ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೃತದೇಹ ಅದಲು-ಬದಲು: ಕೋವಿಡ್ ಆಸ್ಪತ್ರೆಯ ಎಡವಟ್ಟಿಗೆ ಹಿಡಿಶಾಪ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 23: ಉಡುಪಿಯ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ದೊಡ್ಡ ಎಡವಟ್ಟು ಮಾಡಿದ್ದು, ಮೃತ ಕೋವಿಡ್ ಸೋಂಕಿತ ವ್ಯಕ್ತಿಯ ಮೃತದೇಹದ ಬದಲು, ಬೇರೆ ಯುವಕನ ಶವವೊಂದನ್ನು ಕಳುಹಿಸಿ ಕೊಟ್ಟಿದ್ದಾರೆ. ಬದಲಾದ ಶವ ಕಂಡ ಮಕ್ಕಳು, ಸ್ಮಶಾನದಲ್ಲೇ ಆಸ್ಪತ್ರೆಗೆ ಹಿಡಿಶಾಪ ಹಾಕಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

Recommended Video

ತಮ್ಮನ ಅರ್ಹತೆ ಬಗ್ಗೆ ಮಾತನಾಡಿದ Priyanka Vadra... | Oneindia Kannada

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಮೂಲದ 60ರ ಹರೆಯದ ವ್ಯಕ್ತಿಗೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿದ್ದವು. ಅವರು ನಿನ್ನೆ ಮೃತಪಟ್ಟಿದ್ದು, ಬಳಿಕ ಕೊರೊನಾ ಸೋಂಕು ತಗುಲಿತ್ತು. ಕೋವಿಡ್ ನಿಯಮಾವಳಿಯಂತೆ ಇಂದು ಆ ವ್ಯಕ್ತಿಯ ಅಂತ್ಯಸಂಸ್ಕಾರಕ್ಕಾಗಿ ಆಸ್ಪತ್ರೆಯವರು ಮೃತದೇಹವನ್ನು ಕಳುಹಿಸಿ ಕೊಡುವಾಗ ಬೇರೆ ಯುವಕನ ಶವವನ್ನು ಕಳಿಸಿಕೊಟ್ಟಿದ್ದಾರೆ.

Udupi: Exchange Of Dead Body; Peoples Curse For Hospital Stumbling Block

ಉಡುಪಿಯಲ್ಲಿ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆಉಡುಪಿಯಲ್ಲಿ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ

ಇತ್ತ ಕುಂದಾಪುರದ ರುದ್ರಭೂಮಿಯಲ್ಲಿ ಮೃತ ವ್ಯಕ್ತಿಯ ಶವಕ್ಕಾಗಿ ಕಾಯುತ್ತಿದ್ದ ಮಕ್ಕಳು ಮತ್ತು ಕುಟುಂಬಿಕರಿಗೆ ಬದಲಾದ ಶವ ನೋಡಿ ಶಾಕ್ ಆಗಿದೆ.

Udupi: Exchange Of Dead Body; Peoples Curse For Hospital Stumbling Block

ಕುಂದಾಪುರದ ಸಂಗಮ್ ಬಳಿಯ ರುದ್ರಭೂಮಿಯಲ್ಲಿ ಇದನ್ನು ಗಮನಿಸಿದ ಮೃತ ವ್ಯಕ್ತಿಯ ಮಕ್ಕಳು ಮತ್ತು ಕುಟುಂಬಸ್ಥರು ಸ್ಮಶಾನದಲ್ಲೇ ಆಸ್ಪತ್ರೆಯ ಎಡವಟ್ಟಿಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

English summary
The staff at the Covid Hospital in Udupi have made a big mistake, sending a dead body of a another young man instead of the dead body of Coronavirus infected person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X