ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ದೇವೇಗೌಡ ದಂಪತಿ

|
Google Oneindia Kannada News

Recommended Video

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಎಚ್ ಡಿ ದೇವೇಗೌಡ ದಂಪತಿ

ಉಡುಪಿ, ಮೇ 14: ಉಡುಪಿಯ ಕಾಪುವಿನಲ್ಲಿರುವ ಹೆಲ್ತ್ ರೆಸಾರ್ಟ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಚನ್ನಮ್ಮ ದಂಪತಿ ಇಂದು ಸೋಮವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೇಜಾವರ ಶ್ರೀಗಳ 88ನೇ ಜನ್ಮ ನಕ್ಷತ್ರ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾದ ದೇವೇಗೌಡ ದಂಪತಿ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ಬಳಿಕ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬಳಿಕ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು.

ಕೋಟ ಅಮೃತೇಶ್ವರಿ ದೇವಿಗೆ ದೇವೇಗೌಡ ದಂಪತಿಯಿಂದ ಪೂಜೆ ಸಲ್ಲಿಕೆಕೋಟ ಅಮೃತೇಶ್ವರಿ ದೇವಿಗೆ ದೇವೇಗೌಡ ದಂಪತಿಯಿಂದ ಪೂಜೆ ಸಲ್ಲಿಕೆ

ಮಾಧ್ಯಮ ಪ್ರತಿನಿಧಿಗೊಂದಿಗೆ ಮಾತನಾಡಿದ ದೇವೇಗೌಡ ಅವರು, ಶ್ರೀಗಳ ಜನ್ಮ ನಕ್ಷತ್ರ ಪ್ರಯುಕ್ತ ಆಶೀರ್ವಾದ ಪಡೆಯಲು ಬಂದಿದ್ದೇನೆ.ಅವರು ಆಶೀರ್ವಾದ ಮಾಡಿದ್ದಾರೆ. ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದೇನೆ. ರಾಜಕೀಯದ ಕುರಿತು ಯಾವುದೇ ಕಮೆಂಟ್ ಮಾಡಲಾರೆ ಎಂದು ಪ್ರತಿಕ್ರಿಯಿಸಿದರು.

Deve Gowda visits Sri Krishan Mutt

ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀ, ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರು ಅತ್ಯಂತ ಹಿರಿಯರು. ಪ್ರಧಾನ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದರು. ದೇವೇಗೌಡರೇ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯಲು ಅವಕಾಶ ಇತ್ತು. ದೇವೇಗೌಡರು ಮತ್ತು ಕುಟುಂಬದಿಂದ ಹೆಚ್ಚಿನ ರಾಷ್ಟ್ರಸೇವೆ ಆಗಲಿ ಎಂದು ಹೇಳಿದರು.

ಮತ್ತೆ ಪ್ರಕೃತಿ ಚಿಕಿತ್ಸೆಗೆ ಉಡುಪಿಗೆ ಆಗಮಿಸಿದ ದೇವೇಗೌಡ ದಂಪತಿಮತ್ತೆ ಪ್ರಕೃತಿ ಚಿಕಿತ್ಸೆಗೆ ಉಡುಪಿಗೆ ಆಗಮಿಸಿದ ದೇವೇಗೌಡ ದಂಪತಿ

Deve Gowda visits Sri Krishan Mutt

ಭೇಟಿ ಸಂದರ್ಭದಲ್ಲಿ ನಾವಿಬ್ಬರೂ ರಾಜಕೀಯ ವಿಚಾರ ಮಾತನಾಡಿಲ್ಲ. ದೇವೇಗೌಡರು ಬನ್ನಂಜೆ ಗೋವಿಂದಾಚಾರ್ಯರ ಪುಸ್ತಕ ಓದುತ್ತಿದ್ದಾರೆ. ಚೆನ್ನಮ್ಮ ಅತ್ಯಂತ ಸರಳಜೀವಿ, ಮಹಾನ್ ದೈವಭಕ್ತೆ. ಯಾವ ಶ್ರೀಮಂತಿಕೆಯ ಆಡಂಭರವೂ ಅವರಿಗಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಭೇಟಿ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಕಾಲದ ನೆನಪುಗಳನ್ನು ದೇವೇಗೌಡ ಹಾಗೂ ಪೇಜಾವರ ಶ್ರೀಗಳು ಮೆಲುಕು ಹಾಕಿದರು ಎಂದು ಹೇಳಲಾಗಿದೆ.

English summary
Former Prime Minister Deve Gowda and Wife Channamma visited Sri Krisha Matt in Udupi. Deve Gowda visited Pejawar mutt and seek Blessings from Pejawara Sri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X