ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಬಿಗ್ ಬಜಾರ್ ನಲ್ಲಿ ಎ.ಸಿ: ಮ್ಯಾನೇಜರ್ ಒಳಗಾಕ್ರೀ ಎಂದ ಡಿಸಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 24: ಕೊರೊನಾ ವೈರಸ್ ತಡೆಗಟ್ಟಲು ವಿಧಿಸಿರುವ ನಿಷೇದಾಜ್ಞೆಯಿಂದ ಉಡುಪಿ ಜಿಲ್ಲಾ ಕೇಂದ್ರ ಸಂಪೂರ್ಣ ಸ್ತಬ್ಧವಾಗಿದೆ. ತರಕಾರಿ, ದಿನಸಿ, ಮೆಡಿಕಲ್, ಹಾಲಿನಂಗಡಿ ಹೊರತುಪಡಿಸಿ ಬಹುತೇಕ ಬಂದ್ ಆಗಿದ್ದು, ರಸ್ತೆಯಲ್ಲಿ ಬೆರಳೆಣಿಕೆಯ ವಾಹನಗಳು ಸಂಚರಿಸುತ್ತಿವೆ.

ಈ ಮಧ್ಯೆ ತರಕಾರಿ‌ ಮಳಿಗೆಗಳಿಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ನೇತೃತ್ವದಲ್ಲಿ ದಿಢೀರ್ ಭೇಟಿ ನೀಡಲಾಯಿತು. ರಿಲಯನ್ಸ್, ಕೆನರಾ ಮಾಲ್, ಬಿಗ್ ಬಝಾರ್ ನಲ್ಲಿ ಪರಿಶೀಲನೆ ನಡೆಸಿದ ಡಿಸಿ, ಸುರಕ್ಷಾ ದೃಷ್ಟಿಯಿಂದ ನಿಯಮ ಪಾಲನೆ ಆಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದರು.

ಲಾಕ್ ಡೌನ್ ಆದರೂ ಉಡುಪಿಯಲ್ಲಿ ಮೀನಿಗಾಗಿ ಮುತ್ತಿಕೊಂಡರು ಜನಲಾಕ್ ಡೌನ್ ಆದರೂ ಉಡುಪಿಯಲ್ಲಿ ಮೀನಿಗಾಗಿ ಮುತ್ತಿಕೊಂಡರು ಜನ

ಈ ವೇಳೆ ಬಿಗ್ ಬಜಾರ್ ಮ್ಯಾನೇಜರ್ ನನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಹವಾನಿಯಂತ್ರಿತ ವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು. ಮಾತ್ರವಲ್ಲ ತರಕಾರಿ ಬೆಲೆ ಏರಿಸಿದ್ದಕ್ಕೆ ಮ್ಯಾನೇಜರ್ ನನ್ನು ತರಾಟೆಗೆ ತೆಗೆದುಕೊಂಡರು. ಇವ್ನನ್ನ ಒಳಗ್ಹಾಕಿ... ನಾನೇ‌ ಕಂಪ್ಲೇಂಟ್ ಕೊಡ್ತೇನೆ ಎಂದು ಡಿಸಿ ಗುಡುಗಿದರು.

DC And Sp Inspected Vegetable Shops In Udupi

ಇನ್ನು ತರಕಾರಿ ಶಾಪ್ ಗಳಲ್ಲಿ ಸ್ಯಾನಿಟೈಸರ್ ಬಳಕೆ ಇಲ್ಲದ್ದನ್ನು ಕಂಡು ಕೋಪಗೊಂಡ ಡಿಸಿ, ತರಕಾರಿ ವ್ಯಾಪಾರಿಗೆ ಸ್ವಚ್ಛತೆಯ ಪಾಠ ಮಾಡಿದರು.

English summary
On behalf of lockdown in udupi, dc and sp inspected vegetable shops in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X