ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲ್ಲೂರು: ರೋಪ್ ವೇ ಯೋಜನೆ ಡಿಪಿಆರ್ ತಯಾರಿಗೆ ಚಾಲನೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 15: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ರೋಪ್ ವೇ ಯೋಜನೆಯ ಡಿಪಿಆರ್ ‌ಗೆ ಚಾಲನೆ ನೀಡುವ ಕಾರ್ಯಕ್ರಮ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯಿತು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ದೀಪ ಬೆಳಗಿಸಿ ಡಿಪಿಆರ್ ತಯಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಇದು ಮಹತ್ವಾಕಾಂಕ್ಷಿ ಯೋಜನೆ. ಈ ಹಿಂದೆಯೇ ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ಕಲ್ಪಿಸುವ ಬಗ್ಗೆ ಕನಸು ಕಂಡಿದ್ದೆ. ಅದಕ್ಕೀಗ ಸಂಸದ ಬಿ.ವೈ ರಾಘವೇಂದ್ರ ಅವರು ಜೀವ ನೀಡುತ್ತಿದ್ದಾರೆ. 6-8 ಕಿ.ಮೀ ಉದ್ದ ಇರುವ ಈ ರೋಪ್ ವೇ ಭಾರತದಲ್ಲಿಯೇ ಅತೀ ಉದ್ದವಾದ ರೋಪ್ ‍ವೇ ಎನಿಸಿಕೊಳ್ಳಲಿದೆ. ಯುರೋಪಿಯನ್ ಮಾದರಿಯಲ್ಲಿ ಈ ಯೋಜನೆ ರೂಪುಗೊಳ್ಳಲಿದೆ. ಇದರಿಂದ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ಭಾಗದ ಅಭಿವೃದ್ದಿಗೂ ಪೂರಕವಾಗಲಿದೆ" ಎಂದು ತಿಳಿಸಿದರು.

DPR Started To The Ropeway Project Between Kolluru Mookambika Temple And Kodachadri

ಕೊಲ್ಲೂರು-ಕೊಡಚಾದ್ರಿ ನಡುವೆ ಕೇಬಲ್ ಕಾರ್ ಸಂಪರ್ಕ..!ಕೊಲ್ಲೂರು-ಕೊಡಚಾದ್ರಿ ನಡುವೆ ಕೇಬಲ್ ಕಾರ್ ಸಂಪರ್ಕ..!

Recommended Video

Aditya Alva ಯಾರು , Drugs ಪ್ರಕರಣಕ್ಕೂ ಇವರಿಗೂ ಏನು ಸಂಬಂಧ | Oneindia Kannada

ರೋಪ್ ‍ವೇ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಕೊಡಚಾದ್ರಿಯ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಕೊಡಚಾದ್ರಿ, ಸರ್ವಜ್ಞ ಪೀಠವನ್ನು ನೋಡಲು ಅನುಕೂಲವಾಗುತ್ತದೆ ಎಂದ ಅವರು, ರೋಪ್ ವೇ ಆಗುವುದರಿಂದ ಜೀಪ್ ಚಾಲಕರು, ಮಾಲೀಕರು ಆತಂಕ ಪಡಬೇಕಾಗಿಲ್ಲ. ರೋಪ್ ವೇ ಸ್ಥಳದ ತನಕ ಹೋಗಲು ಜೀಪ್ ‍ಗಳ ಅವಶ್ಯಕತೆ ಇರುತ್ತದೆ. ಪ್ರವಾಸೋದ್ಯಮ ಅಭಿವೃದ್ದಿಯಾದಂತೆ ಅವಕಾಶಗಳೂ ಸೃಷ್ಟಿಯಾಗುತ್ತವೆ ಎಂದು ಭರವಸೆ ನೀಡಿದರು.

ಈ ರೋಪ್ ವೇ ಯೋಜನೆ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯುಪಿಐಎಲ್ ಸಂಸ್ಥೆ ಮೂಲಕ ಅನುಷ್ಠಾನವಾಗಲಿದೆ.

English summary
Drive to the DPR for the ropeway project to facilitate easy connectivity from Kollur Mookambika Temple to Kodachadri Hill, was held today at Kolluru Mookambika Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X