ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೌಕ್ತೆ ಚಂಡಮಾರುತದಿಂದ ನಷ್ಟ; ಉಡುಪಿಯಲ್ಲಿ ಕೇಂದ್ರ ತಂಡದ ಅಧ್ಯಯನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 17; ತೌಕ್ತೆ ಚಂಡಮಾರುತದಿಂದ ಆದ ನಷ್ಟದ ಬಗ್ಗೆ ಅಂದಾಜು ನಡೆಸಲು ಕೇಂದ್ರದ ಅಧ್ಯಯನ ತಂಡ ಉಡುಪಿಗೆ ಆಗಮಿಸಿದೆ. ಮೇ ತಿಂಗಳಿನಲ್ಲಿ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಅಪಾರ ನಷ್ಟ ಉಂಟು ಮಾಡಿತ್ತು.

ಕೇಂದ್ರದ 5 ಸದಸ್ಯರ ತಂಡ ಉಡುಪಿಗೆ ಆಗಮಿಸಿದೆ. ಕೇಂದ್ರ ಗ್ರಹ ಇಲಾಖೆ ಅಧಿಕಾರಿ ಸುಶೀಲ್ ಪಾಲ್ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಎಸಿ ಕೆ. ರಾಜು, ಎಎಸ್ ಪಿ ಕುಮಾರಚಂದ್ರ ತಂಡದ ಜೊತೆ ಇದ್ದಾರೆ.

ತೌಕ್ತೆ ಚಂಡಮಾರುತ ದುರಂತ: ನಾಪತ್ತೆಯಾಗಿದ್ದ ತಗ್‌ಬೋಟ್‌ನ 7 ಸಿಬ್ಬಂದಿಯ ಶವ ಪತ್ತೆ ತೌಕ್ತೆ ಚಂಡಮಾರುತ ದುರಂತ: ನಾಪತ್ತೆಯಾಗಿದ್ದ ತಗ್‌ಬೋಟ್‌ನ 7 ಸಿಬ್ಬಂದಿಯ ಶವ ಪತ್ತೆ

ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ತಂಡ ಭೇಟಿ ನೀಡಿತು. ಬೈಂದೂರು, ಶಿರೂರು, ಉಪ್ಪುಂದ, ಮರವಂತೆ ಮುಂತಾದ ಪ್ರದೇಶಗಳಲ್ಲಿ ಹಾನಿಗೊಳಗಾದ ಸಮುದ್ರ ತೀರ, ಕೃಷಿ ಭೂಮಿ, ಬಿದ್ದ ಮನೆಗಳ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿತು. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿತು.

ಮುಂಬೈ ಬಾರ್ಜ್ ದುರಂತ; ಅನುಭವ ಬಿಚ್ಚಿಟ್ಟ ಮಂಗಳೂರು ಯುವಕರುಮುಂಬೈ ಬಾರ್ಜ್ ದುರಂತ; ಅನುಭವ ಬಿಚ್ಚಿಟ್ಟ ಮಂಗಳೂರು ಯುವಕರು

Damage Due To Tauktae Cyclone Central Team In Udupi For Inspection

ತೌಕ್ತೆ ಚಂಡಮಾರುತದಿಂದ ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ತಂಡ ಜಿಲ್ಲೆಯಾದ್ಯಾಂತ ವಿವಿಧ ಕಡೆ ವೀಕ್ಷಣೆ ಮಾಡಿ ನಷ್ಟದ ಮಾಹಿತಿ ಸಂಗ್ರಹಿಸಿದೆ. ಕೇಂದ್ರ ಗೃಹ ಇಲಾಖೆಗೆ ನಷ್ಟದ ವರದಿಯನ್ನು ಅಧಿಕಾರಿಗಳ ತಂಡ ನೀಡಲಿದೆ.

ತೌಕ್ತೆ ಚಂಡಮಾರುತ: ಗುಜರಾತ್‌ಗೆ 1000 ಕೋಟಿ ರೂ, ನೆರವು ಘೋಷಿಸಿದ ಪ್ರಧಾನಿ ಮೋದಿತೌಕ್ತೆ ಚಂಡಮಾರುತ: ಗುಜರಾತ್‌ಗೆ 1000 ಕೋಟಿ ರೂ, ನೆರವು ಘೋಷಿಸಿದ ಪ್ರಧಾನಿ ಮೋದಿ

ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, "ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಹಾನಿಗೊಳಗಾದ ವರದಿಯನ್ನು ಸಿದ್ಧಪಡಿಸಲಾಗಿದೆ. ಚಂಡಮಾರುತದಿಂದ ಹಾನಿಗೊಳಗಾದ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ ನೀಡಿದೆ. ಕೇಂದ್ರದ ಅಧ್ಯಯನ ತಂಡಕ್ಕೆ ನಷ್ಟದ ಅಂದಾಜಿನ ಕುರಿತು ಮಾಹಿತಿ ನೀಡಲಾಗಿದ್ದು, ಕೇಂದ್ರದ ನೆರವು ಆಧರಿಸಿ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಮಾಡಲಿದ್ದೇವೆ" ಎಂದರು.

Recommended Video

ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಸೃಷ್ಟಿಯಾಗಿದೆ ಸುಂದರ ಜಲಪಾತಗಳು | Oneindia Kannada

English summary
A five member central team in Udupi district of Karavali Karnataka to make an on-spot assessment of the damage caused by cyclone Tauktae.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X