ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣಿನ ಮಗನಾದ ಕೊಡವೂರು ಗ್ರಾಮದ ಎಂಟರ ಹರೆಯದ ಪುಟ್ಟ ಪೋರ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ.12: ಆತ ಎಂಟರ ಹರೆಯದ ಪುಟ್ಟ ಪೋರ. ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳೆಲ್ಲಾ ಈಗಿನ ಟ್ರೆಂಡ್ ಗೆ ತೆರೆದುಕೊಂಡಿರುತ್ತಾರೆ. ಮೊಬೈಲ್ ನಲ್ಲಿ ಗೇಮ್ಸ್, ಟಿವಿಯಲ್ಲಿ ಕಾರ್ಟೂನ್ಸ್ ಅಂತ ತಮ್ಮ ಬಾಲ್ಯ ಕಳೆಯುತ್ತಿರುತ್ತಾರೆ.

ಆದರೆ ಈತ ತುಂಬಾ ಡಿಫರೆಂಟ್. ಎಷ್ಟರ ಮಟ್ಟಿಗೆ ಅಂದರೆ ಸ್ವ ಇಚ್ಛೆಯಿಂದ ಗದ್ದೆಗೆ ಇಳಿದು, ನೇಗಿಲು ಹಿಡಿದು ಉಳುಮೆ ಮಾಡುತ್ತಾನೆ. ಹಾರೆ ಹಿಡಿದು ಗದ್ದೆಯಲ್ಲಿ ನಾಟಿ ಕೆಲಸ ಮಾಡೋರಿಗೆ ಸಹಾಯ ಮಾಡುತ್ತಾನೆ. ಒಟ್ಟಿನಲ್ಲಿ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡುತ್ತಿದ್ದಾನೆ ಈ ಪುಟ್ಟ ಪೋರ.

ಉಡುಪಿ: ಗದ್ದೆಗಿಳಿದು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟ ಶಿಕ್ಷಕರುಉಡುಪಿ: ಗದ್ದೆಗಿಳಿದು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟ ಶಿಕ್ಷಕರು

ಅಂದಹಾಗೆ ಆ ಪೋರನ ಹೆಸರು ರಿತ್ವಿಕ್. ಉಡುಪಿಯ ಕೊಡವೂರು ಗ್ರಾಮದವನು. ಮಲ್ಪೆಯ ಫ್ಲವರ್ ಆಫ್ ಪ್ಯಾರಡೈಸ್ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿ. ಗಣೇಶ್ ಹಾಗೂ ಪುಷ್ಪ ದಂಪತಿಯ ಪುತ್ರನಾಗಿರುವ ರಿತ್ವಿಕ್ ಗೆ ಬಾಲ್ಯದಿಂದಲೇ ಕೃಷಿ ಚಟುವಟಿಕೆ ಮೇಲೆ ವಿಶೇಷ ಆಸಕ್ತಿ ಅಂತಾರೆ ಮನೆಯವರು.

Eight year old boy is very interested in farming

ಹಿರಿಯರು ಗದ್ದೆಗೆ ಇಳಿದು ಉಳುಮೆ ಮಾಡಿದರೆ ತಾನೂ ಅವರ ಜೊತೆ ಉಳುಮೆ ಮಾಡುತ್ತಾನೆ. ಮಾತ್ರವಲ್ಲ, ತನಗಿಂತ ಸಾವಿರ ಪಟ್ಟು ಬಲಶಾಲಿಯಾದ ಕೋಣಗಳನ್ನು ಪಳಗಿಸೋದಕ್ಕೆ ಈ ಮುಂದಾಗುತ್ತಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ರಿತ್ವಿಕ್ ಕೂಡಾ ಮನೆಯವರನ್ನು ಅನುಸರಿಸುತ್ತಾನೆ.‌

ಮನೆ ಮಂದಿ ಬೇಡ ಅಂದ್ರೂ ತಾನೇ ಗದ್ದೆಗೆ ಇಳಿತಾನೆ, ಉಳುಮೆ ಮಾಡ್ತಾನೆ. ಜೊತೆಗೆ ಹಾರೆ ಹಿಡಿದು ಕೆಲಸಾನೂ ಮಾಡ್ತಾನೆ. ಒಟ್ಟಿನಲ್ಲಿ ರಿತ್ವಿಕ್ ನಂತಹ ಅದೆಷ್ಟೋ ಪುಟಾಣಿಗಳು ಇಂದು ಕೈಯಲ್ಲಿ ಟಿವಿ ರಿಮೋಟ್ ಹಿಡಿಬೇಕಾದ್ರೆ, ರಿತ್ವಿಕ್ ಮಾತ್ರ ತನ್ನ ರಜೆ ಸಮಯದಲ್ಲಿ ನೇಗಿಲು ಹಿಡಿದು, ಸಣ್ಣ ವಯಸ್ಸಲ್ಲೇ ಮಣ್ಣಿನ ಮಗನಾಗೋ ಕನಸು ಕಂಡಂತಿದೆ.

Eight year old boy is very interested in farming

ಅಂದ ಹಾಗೆ ಕಳೆದ ಭಾನುವಾರ ರಜಾದಿನದಂದು ರಿತ್ವಿಕ್ ತಮ್ಮ ಮನೆಗೆ ಸೇರಿದ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ತೆಗೆಯಲಾದ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪುಟಾಣಿಯ ಕೃಷಿ ಪ್ರೇಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

English summary
Eight year old boy is very interested in farming. That boy name is Ritvik. Originally from Kodavoor village of Udupi. Ritvik very interested in agriculture since childhood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X