ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಪದವಿ ತರಗತಿಗೆ ದಾಖಲಾತಿ 9072; ಹಾಜರಾತಿ 300

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 21: ಕೊರೊನಾ ಭಯ ಸ್ವಲ್ಪ ದೂರವಾಗಿ ಅಂತಿಮ ವರ್ಷದ ಪದವಿ ತರಗತಿಗಳು ಪ್ರಾರಂಭಗೊಂಡರೂ ಉಡುಪಿಯಲ್ಲಿ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ 9072 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರೂ ತರಗತಿಗಳಿಗೆ ಹಾಜರಾಗಿದ್ದು ಬರೀ 307 ವಿದ್ಯಾರ್ಥಿಗಳು ಮಾತ್ರ. ಶನಿವಾರ 9072 ವಿದ್ಯಾರ್ಥಿಗಳ ಪೈಕಿ 300 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಿದ್ದರು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಏಳು ಪದವಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢಉಡುಪಿ ಜಿಲ್ಲೆಯಲ್ಲಿ ಏಳು ಪದವಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಅನೇಕ ಕಡೆ ವಿದ್ಯಾರ್ಥಿಗಳಿಲ್ಲದೇ ತರಗತಿಗಳು ಬಿಕೋ ಎನ್ನುತ್ತಿವೆ. ಜಿಲ್ಲೆಯಲ್ಲಿ ಒಟ್ಟು 55 ಕಾಲೇಜುಗಳಿವೆ. ಹೀಗಿದ್ದರೂ ಇಂದಿನ‌ ಹಾಜರಾತಿ ಮುನ್ನೂರನ್ನೂ ದಾಟಿಲ್ಲ.

Udupi: Degree Final Year Students Not Showing Interest To Attend Classes

ರಾಜ್ಯಾದ್ಯಂತ ನವೆಂಬರ್ 17ರಿಂದ ಪದವಿ ಕಾಲೇಜುಗಳು ಆರಂಭವಾಗಿದ್ದು, ಉಡುಪಿಯಲ್ಲೂ ಎಲ್ಲಾ ಕಾಲೇಜುಗಳು ತೆರೆದಿವೆ. ಆದರೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಆಸಕ್ತಿ ತೋರುತ್ತಿಲ್ಲ. ಕಾಲೇಜು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು ಆರು ಸಾವಿರ ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆದಿದ್ದು, ಭಾನುವಾರದೊಳಗೆ ಪರೀಕ್ಷಾ ವರದಿ ಬರಲಿದೆ. ಈಗ ದೊರೆತಿರುವ ವರದಿ ಪ್ರಕಾರ ಜಿಲ್ಲೆಯ ಏಳು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಸೋಮವಾರದ ನಂತರ ಮಕ್ಕಳ ಸಂಖ್ಯೆ ಜಾಸ್ತಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಈವರೆಗೆ 22,470 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಸದ್ಯ 211 ಸಕ್ರಿಯ ಪ್ರಕರಣಗಳಷ್ಟೇ ಇವೆ. ಈವರೆಗೆ 187 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

English summary
Degree colleges have been opened statewide from Nov 17. But students are not sowing interest to attend classes in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X