madhwaraj ಜೊತೆ ಒನ್ ಇಂಡಿಯಾ ವಿಶೇಷ ಸಂದರ್ಶನ | BJP Leader | *Interview | Oneindia Kannada

ಕಳೆದ ಚುನಾವಣೆಗಿಂತ ಈ ಬಾರಿ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಕಾಂಕ್ಷಿ ಪಟ್ಟಿ ದೊಡ್ಡದಿದೆ. ಆಡಳಿತ ವಿರೋಧಿ ಅಲೆ ಇರಬಹುದೇ ಎನ್ನುವ ಭಯವೂ ಬಿಜೆಪಿ ನಾಯಕರಿಗೆ ಕಾಡುತ್ತಿದೆ. ಕಾಂಗ್ರೆಸ್ ಪಕ್ಷದವರು ದೊಡ್ಡ ಮಟ್ಟದಲ್ಲಿ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಎಳೆಎಳೆಯಾಗಿ ಜನರ ಮುಂದಿಡುತ್ತಿದ್ದಾರೆ.

ಉಡುಪಿಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ: ಶಾಸಕ ಕೆ. ರಘುಪತಿ ಭಟ್ ಸಂದರ್ಶನಉಡುಪಿಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ: ಶಾಸಕ ಕೆ. ರಘುಪತಿ ಭಟ್ ಸಂದರ್ಶನ

ಇವೆಲ್ಲವನ್ನೂ ಮೀರಿ ಬಿಜೆಪಿ ನಾಯಕರು ಚುನಾವಣಾ ವರ್ಷದಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ದಡಕ್ಕೆ ಸೇರಿಸುತ್ತಾರಾ ಎನ್ನುವ ಕುತೂಹಲ ಮನೆ ಮಾಡಿದೆ. ಕಳೆದ ಬಾರಿಯಂತೆ SDPI ಈ ಬಾರಿಯೂ ಕಣಕ್ಕಿಳಿಯಲಿದೆ. ಇದರ ನೇರ ಲಾಭ ಬಿಜೆಪಿಗೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಸುಮಾರು ಒಂಬತ್ತು ತಿಂಗಳ ಹಿಂದೆ ಬಿಜೆಪಿಗೆ ಸೇರಿರುವ ಪ್ರಮೋದ್ ಮಧ್ವರಾಜ್ ಅವರು ಉಡುಪಿ ಭಾಗದಲ್ಲಿ ಪ್ರಭಾವೀ ನಾಯಕರು ಎನ್ನುವುದು ನಿಸ್ಸಂಸಯ. ಅಭ್ಯರ್ಥಿ ಯಾರೇ ಆಗಿರಲಿ, ಬಿಜೆಪಿ ಜಿಲ್ಲೆಯ ಎಲ್ಲಾ ಕ್ಷೇತ್ರವನ್ನು ಗೆದ್ದುಕೊಳ್ಳಲಿದೆ ಎನ್ನುವ ವಿಶ್ವಾಸದ ಮಾತನ್ನು ಪ್ರಮೋದ್ ಅವರು 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ. ಸಂದರ್ಶನದ ಆಯ್ದ ಭಾಗವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ಬಿಜೆಪಿ ಸೇರಿದ ನಂತರ ಪಕ್ಷದ ಕಾರ್ಯಕರ್ತರ, ಮುಖಂಡರ ಸಹಕಾರ

ಬಿಜೆಪಿ ಸೇರಿದ ನಂತರ ಪಕ್ಷದ ಕಾರ್ಯಕರ್ತರ, ಮುಖಂಡರ ಸಹಕಾರ

ಪ್ರ: ಬಿಜೆಪಿ ಸೇರಿದ ನಂತರ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಹಕಾರ ನಿಮಗೆ ಹೇಗಿದೆ?
ಪ್ರಮೋದ್: ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದರು ಕೂಡಾ ಬಿಜೆಪಿಯ ನಾಯಕರು ನನಗೆ ಉತ್ತಮ ಸಹಕಾರವನ್ನು ನೀಡುತ್ತಿದ್ದಾರೆ. ಕೆಲವೊಂದು ಮಂದಿಗೆ ನಾನು ಅಡ್ಡ ಆಗಬಹುದು ಎಂದು ಅವರದ್ದೇ ಆದ ಭಯ ಇರಬಹುದೇ ವಿನಃ ನಾವು ಯಾರಿಗೂ ಅಡ್ಡ ಅಲ್ಲ. ನಾನು ಯಾವುದೇ ಷರತ್ತು ಇಲ್ಲದೇ ಬಿಜೆಪಿಗೆ ಕಾರ್ಯಕರ್ತನಾಗಿ ಸೇರ್ಪಡೆಯಾಗಿದ್ದೇನೆ.

ಕಾರ್ಯಕರ್ತರ ಮಟ್ಟದಲ್ಲಿ ನಡೆದ ಸಭೆಯಲ್ಲಿ ನಾನು ಮಾತನಾಡಿದಾಗ ಕಾರ್ಯಕರ್ತರ ಪ್ರತಿಕ್ರಿಯೆಯನ್ನು ನೋಡಿದಾಗ ಎಲ್ಲರಿಗೂ ಸಂತೋಷವಾಗಿದೆ ಎಂದು ನಾನು ಭಾವಿಸಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರು ಎರಡು ಪಕ್ಷದ ಅಭ್ಯರ್ಥಿ ಯಾರಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

 ಬಿಜೆಪಿ ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್ ಮಾಡುತ್ತೆ

ಬಿಜೆಪಿ ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್ ಮಾಡುತ್ತೆ

ಪ್ರ: ಅಭ್ಯರ್ಥಿ ಯಾರಾದರೂ ಆಗಬಹುದು, ಬಿಜೆಪಿ ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್ ಮಾಡುತ್ತೆ ಎನ್ನುವ ಮಾತನ್ನು ಹೇಳಿದ್ದೀರಿ. ನೀವೂ ಕೂಡಾ ಟಿಕೆಟ್ ಆಕಾಂಕ್ಷಿನಾ?
ಪ್ರಮೋದ್: ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಯಾರಾಗಬಹುದು ಎನ್ನುವ ಮಾಹಿತಿ ಯಾರಿಗೂ ಇಲ್ಲ. ಪಕ್ಷ ತೀರ್ಮಾನ ಮಾಡಿದ್ದನ್ನು ನಾನು ಸಹಿತ ಎಲ್ಲರೂ ಅದಕ್ಕೆ ಬದ್ದರಾಗಿರಬೇಕಾಗುತ್ತದೆ.

ಪಕ್ಷದ ಅಭ್ಯರ್ಥಿ ಯಾರಾದರೂ ಆಗಬಹುದು ಅವರನ್ನು ಗೆಲ್ಲಿಸುವ ಕೆಲಸಕ್ಕೆ ನಾವು ಶ್ರಮ ವಹಿಸುತ್ತೇವೆ. ನಾನು ಈಗಾಗಲೇ ಹೇಳಿದಂತೆ ಯಾವುದೇ ಆಕಾಂಕ್ಷೆಯಿಲ್ಲದೇ ಬಿಜೆಪಿಗೆ ಸೇರ್ಪಡೆಯಾಗಿರುವುದು. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ.

 ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಟೀಕೆ

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಟೀಕೆ

ಪ್ರ: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಟೀಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಪ್ರಮೋದ್: ಇಬ್ಬರು ನಾಯಕರ ಹೇಳಿಕೆಯಲ್ಲಿ ಸತ್ಯವಿಲ್ಲ, ಚಪ್ಪಾಳೆ ಗಿಟ್ಟಿಸಿಕೊಳ್ಳಲು ಆಡಿರುವಂತಹ ಹೇಳಿಕೆಗಳು, ಇದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕಾಗಿಲ್ಲ.

ಪ್ರ: ಕಾಂಗ್ರೆಸ್ ಮತ್ತು ಜೆಡಿಎಸ್ ರಥಯಾತ್ರೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರಮೋದ್: ರ‍್ಯಾಲಿ, ರಥಯಾತ್ರೆಗೆ ಜನ ಸೇರುತ್ತಾರೆ, ಅವರವರ ಪಕ್ಷದ ಕಾರ್ಯಕರ್ತರೇ ಇದರಲ್ಲಿ ಇರಬಹುದು. ಚುನಾವಣೆಯ ಸಮಯದಲ್ಲಿ ಮನೆಮನೆಗೆ ಹೋಗಿ ನಮ್ಮ ಕಾರ್ಯಕರ್ತರು ಮಾಡುವಂತಹ ಕೆಲಸ ಮುಖ್ಯವಾಗುತ್ತೆ. ರಾಷ್ಟ್ರ ಮಟ್ಟದ ನಾಯಕರು ಬಂದು ಭಾಷಣ ಮಾಡಿದಾಗ, ಜನರು ಮನ್ನಣೆಯನ್ನು ಕೊಡುವಾಗ ಚುನಾವಣಾ ಲೆಕ್ಕಾಚಾರ ಬದಲಾಗಲಿದೆ.

 ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಉತ್ತಮ ಪ್ರದರ್ಶನ

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಉತ್ತಮ ಪ್ರದರ್ಶನ

ಪ್ರ: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಉತ್ತಮ ಪ್ರದರ್ಶನ ನೀಡಿ, ಕಿಂಗ್ ಮೇಕರ್ ಸ್ಥಾನಕ್ಕೆ ಬಂದರೆ?
ಪ್ರಮೋದ್: ಅತಂತ್ರ ಫಲಿತಾಂಶ ಬರುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ, ಬಿಜೆಪಿ ಪರವಾಗಿ ಜನಾದೇಶ ಬರಲಿದೆ ಎನ್ನುವ ವಿಶ್ವಾಸ ನಮಗಿದೆ. ಅತಂತ್ರವಾದ ಪರಿಸ್ಥಿತಿ ನಿರ್ಮಾಣ ಆಗಲಿಕ್ಕಿಲ್ಲ, ಹಾಗಾಗಿ ಕಿಂಗ್ ಮೇಕರ್ ಪ್ರಶ್ನೆ ಉದ್ಭವವಾಗುವುದಿಲ್ಲ

ಪ್ರ: ಕಾಂಗ್ರೆಸ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ?
ಪ್ರಮೋದ್: ಯಾವುದೇ ಆಧಾರವಿಲ್ಲದೆ ಸುಮ್ಮನೆ ಮಾಡುತ್ತಿರುವ ಆರೋಪಗಳು. ಕಮಿಷನ್, ಭ್ರಷ್ಟಾಚಾರ ಕಾಂಗ್ರೆಸ್ ಆಡಳಿತ ಇದ್ದಾಗಲೇ ಇರಲಿಲ್ಲವಾ? ನಾನು ಕಾಂಗ್ರೆಸ್ಸಿನಲ್ಲಿ ಮಂತ್ರಿಯಾಗಿದ್ದೆ, ನಾನು ಲಂಚ ತೆಗೆದುಕೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯನವರಿಗೆ ಅವರ ಸಂಪುಟದಲ್ಲಿದ್ದ ಎಲ್ಲರೂ ಪ್ರಾಮಾಣಿಕರು ಎಂದು ಎದೆ ತಟ್ಟಿ ಹೇಳಿಕೊಳ್ಳುವ ಧೈರ್ಯವಿದೆಯಾ?

 ಧಾರ್ಮಿಕ ಕಾರ್ಯಕ್ರಮದ ವಿಚಾರದಲ್ಲಿ ಯೋಗಿ ಅವರನ್ನು ಭೇಟಿ

ಧಾರ್ಮಿಕ ಕಾರ್ಯಕ್ರಮದ ವಿಚಾರದಲ್ಲಿ ಯೋಗಿ ಅವರನ್ನು ಭೇಟಿ

ಪ್ರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ರಿ. ಏನಾದರೂ ರಾಜಕೀಯ ಇದರಲ್ಲಿ ಇದೆಯಾ?
ಪ್ರಮೋದ್: ಧಾರ್ಮಿಕ ಕಾರ್ಯಕ್ರಮದ ವಿಚಾರದಲ್ಲಿ ಯೋಗಿ ಅವರನ್ನು ಭೇಟಿಯಾಗಿದ್ದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ.

ಪ್ರ: ಉಡುಪಿ ಕ್ಷೇತ್ರದ ಒಟ್ಟಾರೆ ಅಭಿವೃದ್ದಿಯ ವಿಚಾರದ ಬಗ್ಗೆ ಮಾತನಾಡುವುದಾದರೆ?
ಪ್ರಮೋದ್: ನಾನು ಶಾಸಕನಾಗುವ ಮುನ್ನ, ಹತ್ತು ವರ್ಷ ರಘುಪತಿ ಭಟ್ ಅವರು ಶಾಸಕರಾಗಿದ್ದರು. ಅವರು ಯಾವ ಕೆಲಸವನ್ನು ಬಾಕಿ ಇಟ್ಟಿದ್ದರು ಅದನ್ನು ನಾನು ಐದು ವರ್ಷದಲ್ಲಿ ಮಾಡಿದೆ, ನಾನು ಬಾಕಿಯಿಟ್ಟ ಕೆಲಸವನ್ನು ಅವರು ಮುಗಿಸಿದರು. ಒಟ್ಟಾರೆಯಾಗಿ ನಮ್ಮಿಬ್ಬರ ಕೆಲಸ ಅಭೂತಪೂರ್ವ ಎಂದು ನಾನು ಹೇಳಲು ಬಯಸುತ್ತೇನೆ.

 ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಭಾವ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಭಾವ

ಪ್ರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಭಾವ ಬಿಜೆಪಿ ಮೇಲೆ ಹೇಗಿದೆ:
ಪ್ರಮೋದ್: ಎಲ್ಲೆಲ್ಲಿ ಆರ್ ಎಸ್ ಎಸ್ ಬಲವಾಗಿದೆಯೋ ಅಲ್ಲಲ್ಲಿ ಬಿಜೆಪಿ ಬಲವಾಗಿದೆ. ನಾನು ಬಿಜೆಪಿಗೆ ಸೇರಿದ ನಂತರ ಇದರ ಅರಿವಾಗುತ್ತಿದೆ. ಅವರ ದೇಶಭಕ್ತಿ ಮತ್ತು ಸಂಘಟನೆಯ ಕೆಲಸ ಅದ್ಭುತವಾಗಿರುತ್ತದೆ. ಆರ್ ಎಸ್ ಎಸ್ ಎನ್ನುವುದು ವಿಶ್ವದ ಅತ್ಯಂತ ದೊಡ್ಡ ಸಂಘಟನೆಯಾಗಿದೆ. ಹೊರಗಿನಿಂದ ಆರ್ ಎಸ್ ಎಸ್ ಅನ್ನು ಟೀಕಿಸುವುದು ಒಂದು ಒಳಗೆ ಬಂದು ನೋಡಿದಾಗ ಅದರ ಕಾರ್ಯವೈಖರಿ ಅರ್ಥವಾಗುತ್ತದೆ.

ಪ್ರ: ಚುನಾವಣೆಯ ವೇಳೆ ಉಡುಪಿಯ ಜನತೆಗೆ ಏನು ಹೇಳಲು ಬಯಸುತ್ತೀರಿ?
ಪ್ರಮೋದ್: ಬಿಜೆಪಿಯ ಶಕ್ತಿ ತಳಮಟ್ಟದಲ್ಲಿ ಇರುವಂತಹ ಕಾರ್ಯಕರ್ತರು, ಜೊತೆಗೆ, ಆರ್ ಎಸ್ ಎಸ್ ಮುಖಂಡರ ಮಾರ್ಗದರ್ಶನ. ಶಾಸಕರು/ಸಂಸದರು ತಪ್ಪಿ ನಡೆದರೆ, ಆರ್ ಎಸ್ ಎಸ್ ಎಚ್ಚರಿಸುತ್ತದೆ. ಎಲ್ಲಾ ಹಂತದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಿರುವುದರಿಂದ ಈ ಬಾರಿಯ ಚುನಾವಣೆಯಲ್ಲೂ ಜನರು ಬಿಜೆಪಿಯನ್ನು ಬೆಂಬಲಿಸ ಬೇಕು ಎನ್ನುವುದು ನಮ್ಮ ಕೋರಿಕೆ.

English summary
An Exclusive Interview With Former Minister, BJP Leader Pramod Madhwaraj, BJP, Udupi, Coastal Karnataka, Karnataka Assembly Elections 2023, Politics, Congress,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X