ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ 23 ಅಡಿ ಏಕಶಿಲಾ ಶನಿ ವಿಗ್ರಹಕ್ಕೆ ಭಕ್ತರಿಂದ ಎಳ್ಳೆಣ್ಣೆ ಅಭಿಷೇಕ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 24: ಶನಿ ಮಹಾತ್ಮ ಧನುಸ್ಸು ರಾಶಿಯಲ್ಲಿ ಅಸ್ತವಾಗಿ ಮಕರ ರಾಶಿಯಲ್ಲಿ ಇಂದು ಉದಯವಾಗುತ್ತಿದ್ದಾನೆ. 30 ವರ್ಷಗಳ ಬಳಿಕ ಈ ವಿದ್ಯಮಾನ ನಡೆಯುತ್ತಿದೆ. ಶನಿ ತನ್ನ ಸ್ವಂತ ಮನೆ ಮಕರಕ್ಕೆ ಪ್ರವೇಶ ಮಾಡುತ್ತಿದ್ದು, ಎಲ್ಲೆಡೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ರೇಷ್ಮೆ ನಗರಿಯಲ್ಲಿ 108 ದಂಪತಿಗಳಿಂದ ಶನಿ ಶಾಂತಿ ಪೂಜೆರೇಷ್ಮೆ ನಗರಿಯಲ್ಲಿ 108 ದಂಪತಿಗಳಿಂದ ಶನಿ ಶಾಂತಿ ಪೂಜೆ

ಹೀಗೆಯೇ ಉಡುಪಿ ಜಿಲ್ಲೆ ಬನ್ನಂಜೆಯ ಶನೀಶ್ವರ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಶನಿಶಾಂತಿ ಹೋಮ ನಡೆಯಿತು. ನೂರಾರು ಭಕ್ತರು ಬನ್ನಂಜೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಎಳ್ಳೆಣ್ಣೆ ಅಭಿಷೇಕ, ಎಳ್ಳು ಗಂಟು ಆರತಿ ಮತ್ತಿತರ ಸೇವೆಯನ್ನು ಭಕ್ತರೇ ಅರ್ಪಿಸುವ ವಿಶೇಷ ಅವಕಾಶ ಬನ್ನಂಜೆ ಕ್ಷೇತ್ರದಲ್ಲಿದೆ. ಎಳ್ಳೆಣ್ಣೆಯ ಅಭಿಷೇಕ ಅರ್ಚಕರಿಂದ ಆಗುವುದಿಲ್ಲ. ಬಂದ ಭಕ್ತರು ಎಣ್ಣೆ ಖರೀದಿ ಮಾಡಿ ಅಭಿಷೇಕ ಮಾಡುತ್ತಾರೆ. ಪ್ರತಿ ಶನಿವಾರ ಇಲ್ಲಿಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇವತ್ತು ವಿಶೇಷ ದಿನವಾಗಿರುವುದರಿಂದ ಹೋಮ ಹವನಾದಿಗಳನ್ನು ಏರ್ಪಡಿಸಲಾಗಿದೆ.

Devotees Did Pooja To 23 foot Monolithic Shani Statue In Udupi

ಜ್ಯೋತಿಷ್ಯ: ಮಕರ ರಾಶಿಯಲ್ಲಿ ಗುರು- ಶನಿ ಇರುವಾಗ ಏನೆಲ್ಲ ಆಗಬಹುದು?ಜ್ಯೋತಿಷ್ಯ: ಮಕರ ರಾಶಿಯಲ್ಲಿ ಗುರು- ಶನಿ ಇರುವಾಗ ಏನೆಲ್ಲ ಆಗಬಹುದು?

23 ಅಡಿ ಎತ್ತರದ ಶನಿ ದೇವರ ವಿಗ್ರಹವನ್ನು ಬನ್ನಂಜೆಯಲ್ಲಿ ಸ್ಥಾಪಿಸಲಾಗಿದ್ದು, ವಿಶ್ವದ ಏಕೈಕ ಅತೀ ಎತ್ತರದ ವಿಗ್ರಹ ಎಂಬ ಕೀರ್ತಿಗೆ ಪಾತ್ರವಾಗಿದೆ.

English summary
Devotees performed special pooja to 23 foot monolithic shani statue in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X