• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಯೋಧ್ಯೆ ಭೂಮಿಪೂಜೆ ಸಂದರ್ಭ ಮನೆಗಳಲ್ಲೇ ಶ್ರೀರಾಮ ನಾಮ ಪಠಿಸಿ: ಪೇಜಾವರ ಶ್ರೀ

By ಉಡುಪಿ ಪ್ರತಿನಿಧಿ
|

ಉಡುಪಿ, ಆಗಸ್ಟ್ 02: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಇದೇ ತಿಂಗಳ ಐದನೇ ತಾರೀಕಿನಂದು ಐತಿಹಾಸಿಕ ಭೂಮಿಪೂಜೆ ನಡೆಯಲಿದೆ. ಅಂದು ಕೋಟ್ಯಂತರ ಆಸ್ತಿಕರ ಬಹುಕಾಲದ ಕನಸು ನನಸಾಗಲಿದೆ ಎಂದು ರಾಮಜನ್ಮ ಭೂಮಿ ಟ್ರಸ್ಟ್ ನ ಟ್ರಸ್ಟಿಯಾಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ನೀಲಾವರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಗಳು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಐದನೇ ತಾರೀಕಿನಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಒಂದು ಐತಿಹಾಸಿಕ ಭೂಮಿಪೂಜೆಯನ್ನು ನೆರವೇರಿಸಲಿದ್ದಾರೆ. ಕೊರೊನಾದಿಂದಾಗಿ ನಮಗೆಲ್ಲ ದೈಹಿಕವಾಗಿ ಭಾಗವಹಿಸಲು ಸಾಧ್ಯ ಆಗದು. ಆದರೆ, ಈ ಕಾರ್ಯಕ್ರಮದ ನೇರಪ್ರಸಾರವನ್ನು ನಾವು ಇದ್ದ ಸ್ಥಳದಿಂದಲೇ ವಿಕ್ಷಣೆ ಮಾಡಿ ಭಾಗವಹಿಸೋಣ ಎಂದರು.

ಕೊರೊನಾದಿಂದ ಹೊರಬಂದ ಪುತ್ತಿಗೆ ಮಠಾಧೀಶ: ಕೆಎಂಸಿಯಿಂದ ಡಿಸ್ಚಾರ್ಜ್

ಈ ಸಂಧರ್ಭದಲ್ಲಿ ನಮ್ಮ ನಮ್ಮ ಮನೆಗಳಲ್ಲಿ ಭಜನೆ, ಜಪ ತಪಗಳನ್ನು ಆಚರಿಸಿ ಶ್ರೀರಾಮನಾಮ ಜಪವನ್ನು ಪಠಿಸಿ ನಮ್ಮ ಮನೆಯ ಮೇಲ್ಗಡೆ ಭಗವಾಧ್ವಜವನ್ನು ಹಾರಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ದೇಶದ ಬಂಧುಗಳೆಲ್ಲರೂ ಭಾಗವಹಿಸೋಣ ಎಂದು ಕರೆ ನೀಡಿದರು.

ರಾಮಮಂದಿರಕ್ಕೆ ಅಂಜನಾದ್ರಿ ಕಲ್ಲು: ಪೇಜಾವರ ಶ್ರೀಗಳ ಮೂಲಕ ಅಯೋಧ್ಯೆಗೆ

ರಾಮ ಮಂದಿರ ನಿರ್ಮಾಣದಲ್ಲಿ ದೇಶದ ಎಲ್ಲಾ ಭಕ್ತರ ಪಾಲು ಇರಬೇಕು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರು 10 ರುಪಾಯಿಗಳನ್ನು ಹಾಗೂ ಪ್ರತಿ ಮನೆಯಿಂದ 101 ರುಪಾಯಿಗಳನ್ನು ಸಂಗ್ರಹಿಸಿ ನೀಡಲು ನಿರ್ಧರಿಸಲಾಗಿದೆ ಎಂದು‌ ಮಾಹಿತಿ ನೀಡಿದರು.

English summary
The historic land worship will be held on the fifth date of the August for the construction of the Srirama Mandir in Ayodhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X