ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರೋಡ್ ಶೋ ಮಾಡುವವರು ಮೇ15 ರ ಬಳಿಕ ರೋಡಲ್ಲೇ ಇರಬೇಕಾಗುತ್ತೆ'

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 06: ಜಿಗ್ನೇಶ್ ಮೇವಾನಿಯನ್ನು ಮೋದಿ ಲೆವೆಲ್ ಗೆ ತರಬೇಡಿ, ಜಿಗ್ನೇಶ್ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ ಗುಜರಾತ್‌ನಲ್ಲಿ ಅವರದ್ದೇನೂ ನಡೆಯಲಿಲ್ಲ. ಬಿಜೆಪಿಯದ್ದು ಅಭಿವೃದ್ಧಿಯ ಮಂತ್ರ. ಜಿಗ್ನೇಶ್, ಹಾರ್ದಿಕ್, ಅಲ್ಪೇಶ್ ಸಮಾಜ ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥುರ್ ಹೇಳಿದ್ದಾರೆ.

ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಆವರು ಸುದ್ದಿಗಾರರ ಜೊತೆ ಮಾತನಾಡಿದರು. ಮೋದಿಯನ್ನು ವಿಶ್ವವೇ ನಾಯಕ ಅಂತ ಒಪ್ಪಿಕೊಂಡಿದೆ. ಮೇ 15 ರ ನಂತರ ಜನ ಯಾರ ಬಳಿ ಇದ್ದಾರೆಂದು ಗೊತ್ತಾಗುತ್ತದೆ ಕರ್ನಾಟಕದ ಜನತೆ ಮೋದಿಯ ಮೇಲೆ ಭರವಸೆ ಇಟ್ಟಿದ್ದಾರೆ ಎಂದು ಹೇಳಿದರು.

ಮೇ 15ರ ಬಳಿಕ ಕಾಂಗ್ರೆಸ್ ತೆರೆದಿದ್ದ ಮಾಫಿಯಾ ಅಂಗಡಿಗಳು ಬಂದ್: ಮೋದಿಮೇ 15ರ ಬಳಿಕ ಕಾಂಗ್ರೆಸ್ ತೆರೆದಿದ್ದ ಮಾಫಿಯಾ ಅಂಗಡಿಗಳು ಬಂದ್: ಮೋದಿ

ಸಿದ್ದರಾಮಯ್ಯ ರೋಡ್ ಶೋಗೆ ಲೇವಡಿ ಮಾಡಿದ ಮಾಥುರ್, ಸಿಎಂ ಸಿದ್ದರಾಮಯ್ಯ ಮೇ15ರ ನಂತರ ರೋಡಲ್ಲೇ ಇರ್ಬೇಕಾಗುತ್ತೆ. ಕಾಂಗ್ರೆಸ್‌ಗೆ ರೋಡ್ ಶೋ ಅನಿವಾರ್ಯ ಇರಬಹುದು. ಯುಪಿಯಲ್ಲೂ ಕಾಂಗ್ರೆಸ್ ಇಂತದ್ದೇ ರೋಡ್ ಶೋ ಮಾಡಿತ್ತು. ಎಷ್ಟೇ ರೋಡ್ ಶೋ ಮಾಡಿದರೂ ನಮಗೆ ಚಿಂತೆಯಿಲ್ಲ. ಯುಪಿಯಲ್ಲಿ ಅಖಿಲೇಶ್-ರಾಹುಲ್ ಗಾಂಧಿ ಸಿಕ್ಕಾಪಟ್ಟೆ ರೋಡ್ ಶೋ ಮಾಡಿದ್ದರು ಆದರೆ ಸೋತರು ಎಂದರು.

Dont compare Jignesh Mevani with Modi: Prakash Mathur

ನರೇಂದ್ರ ಮೋದಿ ರ್ಯಾಲಿಗೆ ರಾಜ್ಯವ್ಯಾಪಿ ಜನಮೆಚ್ಚುಗೆ ಗಳಿಸಿದೆ. ಲಕ್ಷಾಂತರ ಜನ ಮೋದಿಯನ್ನು ಬೆಂಬಲಿಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಜನ ಬೆಂಬಲ ಸಿಕ್ಕಿದೆ ಎಂದು ಹೇಳಿದರು. ಚುನಾವಣಾ ಪೂರ್ವ ಸರ್ವೆಗಳು ಸುಳ್ಳಾಗಲಿವೆ ಎಂದ ಅವರು, ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದರು.

ಮೋದಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ, ಜಿಗ್ನೇಶ್ ಮೇಲೆ ದೂರುಮೋದಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ, ಜಿಗ್ನೇಶ್ ಮೇಲೆ ದೂರು

English summary
BJP national vice president Om Prakash Mathur said 'don't compare Jignesh Mevani to Narendra Modi, Jinesh Mevani's influence not work in Gujarat, He, Alpesh and Hardik trying to divide Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X