ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿಸೆಸ್ ಯೂನಿವರ್ಸಲ್‌ ಗೆ ಉಡುಪಿಯ ಡಾ.ಪದ್ಮಾ ಗಡಿಯಾರ್ ಆಯ್ಕೆ

|
Google Oneindia Kannada News

ಉಡುಪಿ ಫೆಬ್ರವರಿ 17: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಉಡುಪಿಯ ಮಹಿಳೆಯೊಬ್ಬರು ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದಿದು ಗಮನ ಸೆಳೆದಿದ್ದಾರೆ.

ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ ಡಾ.ಪದ್ಮಾ ಗಡಿಯಾರ್ ಬ್ರಿಸ್ಬೇನ್‌ನಲ್ಲಿ 2018 ಅಕ್ಟೋಬರ್ ತಿಂಗಳಲ್ಲಿ ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಗೆದ್ದಿದ್ದರು.

ಇದೀಗ ಇದೇ ಬರುವ ಆಗಸ್ಟ್‌ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು, ಕಿರಿಟ ಮುಡಿಗೇರಿಸಿಕೊಳ್ಳುವ ನಿರೀಕ್ಷೆ ಹುಟ್ಟಿಸಿದ್ದಾರೆ.

ಲಿವನ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಶ್ರುತಿ ಹರಿಹರನ್ ಮೋಡಿ ನೋಡಿಲಿವನ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಶ್ರುತಿ ಹರಿಹರನ್ ಮೋಡಿ ನೋಡಿ

ಡಾ ಪದ್ಮಾ ಡಿಗ್ರಿ ಕಂಪ್ಲೀಟ್ ಮಾಡೋ ಹೊತ್ತು ಅಪಾರ ಕನಸುಗಳನ್ನು ಹೊತ್ತು ಸುಂದರ ಕಲ್ಪನೆಯ ಲೋಕ ಸೃಷ್ಟಿಸಿಕೊಂಡಿದ್ದರು . ನೋಡೋಕೆ ಸುಂದರವಾಗಿದ್ದಪದ್ಮಾ ಅವರಿಗೆ ದೂರದ ಮುಂಬಯಿಯಿಂದ ಒಳ್ಳೆ ಸಂಬಂಧ ಬಂತು. ತಡಮಾಡೋದೇಕೆ ಅಂತಾ ಅಪ್ಪ ಅಮ್ಮ ಮದುವೆ ಮಾಡಿಸಿದರು.

ಬಾಲ್ಯದಲ್ಲಿ ಮಾಡೆಲ್ ಆಗ್ಬೇಕು ಅನ್ನೊ ಕನಸು ಹೊತ್ತವಳಿಗೆ ಪೋಷಕರ ಆಸೆಗೆ ತಣ್ಣೀರು ಹಾಕೋ ಮನಸ್ಸು ಇರಲಿಲ್ಲ. ಮುಂದೆ ಓದಿ

ಮಿಸೆಸ್ ಯುನಿವರ್ಸಲ್ ಗೆ ಆಯ್ಕೆ

ಮಿಸೆಸ್ ಯುನಿವರ್ಸಲ್ ಗೆ ಆಯ್ಕೆ

ಪೋಷಕರ ಇಚ್ಛೆಯಂತೆ ಮದುವೆ ಆದ ಪದ್ಮಾಗೆ ಎರಡು ಮಕ್ಕಳು ಆದ ಮೇಲೆಯೂ ತನ್ನ ಕನಸುಗಳಿಗೆ ಸಾಕಾರ ರೂಪ ನೀಡುವ ನಿಟ್ಟಿನಲ್ಲಿ ದಾಪುಗಾಲಿಟ್ಟು, ಈಗ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಯುನಿವರ್ಸಲ್ ಗೆ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ

ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ

ಇಂದ್ರಾಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಜಿಎಂ ಕಾಲೇಜಿನಲ್ಲಿ ಪಿಯುಸಿ, ದಂತ ವೈದ್ಯಕೀಯ ಶಿಕ್ಷಣವನ್ನು ಮಂಗಳೂರಿನ ಯೇನೆಪೋಯ ವಿಶ್ವವಿದ್ಯಾಲಯದಲ್ಲಿ ಪಡೆದಿರುವ ಡಾ.ಪದ್ಮಾ ದಂತ ವೈದ್ಯೆಯಾಗಿದ್ದು, ಪತಿ ಡಾ.ಸನಯ್ ಗಡಿಯಾರ್ ಕೂಡ ವೈದ್ಯರು. ಪುತ್ರಿ ಸಮಾ, ಪುತ್ರ ಶಯನ್ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

ಫ್ಯಾಷನ್ ಕೊರಿಯೋಗ್ರಾಫರ್ ತುಳುನಾಡಿನ ದೈವಪಾತ್ರಿ ಆದ ಕಥೆಫ್ಯಾಷನ್ ಕೊರಿಯೋಗ್ರಾಫರ್ ತುಳುನಾಡಿನ ದೈವಪಾತ್ರಿ ಆದ ಕಥೆ

ತವರು ಮನೆಯಿಂದಲೂ ಪ್ರೋತ್ಸಾಹ

ತವರು ಮನೆಯಿಂದಲೂ ಪ್ರೋತ್ಸಾಹ

ಮದುವೆಯಾದ ಹೊತ್ತಿಗೆ ದಢೂತಿಯಾಗಿದ್ದ ಪದ್ಮ ಸಾಕಷ್ಟು ವರ್ಕೌಟ್ ಮಾಡಿ ರೆಡಿಯಾಗ್ತಿದ್ದಾರೆ. "ನನ್ನ ಸಾಧನೆಗೆ ಗಂಡನ ಮನೆಯವರು ಪ್ರೋತ್ಸಾಹ ನೀಡಿದ್ದು,ಇವಾಗ ತವರು ಮನೆಯಿಂದಲೂ ಪ್ರೋತ್ಸಾಹ ದೊರೆಯುತ್ತಿದೆ" ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಪದ್ಮಾ.

ವೈದ್ಯರಾಗಿ ಕರ್ತವ್ಯ ನಿರ್ವಹಣೆ

ವೈದ್ಯರಾಗಿ ಕರ್ತವ್ಯ ನಿರ್ವಹಣೆ

ಕಳೆದ 11ವರ್ಷದಿಂದ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮ ಗಡಿಯಾರ್, ಬಾಲ್ಯದಲ್ಲಿ ಕಂಡ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. "ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿ ಆಗಬಾರದು. ಮನಸ್ಸಲ್ಲಿ ದೃಢ ನಿರ್ಧಾರ ಇರಬೇಕಷ್ಟೆ ಎನ್ನುತ್ತಾರೆ ಪದ್ಮಾ.

ಬೆಂಗಳೂರಿನಲ್ಲಿ ನನ್ನ ಹೃದಯ ನೆಲೆಸಿದೆ : ಕೃತಿಬೆಂಗಳೂರಿನಲ್ಲಿ ನನ್ನ ಹೃದಯ ನೆಲೆಸಿದೆ : ಕೃತಿ

English summary
Udupi based Padma Gadiyar crowned Mrs South India Universal in competition held in Australia. Now she selected for Mrs Universal will be held in Mexico.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X