ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ದೌರ್ಜನ್ಯಕ್ಕೆ ಬೇಸತ್ತ ಚಾಲಕ ಆತ್ಮಹತ್ಯೆ..?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 22: ರಾತ್ರಿ ಪೊಲೀಸ್ ಠಾಣೆಗೆ ತೆರಳಿದ್ದವನು, ಮುಂಜಾನೆ ರೈಲು ಹಳಿ ಮೇಲೆ ಹೆಣವಾಗಿ ಮಲಗಿದ್ದಾನೆ. ಆತನೇ ಚಾಲಕ ವೃತ್ತಿ ಮಾಡಿಕೊಂಡಿದ್ದ ಬೈಂದೂರು ಕಿರಿಮಂಜೇಶ್ವರ ಶಾಲೆಬಾಗಿಲು ನಿವಾಸಿ ರಾಮ ಪೂಜಾರಿ.

Recommended Video

ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಅಭಿಮಾನಿ | PEJAWARA SRI | ONEINDIA KANNADA

ಆಟೋ ಹಾಗೂ ಓಮ್ನಿ ಚಾಲಕನಾಗಿದ್ದ ರಾಮನ ಮೇಲೆ ಯುವತಿಯೊಬ್ಬಳು ತನಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಪೊಲೀಸ್ ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಅನ್ವಯ ಗಂಗೊಳ್ಳಿ ಪೊಲೀಸರು ರಾಮನನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು.

ಉಡುಪಿ; ಜೋಡಿ ಕೊಲೆ ಆರೋಪಿಗೆ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್ಉಡುಪಿ; ಜೋಡಿ ಕೊಲೆ ಆರೋಪಿಗೆ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ಬಳಿಕ ಅಲ್ಲಿಂದ ಕುಂದಾಪುರ ಎಎಸ್ಪಿ ಕಚೇರಿಗೆ ಕರೆದೊಯ್ದು ತಡರಾತ್ರಿಯವರೆಗೂ ವಿಚಾರಣೆ ಕೂಡ ನಡೆಸಿದ್ದರು. 6 ಗಂಟೆಗೆ ರಾಮನ ಸೋದರನಿಗೆ ಕರೆ ಮಾಡಿದ ಪೊಲೀಸರು ಬೈಂದೂರು ಪೊಲೀಸ್ ಠಾಣೆಗೆ ಬಂದು ಆತನನ್ನು ಕರೆದೊಯ್ಯಲು ತಿಳಿಸಿದ್ದರಂತೆ.

Driver Suicide Over Police Brutality In Byndoor?

ಅಂತೆಯೇ ಸೋದರ ಅಲ್ಲಿಗೆ ತೆರಳಿ ತಡರಾತ್ರಿ ಸುಮಾರು 11.30ಕ್ಕೆ ರಾಮನನ್ನು ಮನಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಬೆಳಿಗ್ಗೆ ಮನೆಯಿಂದ ರಾಮ ಕಾಣೆಯಾಗಿದ್ದು, ಮುಂಜಾನೆ 7.30ರ ಸುಮಾರಿಗೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರು ಕಿರಿಮಂಜೇಶ್ವರ ಕಳ್ಳಂಗಡಿ ರೈಲು ಹಳಿ ಬಳಿ ರಾಮನ ಶವವೊಂದು ಪತ್ತೆಯಾಗಿದೆ.

ಹಿರಿಯೂರಿನಲ್ಲಿ ಅಪಘಾತ; ಬರಲಿಲ್ಲ ಆಂಬುಲೆನ್ಸ್, ನರಳುತ್ತಿದ್ದವನ ನೋಡುತ್ತಾ ನಿಂತ ಜನಹಿರಿಯೂರಿನಲ್ಲಿ ಅಪಘಾತ; ಬರಲಿಲ್ಲ ಆಂಬುಲೆನ್ಸ್, ನರಳುತ್ತಿದ್ದವನ ನೋಡುತ್ತಾ ನಿಂತ ಜನ

ರಾಮನ ಆತ್ಮಹತ್ಯೆ ವಿಚಾರ ಸುದ್ದಿಯಾಗುತ್ತಿದ್ದಂತೆ ಕುಟುಂಬಸ್ಥರು ಪೊಲೀಸ್ ರ ಮೇಲೆ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಬೈಂದೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಗಂಗೊಳ್ಳಿ ಪೊಲೀಸರು ಮಫ್ತಿಯಲ್ಲಿ ಬಂದು ರಾಮನನ್ನು ಕರೆದೊಯ್ದಿದ್ದು ಮಾತ್ರವಲ್ಲದೇ, ಒಂದಷ್ಟು ಪೊಲೀಸರು ರಾಮನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.

Driver Suicide Over Police Brutality In Byndoor?

ಪೊಲೀಸರ ದೌರ್ಜನ್ಯದಿಂದ ನೊಂದು ರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಕುಟುಂಬಸ್ಥರು ಹೇಳುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ತನಿಖೆಯ ನೆಪದಲ್ಲಿ ಮೊಬೈಲ್, ಚೈನ್ ಕಿತ್ತುಕೊಂಡು ಪೊಲೀಸ್‌ರು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರು ಸಮಗ್ರ ತನಿಖೆ ನಡೆಸಿ ಸೂಕ್ತ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ ಬಳಿಕ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು.

ಕಾನೂನು ಕೈಗೆತ್ತಿಕೊಂಡ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ರಾಮ ಪೂಜಾರಿ ವಿರುದ್ಧ ದೂರು ನೀಡಿದವರ ಪೂರ್ವಾಪರ ವಿಚಾರಣೆ ನಡೆಸಬೇಕು. ರಾಮ ಪೂಜಾರಿಯದ್ದು ಆತ್ಮಹತ್ಯೆಯೇ ಆಗಿದ್ದರೆ ಅದಕ್ಕೆ ಪ್ರಚೋದನೆ ನೀಡಿದವರ ಮೇಲೆ ಕ್ರಮ ಜರುಗಿಸಬೇಕು. ತಮಗೆ ಸೂಕ್ತ ನ್ಯಾಯ ಒದಗಿಸುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಕುಟುಂಬ ಸದಸ್ಯರು ಪಟ್ಟು ಹಿಡಿದರು.

ಸ್ಥಳಕ್ಕೆ ಬಂದ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ ಬಳಿಕ ಮಧ್ಯಾಹ್ನ 2.30ರ ಸುಮಾರಿಗೆ ಶವವನ್ನು ಆಂಬುಲೆನ್ಸ್ ಮೂಲಕ ಘಟನಾ ಸ್ಥಳದಿಂದ ಆಸ್ಪತ್ರೆಗೆ ರವಾನಿಸಲಾಯಿತು.

English summary
Rama Poojari, who had gone to the police inquiry, committed suicide in the morning This happened near Bydooru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X