ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟ ಅಮೃತೇಶ್ವರಿ ದೇವಿಗೆ ದೇವೇಗೌಡ ದಂಪತಿಯಿಂದ ಪೂಜೆ ಸಲ್ಲಿಕೆ

|
Google Oneindia Kannada News

ಉಡುಪಿ, ಮೇ 10:ಉಡುಪಿ ಹೊರವಲಯದ ಕಾಪು ಬಳಿಯ ಮುಳೂರಿನ ಖಾಸಗಿ ರೆಸಾರ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಅವರ ಪತ್ನಿ ಚನ್ನಮ್ಮ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಇಬ್ಬರೂ ಜೊತೆಗೂಡಿ ಉಡುಪಿಯ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದಾರೆ. ಇಂದು ಇಬ್ಬರೂ ಕೋಟದ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮತ್ತೆ ಪ್ರಕೃತಿ ಚಿಕಿತ್ಸೆಗೆ ಉಡುಪಿಗೆ ಆಗಮಿಸಿದ ದೇವೇಗೌಡ ದಂಪತಿಮತ್ತೆ ಪ್ರಕೃತಿ ಚಿಕಿತ್ಸೆಗೆ ಉಡುಪಿಗೆ ಆಗಮಿಸಿದ ದೇವೇಗೌಡ ದಂಪತಿ

ಕುಂದಾಪುರ ಸಮೀಪದ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನದ ಮಹಾಪೂಜೆಗೆ ತೆರಳಿದ ಸಂದರ್ಭ ಜೆಡಿಎಸ್ ವರಿಷ್ಠ ದೇವೇಗೌಡ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಪೂಜೆಗೆ ಕೊಟ್ಟ ಹಣ್ಣು-ಕಾಯಿ ತಟ್ಟೆಯಲ್ಲಿ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆಯಿಟ್ಟು ಕೊಟ್ಟಿದ್ದಾರೆ.

Deve Gowda and Wife Channamma visited Ambratheshwari temple

ಅರ್ಚಕರು ದೇವಿಯ ಮುಂದಿಟ್ಟು ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿದ್ದಾರೆ. ದೇವೇಗೌಡರ ಪುತ್ರಿ ಶೈಲಜಾ ಅವರ ಮಗ ಡಾ. ಅಮೋಘ್ ಅವರ ಮದುವೆ ಪತ್ರಿಕೆ ಇದಾಗಿದ್ದು, ಭೇಟಿ ಕೊಟ್ಟ ಕ್ಷೇತ್ರದಲ್ಲಿ ಅಜ್ಜ ,ಅಜ್ಜಿ ತಮ್ಮ ಮೊಮ್ಮಗನಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ.

English summary
Former Prime Minister Deve Gowda in relax mood.Deve Gowda again visited Kapu health resort along with wife Channamma. They are undergoing naturopathy treatment in the resort mean while Deve Gowda and wife Channamma visited Ambratheshwari temple and offered special pooja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X