ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಜಿಲ್ಲೆಯ ಗ್ರಾಮಗಳು ಸಂಪೂರ್ಣ ಲಾಕ್‌ಡೌನ್: ಜಿಲ್ಲಾಡಳಿತದಿಂದ ದಿಟ್ಟ ಕ್ರಮ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 2: ಕೊರೊನಾ ಸೋಂಕು ನಿಯಂತ್ರಣಕ್ಕೆ ‌ಉಡುಪಿ ಜಿಲ್ಲಾಡಳಿತ ಮತ್ತೊಂದು ದಿಟ್ಟ ‌ನಿರ್ಧಾರ ತೆಗೆದುಕೊಂಡಿದ್ದು, ಕೊರೊನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ 50ಕ್ಕೂ ಹೆಚ್ಚಿರುವ ಗ್ರಾಮಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ.

ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ರವರ ಇಂದಿನಿಂದ ಜೂನ್ 7ರವರೆಗೆ ಸಂಪೂರ್ಣ ಲಾಕ್‌ಡೌನ್ ಆದೇಶ‌ದನ್ವಯ, ಉಡುಪಿ ಜಿಲ್ಲೆಯ ಒಟ್ಟು 165 ಗ್ರಾಮಗಳಲ್ಲಿ 33 ಗ್ರಾಮಗಳು ಸಂಪೂರ್ಣ ಲಾಕ್‌ಡೌನ್ ಆಗಿವೆ.

Udupi: DC Ordered Complete Lockdown In 33 Villages As Covid-19 Cases Rise

ಮೆಡಿಕಲ್ ಶಾಪ್, ಕೃಷಿ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅನುಮತಿ ಪಡೆದ ಮದುವೆ ಸಮಾರಂಭಗಳಿಗೆ ಅವಕಾಶವಿದೆ. ಪ್ರತಿ ಗ್ರಾಮದ ಗಡಿಯಲ್ಲಿ ಬ್ಯಾರೀಕೇಡ್ ಅಳವಡಿಕೆ ಮಾಡಿ, ಪೊಲೀಸರನ್ನು ನಿಯೋಜಿಸಲಾಗಿದೆ.

Udupi: DC Ordered Complete Lockdown In 33 Villages As Covid-19 Cases Rise

Recommended Video

Sonu Sood ಈಗ ಕೆಲವರ ಪಾಲಿನ ದೇವರು | Oneindia Kannada

ಉಡುಪಿ ಜಿಲ್ಲೆಯ 33 ಗ್ರಾಮಗಳು ಸಂಪೂರ್ಣ ಲಾಕ್‌ಡೌನ್‌ಗೆ ಒಳಪಡುವ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ಕಂಡುಬಂದಿರುತ್ತವೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಶೇ.19 ಪಾಸಿಟಿವಿಟಿ ರೇಟ್ ಇದ್ದು, ಶೇ.5ಕ್ಕೆ ಪಾಸಿಟಿವಿಟಿ ರೇಟ್ ಇಳಿಸುವ ಉದ್ದೇಶ ಹೊಂದಲಾಗಿದೆ.

English summary
Udupi: DC G.Jagadeesh issued order to complete lockdown in 33 villages as their covid-19 cases rise to more than 50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X