ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಜನೌಷಧಿ ಕೇಂದ್ರದಲ್ಲಿ ಇಸಿಜಿ, ಮೋದಿ ಮೆಚ್ಚುಗೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 07: ಜನೌಷಧ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ರಾಜ್ಯಗಳಲ್ಲಿ ವೈದ್ಯರ ಜೊತೆ ಸಂವಾದ ನಡೆಸಿದರು. ಉಡುಪಿಯ ವೈದ್ಯರ ಕಾರ್ಯಕ್ಕೆ ಸಂವಾದದಲ್ಲಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ ನರೇಂದ್ರ ಮೋದಿ ಉಡುಪಿಯ ಬ್ರಹ್ಮಾವರದ ಜನೌಷಧ ಕೇಂದ್ರದಲ್ಲಿನ ಕಾರ್ಯಕ್ರಮದಲ್ಲಿ ವೈದ್ಯ ಡಾ. ಪದ್ಮನಾಭ ಕಾಮತ್ ಜೊತೆ ಸಂವಾದ ನಡೆಸಿದರು. ಡಾ. ಪದ್ಮನಾಭ ಕಾಮತ್ ಮಂಗಳೂರಿನ ಖ್ಯಾತ ಹೃದಯ ವೈದ್ಯರು. ಜನೌಷಧಿ ಕೇಂದ್ರಗಳನ್ನು ಅವರು ಪ್ರೋತ್ಸಾಹಿಸುತ್ತಿದ್ದಾರೆ.

ಕೊರೊನಾಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ ಕೊರೊನಾಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ

ಮೋದಿ ಜೊತೆ ಮಾತನಾಡಿದ ವೈದ್ಯರು, "ಮೂರು ವರ್ಷದಿಂದ ಜನೌಷಧಿ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ. ಗ್ರಾಮೀಣ ಭಾಗದ ಬಡಜನರಿಗೆ ಹೃದಯಾಘಾತ ಆಗುತ್ತಿತ್ತು. ಅವರಿಗೆ ತಕ್ಷಣದ ಚಿಕಿತ್ಸೆ ನೀಡುವುದು ಕಷ್ಟ ಆಗುತ್ತಿತ್ತು. ಹಾಗಾಗಿ ಜನೌಷಧಿ ಕೇಂದ್ರದಲ್ಲಿ ಇಸಿಜಿ ಮೆಶೀನ್ ಹಾಕಿದೆ" ಎಂದು ವಿವರಿಸಿದರು.

ಎಚ್ಐವಿ ಸೋಂಕಿತರಿಗೆ 5 ಲಕ್ಷ ರೂವರೆಗೆ ಉಚಿತ ಔಷಧಿಎಚ್ಐವಿ ಸೋಂಕಿತರಿಗೆ 5 ಲಕ್ಷ ರೂವರೆಗೆ ಉಚಿತ ಔಷಧಿ

ECG Testing In Janaushadhi Kendra Modi Appreciated The Move

"ಜನೌಷಧಿ ಕೇಂದ್ರದಲ್ಲಿ ಇಸಿಜಿ ಮೆಶಿನ್ ಹಾಕಿದಾಗ ಆರಂಭದಲ್ಲಿ ಜನರು ನನಗೆ ಹುಚ್ಚು ಎಂದರು. ಆದರೆ ನನಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯವಾಗಿತ್ತು. ಆರು ಕಡೆ ಇಸಿಜಿ ಮೆಶಿನ್ ಅಳವಡಿಸಿದೆ ಇದರ ಫಲಾನುಭವಿಗಳ ಸಂತೋಷ ಕಂಡರೆ ಸಾರ್ಥಕ ಅನುಭವ ಆಗುತ್ತದೆ. ಈ ಮೂಲಕ ನೂರು ಹೃದಯಾಘಾತವಾಗುವ ಪ್ರಕರಣ ಪತ್ತೆ ಮಾಡಿದ್ದೇವೆ, ರೋಗಿಗಳ ಜೀವ ಉಳಿಸಿದ್ದೇವೆ" ಎಂದು ಪ್ರಧಾನಿಗೆ ಮಾಹಿತಿ ನೀಡಿದರು.

 ಜನೌಷಧಿ ಅಂಗಡಿಗಳಲ್ಲಿ ಆಯುರ್ವೇದ ಔಷಧಗಳ ಲಭ್ಯತೆ: ಸದಾನಂದ ಗೌಡ ಜನೌಷಧಿ ಅಂಗಡಿಗಳಲ್ಲಿ ಆಯುರ್ವೇದ ಔಷಧಗಳ ಲಭ್ಯತೆ: ಸದಾನಂದ ಗೌಡ

"ಜನೌಷಧಿ ಸೇವೆ ಉದ್ಯೋಗದ ಉತ್ತಮ ಸಂದೇಶ ನೀಡಿದೆ. ಓರ್ವ ನಿರುದ್ಯೋಗಿ ಯುವಕನಿಗೆ ಹಣ ನೀಡಿ ಜನೌಷಧ ಮಳಿಗೆ ಆರಂಭಿಸಲು ಪ್ರೇರಣೆ ನೀಡಿದೆ. ಈಗ ಆ ಕೇಂದ್ರ ಅಗ್ರಪಂಕ್ತಿಯಲ್ಲಿದೆ ಇಷ್ಟು ದೊಡ್ಡ ವೈದ್ಯನಾಗಿ ಯಾಕೆ ಜನೌಷಧಿ ಕೇಂದ್ರಗಳ ಜೊತೆ ಇದ್ದೀಯಾ? ಎಂಬ ಪ್ರಶ್ನೆ ಬರುತ್ತಿತ್ತು" ಎಂದು ಡಾ.ಪದ್ಮನಾಭ ಕಾಮತ್ ತಿಳಿಸಿದರು.

"ಮೋದಿ ಮೆಡಿಕಲ್‌ನಲ್ಲಿ ವಿಶ್ವಾಸವಿಡಿ ಎಂದೆ ಜನೌಷಧಿ ಜನೋಪಯೋಗಿ ಎನ್ನುವುದು ನನ್ನ ಅಭಿಪ್ರಾಯ" ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ, "ನಮ್ಮ‌ ಕಲ್ಪನೆಯ ಮೂರ್ತರೂಪ ನೀವು ಮಾಡಿ ತೋರಿಸಿದ್ದೀರಿ. ಓರ್ವ ಯುವಕನಿಗೆ ದಾರಿ ತೋರಿಸಿ‌ ಒಳ್ಳೆಯದು ಮಾಡಿದಿರಿ" ಎಂದು ಹೇಳಿದ ಮೋದಿ, ಇಸಿಜಿ ಆರಂಭಿಸಿದ್ದಕ್ಕೆ ಶ್ಲಾಘಿಷಿದರು.

English summary
Udupi based Dr. Padmanabha Kamath set up the ECG testing in Janaushadhi kendra. PM Narendra Modi appreciated the move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X