ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದ್ಧೂರಿ ಜಾತ್ರೆ, ಉತ್ಸವ, ಧಾರ್ಮಿಕ ಆಚರಣೆಗೆ ಉಡುಪಿ ಜಿಲ್ಲಾಧಿಕಾರಿ ಬ್ರೇಕ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 30: ಉಡುಪಿ ಜಿಲ್ಲೆಯಲ್ಲಿ ಅದ್ಧೂರಿ ಜಾತ್ರೆ, ಉತ್ಸವ, ಧಾರ್ಮಿಕ ಆಚರಣೆಗೆ ಉಡುಪಿ ಜಿಲ್ಲಾಡಳಿತ ಬ್ರೇಕ್ ಆಗಿದ್ದು, ಸರಳ ಆಚರಣೆಗೆ ಮಾತ್ರ ಸೀಮಿತವಾಗಿರಬೇಕು ಎಂದು ಆದೇಶಿಸಿದೆ.

ಜಿಲ್ಲೆಯಲ್ಲಿ ಧಾರ್ಮಿಕ ಉತ್ಸವದ ನೆಪದಲ್ಲಿ ಮನೋರಂಜನೆಗೆ ಇರುವುದಿಲ್ಲ. ಈ ಬಾರಿ ಉಡುಪಿ ಉತ್ಸವಕ್ಕೆ ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ: ಜಾತ್ರೆ, ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಡಿಸಿ ಆದೇಶದಕ್ಷಿಣ ಕನ್ನಡ: ಜಾತ್ರೆ, ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಡಿಸಿ ಆದೇಶ

ಕೋವಿಡ್ ಕಾಲದಲ್ಲಿ ವಸ್ತುಪ್ರದರ್ಶನ, ಮನೋರಂಜನೆ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು, ನಮ್ಮ ಬಳಿ ಬಂದ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದೇವೆ. ಸಿದ್ಧತೆ ಮಾಡಿದ್ದರೆ ವಾಪಾಸ್ ಕಿತ್ತುಕೊಂಡು ಹೋಗಬೇಕು ಎಂದು ಸೂಚಿಸಿದ್ದಾರೆ.

Udupi District Collector Prohibits Mass Celebration Of Religious Festivals And Fairs

ಕೋವಿಡ್ ಹೆಚ್ಚಾಗಿರುವುದರಿಂದ ಮೋಜಿನ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ. ನಾಟಕ, ಯಕ್ಷಗಾನ, ಸಿನೆಮಾ ಬ್ಯಾನ್ ಮಾಡಿಲ್ಲ. ಮದುವೆ ಸಭಾಂಗಣದಲ್ಲಿ ಕೋವಿಡ್ ನಿಯಮ ಅನುಸರಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಆಯೋಜಕರೇ ಇದರ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.

ಮಣಿಪಾಲದ ಎಂಐಟಿ ಹೊರತುಪಡಿಸಿ ಉಡುಪಿ ಜಿಲ್ಲೆಯ ಸ್ಥಿತಿ ಸುಭದ್ರವಾಗಿದ್ದು, ಎಂಐಟಿ ಕ್ಯಾಂಪಸ್ ನಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಮಣಿಪಾಲ ಎಂಐಟಿಯಲ್ಲಿ ಶೇ.15 ಪಾಸಿಟಿವಿಟಿ ಇದೆ.

ಉಡುಪಿ ಜಿಲ್ಲೆಯಲ್ಲಿ ಶೇ.2ರಷ್ಟು ಪಾಸಿಟಿವಿಟಿ ರೇಟ್ ಕಂಡು ಬಂದಿದ್ದು, ಜಿಲ್ಲೆಯ ಜನಕ್ಕೆ ಆತಂಕ ಬೇಡ ಆದರೆ, ಎಚ್ಚರಿಕೆಯಿಂದ ವರ್ತಿಸಬೇಕು. ಜನರು ಕಳೆದ ಬಾರಿಯ ಚಿತ್ರಣ ನೆನಪಿಸಿಕೊಳ್ಳಬೇಕು ಎಂದಿದ್ದಾರೆ.

Recommended Video

ಕೊರೊನಾ ಸಂಕಷ್ಟಕ್ಕೆ ಬೇಸತ್ತು ಕ್ಯಾಬ್‌ ಚಾಲಕ ಆತ್ಮಹತ್ಯೆ ಯತ್ನ! ಚಾಲಕನ ಸ್ಥಿತಿ ಗಂಭೀರ | Oneindia Kannada

ಜಿಲ್ಲೆಯ ನಾಲ್ಕು ಸಂಸ್ಥೆಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿ ಪಾಲಿಸಿ, ನಿಯಮ ಪಾಲಿಸದಿದ್ದರೆ ಎಪಿಡಮಿಕ್ ಆ್ಯಕ್ಟ್ ಅಡಿಯಲ್ಲಿ ಕ್ರಮ ಡಿಡಿಪಿಐ, ಡಿಡಿಪಿಯುಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

English summary
The Udupi district Administration Prohibits for the mass festivals and religious ceremonies in the Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X