• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಷಾಢ ಏಕಾದಶಿ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುದ್ರಾಧರಣೆ

|

ಉಡುಪಿ, ಜುಲೈ 04 : ಆಷಾಢ ತಿಂಗಳ ಮೊದಲ ಏಕಾದಶಿಯ ದಿನವಾದ ಇಂದು (ಜುಲೈ 4) ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮುದ್ರಾಧರಣೆ ನೆರವೇರಿತ್ತು.

ಸುದರ್ಶನ ಹೋಮದಲ್ಲಿ ಭಗವಂತನ ಆಯುಧಗಳಾದ ಚಕ್ರ, ಶಂಖಗಳನ್ನು ಕಾಯಿಸಿ ಬಾಹುಮೂಲದಲ್ಲಿ ಧಾರಣೆ ಮಾಡುವ ಧಾರ್ಮಿಕ ಪ್ರಕ್ರಿಯೆ ತಪ್ತ ಮುದ್ರಾಧಾರಣೆ ಇಂದು ಶ್ರೀಕೃಷ್ಣ ಮಠದಲ್ಲಿ ನೆರವೇರಿತ್ತು.

ಬಸವನಗುಡಿಯ ಉತ್ತರಾಧಿಮಠದಲ್ಲಿ ತಪ್ತ ಮುದ್ರಾಧಾರಣೆ

ಆಷಾಢ ಶುದ್ಧ ಶಯನೀ ಏಕಾದಶಿಯಂದು ಭಗವಂತ ಯೋಗನಿದ್ರೆಗೆ ಮುಂದಾದರೆ, ದ್ವಾದಶಿಯಂದು (ಜು.5) ಚಾತುರ್ಮಾಸ್ಯ ವ್ರತ ಆರಂಭವಾಗಿ (ಶಾಖಾ, ದಧಿ, ಕ್ಷೀರ ಹಾಗೂ ದ್ವಿದಳ) ಅ. 30ಕ್ಕೆ ಕೊನೆಗೊಳ್ಳಲಿದೆ.

ವೇದದಲ್ಲಿ ಅತಪ್ತತನು: ತದಾಮಹ ಅಷ್ಣುತೇ ಭಗವಂತನ ಆಯುಧಗಳಾದ ಚಕ್ರ, ಶಂಖಗಳಿಂದ ಮುದ್ರಾಧಾರಣೆ ಮಾಡಿಸಿಕೊಂಡ ಸಾಧಕನು ಪವಿತ್ರಾತ್ಮನಾಗಿ ಮೋಕ್ಷ ಫಲ ಪಡೆಯುತ್ತಾನೆ ಎನ್ನುವ ಉಲ್ಲೇಖವಿದೆ ಎನ್ನುತ್ತಾರೆ ಶ್ರೀಕೃಷ್ಣ ಮಠದ ಪರಪತ್ಯಗಾರ ಕೆ.ಆರ್. ಶಶಾಂಕ್ ಭಟ್.

ಮಳೆಗಾಲ ಆರಂಭವಾಯಿತೆಂದರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಯತಿಗಳಿಗೆ ಸಂಚಾರ ನಿಷಿದ್ಧ. ಹೀಗಾಗಿ ಒಂದೆಡೆ ಒಟ್ಟಾಗಿ ಕೂತು ಚಾತುರ್ಮಾಸ್ಯ ವ್ರತದಲ್ಲಿ ತೊಡಗುತ್ತಾರೆ.

ಅಹಿಂಸೆ ತತ್ವದ ಹಿನ್ನಲೆ, ಹಿಂದಿನ ಕಾಲಗಳಲ್ಲಿ ಮಳೆಗಾಲದಲ್ಲಿ ರೋಗ ತಡೆಯೊಂದಿಗೆ ರೋಗ ನಿರೋಧಕ ಶಕ್ತಿ ತಪ್ತ ಮುದ್ರಾಧಾರಣೆ ಪೂರಕ ಎನ್ನುವುದು ಆಧುನಿಕ ನಂಬಿಕೆಯಾಗಿದೆ.

ಬಲಗೈಗೆ ಚಕ್ರ ಹಾಗೂ ಶಂಖ ಮುದ್ರೆ ಧಾರಣೆ ಮಾಡಿಸಿಕೊಳ್ಳುವುದು ಶಾಸ್ತ್ರೀಯ ಕ್ರಮ. ಇನ್ನು ಹೊಟ್ಟೆಗೆ ಚಕ್ರ, ಬಲ ಎದೆಗೆ ಚಕ್ರ, ಎಡ ಎದೆಗೆ ಶಂಖ ಮುದ್ರೆ ಹಾಕಿಸಿಕೊಳ್ಳಬಹುದಾಗಿದ್ದರು ಇದು ಶಾಸ್ತ್ರಿಯವಲ್ಲ. ಮಣಿಪಾಲ ವಿದ್ಯಾರ್ಥಿಗಳಿಗೂ ತಪ್ತ ಮುದ್ರಾಧಾರಣೆ ಬಗ್ಗೆ ವೈಜ್ಞಾನಿಕ ಕುತೂಹಲವಿದೆ ಎನ್ನುತ್ತಾರೆ ಶ್ರೀಕೃಷ್ಣ ಮಠದ ಪರಪತ್ಯಗಾರ ಕೆ.ಆರ್. ಶಶಾಂಕ್ ಭಟ್.

ಚಾತುರ್ಮಾಸ್ಯ ವ್ರತ ದಿನಾಂಕಗಳು:

ಶಾಖ ವ್ರತ - ಜುಲೈ 5ರಿಂದ ಆಗಸ್ಟ್ 3ರ ತನಕ

ದಧಿ ವ್ರತ - ಆಗಸ್ಟ್ 4ರಿಂದ ಸೆಪ್ಟೆಂಬರ್.1ರ ತನಕ

ಕ್ಷೀರ ವ್ರತ- ಅಕ್ಟೋಬರ್ 2ರಿಂದ ಅಕ್ಟೋಬರ್30ರ ತನಕ

ದ್ವಿದಳ ವ್ರತ - ಅಕ್ಟೋಬರ್.2ರಿಂದ ಅ.30ತನಕ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Tapta Mudra Dharana” ritual was held at the Sri Krishna Temple. Vishwesha Teertha Swamiji of Paryaya Pejawar Math and Vishwa Prasanna Teertha, junior Swamiji, stamped the images of Shankha and Chakra on the chest and arms of devotees here on Tuesday, July 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more