ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯಿಂದ ವೃದ್ಧರಿಗೆ ಕೊರೊನಾ ಹೆಲ್ಪ್ ಲೈನ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 28: ಉಡುಪಿಯ ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯು ಕಳೆದ ವರ್ಷದ ಕೊರೊನಾ ಸಂದರ್ಭದಂತೆ ಈ ಬಾರಿಯೂ ಸಂಕಷ್ಟದಲ್ಲಿರುವ ವೃದ್ಧರು ಮತ್ತು ಅಸಹಾಯಕರಿಗೆ 24/7 ಹೆಲ್ಪ್ ಲೈನ್ ಸಹಾಯವಾಣಿಯನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದೊಂದಿಗೆ ಆರಂಭಿಸಿದೆ.

ಈ ಸಹಾಯವಾಣಿಯ ಭಾಗವಾಗಿ ವೃದ್ಧರು, ಅಸಹಾಯಕರಿಗೆ ಉಡುಪಿ ಜಿಲ್ಲೆಯಾದ್ಯಂತ ಅವರವರ ಪ್ರದೇಶದಲ್ಲಿ ಸಹಾಯ ಒದಗಿಸಲು ಸ್ವಯಂಸೇವಕರನ್ನು ನೋಂದಾಯಿಸಿಕೊಳ್ಳಲು ತೀರ್ಮಾನಿಸಿದೆ. ಹೆಲ್ಪ್ ಲೈನ್ ಸಂಖ್ಯೆ - 9538886293 ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ.ಪಿ.ವಿ ಭಂಡಾರಿಯವರು ತಿಳಿಸಿರುತ್ತಾರೆ.

ಕೊರೊನಾ ಸೋಂಕಿನ ಕಾರಣಕ್ಕೆ ಭಯ, ಆತಂಕಗಳಿರುವವರು, ಖಚಿತ ಮಾಹಿತಿಗಳಿಲ್ಲದಿರುವವರು ಕೂಡ ಈ ಹೆಲ್ಪ್ ಲೈನ್ ಸಹಾಯ ಪಡೆಯಬಹುದೆಂದು ಡಾ.ಪಿ.ವಿ ಭಂಡಾರಿಯವರು ತಿಳಿಸಿದ್ದಾರೆ.

Udupi: Dr.AV Baliga Memorial Hospital Launches Covid-19 Helpline For Elders

ಕೊರೊನಾ ರೋಗಸ್ಥಿತಿ ಗಂಭೀರವಾಗುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಭಯ, ಆತಂಕಗಳು ಅಥವಾ ಗೊಂದಲಗಳು ಉಂಟಾಗದಂತೆ ವೈದ್ಯಕೀಯ ಸೌಲಭ್ಯಗಳು, ಜಿಲ್ಲಾಡಳಿತ ಮತ್ತು ವಿವಿಧ ಸರಬರಾಜುದಾರರ ನಡುವೆ ಸಂವಹನ ಬಿಂದುವಾಗಿ ಕಾರ್ಯಾಚರಿಸುವ ಉದ್ದೇಶವನ್ನು ಈ ಹೆಲ್ಪ್ ಲೈನ್ ಹೊಂದಿದೆ.

Udupi: Dr.AV Baliga Memorial Hospital Launches Covid-19 Helpline For Elders

Recommended Video

ಅಡುಗೆ ಮನೆಯಲ್ಲಿ ಆರೋಗ್ಯ..! ಸುಲಭದಲ್ಲಿ ಸಿಗುವ ಈ ಆಹಾರ ಆರೋಗ್ಯವೃದ್ಧಿಗೆ ಸಹಾಯಕ | Oneindia Kannada

ಮನೆಗಳಲ್ಲಿ ಏಕಾಂಗಿಯಾಗಿದ್ದು ಅಥವಾ ಸುರಕ್ಷತೆಯ ಕಾರಣಕ್ಕೆ ಹೊರಗೆ ತೆರಳಲು ಆಗದ ವೃದ್ಧರು, ಕೊರೊನಾ ಕಾರಣಕ್ಕೆ ಐಸೊಲೇಷನ್ ನಲ್ಲಿರುವವರಿಗೆ ಅವಶ್ಯಕ ವಸ್ತುಗಳನ್ನು, ಔಷಧಿಗಳ ಕೊರತೆ ಇದ್ದರೆ ಅದನ್ನು ತಂದುಕೊಡುವ ಅಥವಾ ಅವರ ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಮತ್ತು ಅವರಿಗೆ ಧೈರ್ಯ ತುಂಬುವ ಜವಾಬ್ದಾರಿ ತೆಗೆದುಕೊಳ್ಳಲು ಆಸಕ್ತಿ ಇರುವ ಯುವಕ ಯುವತಿಯರು ಸ್ವಯಂಸೇವಕರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9538886291/9538886293 ಗೆ ಸಂಪರ್ಕಿಸಬಹುದು.

English summary
Dr. AV Baliga Memorial Hospital has launched 24/7 Helpline for the Elder and Poor People amid Coronavirus crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X