ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲ್ಲೂರು ಮೂಕಾಂಬಿಕೆ ಭಕ್ತರಿಗೆ ಪೊಲೀಸರ ಮನವಿ ಏನು?

|
Google Oneindia Kannada News

ಉಡುಪಿ, ನವೆಂಬರ್ 26 : ಕೊಲ್ಲೂರು ಮೂಕಾಂಬಿಕ ದೇವಾಲಯದ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಅನ್ನು ದುಷ್ಕರ್ಮಿಗಳು ಆರಂಭಿಸಿದ್ದಾರೆ. ಅದನ್ನು ಬಳಕೆ ಮಾಡಿ, ಹಣ ಪಾವತಿ ಮಾಡಬೇಡಿ ಎಂದು ಪೊಲೀಸರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

ದೇವಾಲಯದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ರೂಪಿಸಿ ಭಕ್ತರಿಂದ ಹಣ ಸಂಗ್ರಹ ಮಾಡಿದ ಬಗ್ಗೆ ದೂರುಗಳು ಬಂದಿವೆ. ಇಂತಹ ಅನಧಿಕೃತ ವೆಬ್‌ಸೈಟ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಭಕ್ತರಿಗೆ ಸೂಚನೆ ನೀಡಿದ್ದಾರೆ.

 ಕೊಲ್ಲೂರು ಕ್ಷೇತ್ರದಲ್ಲಿ ವಿಜಯದಶಮಿ; ಸಾವಿರಾರು ಮಕ್ಕಳಿಗೆ ವಿದ್ಯಾರಂಭ ಕೊಲ್ಲೂರು ಕ್ಷೇತ್ರದಲ್ಲಿ ವಿಜಯದಶಮಿ; ಸಾವಿರಾರು ಮಕ್ಕಳಿಗೆ ವಿದ್ಯಾರಂಭ

www.mookambika.co.in ನಕಲಿ ವೆಬ್ ಸೈಟ್ ಆಗಿದೆ. ಇದರ ಮೂಲಕ ಭಕ್ತರು ಹಣವನ್ನು ಪಾವತಿ ಮಾಡಿದ್ದಾರೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಭಕ್ತರು ಇದನ್ನು ಬಳಸಬೇಡಿ ಎಂದು ಕರೆ ನಿಡಲಾಗಿದೆ.

 ಡಿಕೆಶಿ ಸಂಕಷ್ಟ ನಿವಾರಣೆಗೆ ಕೊಲ್ಲೂರು ಮೂಕಾಂಬಿಕೆಯಲ್ಲಿ ಚಂಡಿಕಾ ಹೋಮ! ಡಿಕೆಶಿ ಸಂಕಷ್ಟ ನಿವಾರಣೆಗೆ ಕೊಲ್ಲೂರು ಮೂಕಾಂಬಿಕೆಯಲ್ಲಿ ಚಂಡಿಕಾ ಹೋಮ!

Dont Use Fake Website Of Kolluru Mookambika Temple

www.kollurmookambika.org ದೇವಾಲಯದ ಅಧಿಕೃತ ವೆಬ್ ಸೈಟ್ ಆಗಿದೆ. ಭಕ್ತರು ಈ ವೆಬ್‌ ಸೈಟ್‌ ಮಾತ್ರ ಬಳಸಬೇಕು. ದೇವಾಲಯದ ಮಾಹಿತಿ, ಎಲ್ಲಾ ಸೇವೆಗಳ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ.

 ಕೊಲ್ಲೂರು ಮೂಕಾಂಬಿಕೆಯ ದೇವಳದ ಬಾಣಸಿಗರಿಗೆ ಸಿಕ್ಕಿದೆ ಯೂನಿಫಾರ್ಮ್ ಭಾಗ್ಯ! ಕೊಲ್ಲೂರು ಮೂಕಾಂಬಿಕೆಯ ದೇವಳದ ಬಾಣಸಿಗರಿಗೆ ಸಿಕ್ಕಿದೆ ಯೂನಿಫಾರ್ಮ್ ಭಾಗ್ಯ!

ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಮೂಕಾಂಬಿಕ ದೇವಾಲಯಕ್ಕೆ ಕರ್ನಾಟಕ ಮಾತ್ರವಲ್ಲ ಪಕ್ಕದ ಕೇರಳ ರಾಜ್ಯದಲ್ಲಿಯೂ ಅಪಾರ ಭಕ್ತರಿದ್ದಾರೆ. ಪ್ರತಿನಿತ್ಯ ಸಾವಿರಾರು ಜನರು ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಾರೆ.

English summary
Don't use unofficial website of Kolluru mookambika temple, Udupi police requested the people. Some people created fake website and collected money from pilgrims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X