ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಕ್ತಿಭೇದ, ಅಸ್ಪೃಶ್ಯತೆ ಆಚರಣೆ ವಿರುದ್ಧ ಧ್ವನಿ ಎತ್ತಿದ ಧರ್ಮ ಸಂಸತ್

|
Google Oneindia Kannada News

ಉಡುಪಿ, ನವೆಂಬರ್ 25: ಸರಕಾರದ ಹಿಡಿತದಲ್ಲಿರುವ ದೇವಸ್ಥಾನಗಳು ಹಿಂದೂಗಳ ಕೈಗೆ ಬರಬೇಕು. ಸಂವಿಧಾನದ ಆಶಯದಂತೆ ಅಸ್ಪೃಶ್ಯತೆ ನಿರ್ಮೂಲನವಾಗಬೇಕು. ಹೀಗೆ ಹಲವು ಸಂತರ ವಾದ ಮಂಡನೆ ಧರ್ಮ ಸಂಸತ್ ನಲ್ಲಿ ಇಂದು ನಡೆಯಿತು.

'ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು''ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು'

ಉಡುಪಿಯ ರಾಯಲ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ನ ಎರಡನೇ ದಿನ ಸಂತರಿಂದ ಬಂದಿರುವ ಆಗ್ರಹಗಳಿವು. ಇಂದು ನಡೆದ ಸಂತರ ಸಮಾಗಮದಲ್ಲಿ ಚರ್ಚಾ ಗೋಷ್ಠಿಗಳು ನಡೆದವು, ಇದರಲ್ಲಿ ಸಂತರ ವಾದ ಮಂಡನೆಯ ಪ್ರಮುಖ ಅಂಶಗಳು ಇಂತಿವೆ.

Dharma Sansad raised the voice against untouchability

* ಮಂದಿರಕ್ಕೆ ಎಲ್ಲರಿಗೂ ಪ್ರವೇಶವಿರಬೇಕು

* ಪಂಕ್ತಿಬೇಧವಿಲ್ಲದೇ ಭೋಜನ ವ್ಯವಸ್ಥೆ ಆಗಬೇಕು

* ಅಸ್ಪೃಶ್ಯತೆಯ ಆಚರಣೆ ಹಿಂದೂಗಳಲ್ಲಿ ಇರಬಾರದು

ಆರ್.ಎಸ್.ಎಸ್ ಮತ್ತು ಸಾಧುಗಳು ಮನುಸ್ಮೃತಿಯನ್ನು ಒಪ್ಪುವುದಿಲ್ಲ:ಪೇಜಾವರ ಶ್ರೀಆರ್.ಎಸ್.ಎಸ್ ಮತ್ತು ಸಾಧುಗಳು ಮನುಸ್ಮೃತಿಯನ್ನು ಒಪ್ಪುವುದಿಲ್ಲ:ಪೇಜಾವರ ಶ್ರೀ

ಧರ್ಮ ಸಂಸತ್ ನ ದಿಕ್ಸೂಚಿ ಭಾಷಣ ಮಾಡಿದ ವಿಹಿಂಪದ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಬಾಯ್ ತೊಗಾಡಿಯಾ, ವೇದದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇರಬಾರದು. ಎಲ್ಲರಿಗೂ ಮಂದಿರಕ್ಕೆ ಮುಕ್ತ ಪ್ರವೇಶ ನೀಡಬೇಕು. ಅಸ್ಪೃಶ್ಯತೆ ಮುಕ್ತ ಭಾರತ ನಿರ್ಮಾಣ ನಮ್ಮ ಗುರಿ," ಎಂದು ಹೇಳಿದರು.

Dharma Sansad raised the voice against untouchability

"ಸರಕಾರದ ವಶದಲ್ಲಿರುವ ದೇವಸ್ಥಾನಗಳು ಹಿಂದೂಗಳ ಕೈಗೆ ಬರಬೇಕು," ಎಂದು ಧರ್ಮ ಸಂಸತ್ ನ ಚರ್ಚಾಗೋಷ್ಟಿಯಲ್ಲಿ ಸಂತರು ಆಗ್ರಹ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಅನೇಕ ಸಂತರು ಕೂಡಾ ದೇವಸ್ಥಾನದ ಸರಕಾರೀಕರಣದ ಬಗ್ಗೆ ಚರ್ಚೆ ನಡೆಸಿದರು.

ಗೋಷ್ಠಿಯಲ್ಲಿ ನಡೆದ ಪ್ರಮುಖ ಚರ್ಚೆಯ ಅಂಶಗಳು ಹೀಗಿವೆ,

* ದೇವಸ್ಥಾನಗಳನ್ನು ಸರಕಾರೀಕರಣ ಮಾಡುವುದಕ್ಕೆ ವಿರೋಧ

* ದೇವಸ್ಥಾನಗಳು ಅದೇ ಧರ್ಮದ ವಶದಲ್ಲಿರಬೇಕು

* ದೇವಾಲಯಗಳ ಆಡಳಿತಕ್ಕೆ ಸ್ವಾಯತ್ತ ಮಂಡಳಿ ರಚನೆ ಮಾಡಬೇಕು.

* ಮಸೀದಿ-ಚರ್ಚ್ ಗಳ ಮೇಲಿನ ಸರಕಾರದ ಹಸ್ತಕ್ಷೇಪ ಯಾಕಿಲ್ಲ?

* ದೇವಸ್ಥಾನದ ಹಣ ಇತರ ಸರಕಾರದ ಖಜಾನೆ ಹೋಗುವುದಕ್ಕೆ ವಿರೋಧ

ಗೋಷ್ಠಿಯಲ್ಲಿ ಸರಕಾರದ ದೇವಸ್ಥಾನದ ಮೇಲಿನ ಹಸ್ತಕ್ಷೇಪದ ಬಗೆಗೆ ಸಾಕಷ್ಟು ಚರ್ಚೆಗಳು ನಡೆದವು.ಅಯೋಧ್ಯೆ ದಿಗಂಬರ ಮಠದ ಸಂತ ಸುರೇಶ್ ದಾಸ್ ಜೀ, ಸ್ವರ್ಣವಲ್ಲಿ ಗಂಗಾಧೇಶ್ವರ ಸ್ವಾಮೀಜಿ, ವಿಹಿಂಪದ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಸೇರಿದಂತೆ ಅನೇಕ ಸಂತರು ದೇವಸ್ಥಾನದ ಸರಕಾರೀಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದರ ಜತೆಗೆ ನಿನ್ನೆಯಂತೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ, ಧರ್ಮವನ್ನು ಬಿಟ್ಟು ಹೋದವರನ್ನು ಮತ್ತೆ ಮಾತೃ ಸಂಸ್ಥೆಗೆ ಕರೆಸಿಕೊಳ್ಳುವ ಬಗ್ಗೆ, ಜಾತಿ ವ್ಯವಸ್ಥೆ ಬಗ್ಗೆಯೂ ಸಂಸತ್ ನಲ್ಲಿ ಚರ್ಚೆ ನಡೆಯಿತು.

ನಾಳೆ ಧರ್ಮ ಸಂಸತ್ ನ ಕೊನೆಯ ದಿನವಾಗಿದ್ದು ಮತಾಂತರದ ವಿಚಾರದ ಬಗ್ಗೆ ಚರ್ಚಾಗೋಷ್ಠಿ ನಡೆಯಲಿದೆ. ಬಳಿಕ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದೆ.
ಇಂದಿನ ವಿಷಯ ಮಂಡನೆಗಳ ಬಗ್ಗೆ ನಾಳೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದ್ದು ಕೊನೆಯ ದಿನ ಕುತೂಹಲ ಮೂಡಿಸಿದೆ. ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಧರ್ಮ ಸಂಸತ್ ನ ನಿರ್ಣಯಗಳು ಮಂಡನೆ ಯಾಗಲಿದೆ.

English summary
The temples in the grip of the government should come to the hands of the Hindus. Untouchability must be eradicated as the Constitution intends. There are the topics on which the saints argued in the Dharma Sansad, Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X