ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಕಣ್ಣಿನ ಒಳಗೆ ಇತ್ತು 15 ಸೆ.ಮೀಟರ್ ಉದ್ದದ ಜೀವಂತ ಹುಳು

|
Google Oneindia Kannada News

ಉಡುಪಿ, ಅಕ್ಟೋಬರ್ 02: ವ್ಯಕ್ತಿಯೊಬ್ಬರ ಕಣ್ಣಿನಲ್ಲಿತ್ತು 15 ಸೆಂಟಿ ಮೀಟರ್ ಉದ್ದದ ಜೀವಂತ ಹುಳು...! ಬೆಚ್ಚಿ ಬಿದ್ದಿರಾ? ಇಂತಹದೊಂದು ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.

60 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ದರು. ಈ ಪರಿಣಾಮ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರಿನ ನೇತ್ರತಜ್ಞರಾದ ಡಾ.ಶ್ರೀಕಾಂತ್ ಶೆಟ್ಟಿಯವರಿಗೆ ತೋರಿಸಿದ್ದಾರೆ.

ಇದೆಂಥಾ ವಿಚಿತ್ರ..? ಬಾಲಕಿಯ ಕಣ್ಣಿನಿಂದ ಬರುತ್ತಿವೆ ಕಲ್ಲುಗಳು!ಇದೆಂಥಾ ವಿಚಿತ್ರ..? ಬಾಲಕಿಯ ಕಣ್ಣಿನಿಂದ ಬರುತ್ತಿವೆ ಕಲ್ಲುಗಳು!

ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಒಂದೊಮ್ಮೆ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ಆ ಹಿರಿಯ ವ್ಯಕ್ತಿಯ ಬಲಗಣ್ಣಿನ ಒಳಗೆ ಜೀವಂತ ಹರಿದಾಡುತ್ತಿರುವ ಹುಳು ಪತ್ತೆಯಾಗಿದೆ. ಕಣ್ಣಿನ ಒಳಗಿರುವ ಹುಳವನ್ನು ಔಷಧಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ ಊತ ಬಂದು ದೃಷ್ಟಿಗೆ ತೊಂದರೆ ಆಗುವ ಸಾಧ್ಯತೆ ಇದ್ದ ಕಾರಣ, ಆ ಹುಳವನ್ನು ಒಂದು ಕಡೆ ಬರುವಂತೆ ಮಾಡಿ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜೀವಂತ ಹುಳವನ್ನು ತೆಗೆದಿದ್ದಾರೆ. ಈ ಹುಳು 15 ಸೆ ಮೀ ಉದ್ದವಿದೆ.

Doctors remove 15 cm worm from the eye of an old man in Udupi

ಸ್ಮಾರ್ಟ್‌ಫೋನ್‌ಗಳಿಂದಾಗಿ ಬತ್ತಿಹೋಗುತ್ತಿದೆ ಕಣ್ಣೀರು!ಸ್ಮಾರ್ಟ್‌ಫೋನ್‌ಗಳಿಂದಾಗಿ ಬತ್ತಿಹೋಗುತ್ತಿದೆ ಕಣ್ಣೀರು!

ಈ ಹುಳವು 'ವುಚೆರಿಯಾ ಬ್ಯಾನ್ಕ್ರಾಫ್ಟಿ' ಎನ್ನುವ ಜಾತಿಯದಾಗಿದ್ದು ಇದು ಸೊಳ್ಳೆಗಳ ಮೂಲಕ ಹರಡುತ್ತದೆ. ಸೊಳ್ಳೆಗಳು ಕಚ್ಚಿದಾಗ ಇದರ ಲಾರ್ವಾ ರಕ್ತದಲ್ಲಿ ಸೇರಿ ಅಲ್ಲೇ ಬೆಳೆದು ಮೊಟ್ಟೆಯನ್ನಿಡುತ್ತವೆ. ಅಪರೂಪಕ್ಕೆ ಈ ಮೊಟ್ಟೆಗಳು ಕಣ್ಣಿನಲ್ಲಿ ಸೇರಿ ಅಲ್ಲೇ ಬೆಳೆದು ಹುಳುವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ. ಹುಳ ತೆಗೆದ ನಂತರ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

English summary
In Udupi a old man admitted to hospital for eye pain when doctor checked they found 15 cm long live worm in his eye. doctors operated eye and removed worm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X