ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್: ಪೊಲೀಸ್ ಹೊಡೆತ ತಪ್ಪಿಸಲು ಸೈಕ್ಲಿಸ್ಟ್‌ಗಳ ಮಾಸ್ಟರ್ ಪ್ಲಾನ್

|
Google Oneindia Kannada News

ಉಡುಪಿ, ಮೇ 12: ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಯಾರಾದರೂ ಬೈಕ್ ಅಥವಾ ವಾಹನಗಳಲ್ಲಿ ಹೊರಬಂದರೆ ಪೊಲೀಸರ ಲಾಠಿ ಏಟು ಬೀಳುವುದು ಗ್ಯಾರಂಟಿಯಾಗಿತ್ತು.

ಆದರೆ, ಪೊಲೀಸರಿಂದ ಲಾಠಿ ಏಟು ತಪ್ಪಿಸುವುದಕ್ಕಾಗಿ ಉಡುಪಿಯ ವ್ಯಕ್ತಿಯೊಬ್ಬರು ತಾತ್ಕಾಲಿಕ ಹಿಂಭಾಗದ ರಕ್ಷಣೆ, ಹೆಲ್ಮೆಟ್ ಮತ್ತು ಮಾಸ್ಕ್ ನೊಂದಿಗೆ ಸೈಕಲ್ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪತ್ರಕರ್ತ ನೋಲನ್ ಪಿಂಟೊ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಸೈಕಲ್‌ನಲ್ಲಿ ಹೋಗುವಾಗ ವ್ಯಕ್ತಿಯೊಬ್ಬ ತನ್ನ ಬೆನ್ನಿಗೆ ಅಲ್ಯೂಮಿನಿಯಂ ರೂಫಿಂಗ್ ಶೀಟ್ ಅನ್ನು ಕಟ್ಟಿಕೊಂಡು ಪೊಲೀಸರ ಲಾಠಿ ಏಟಿನಿಂದ ರಕ್ಷಣೆ ಪಡೆದಿದ್ದಾನೆ.

Udupi: Cyclists’ Makeshift Rear Protection To Avoid Police Thwacks; Video Goes Viral On Social Media

ಟ್ವೀಟ್ ಪ್ರಕಾರ, ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಾಲಕರು ಪೊಲೀಸರಿಂದ ಹೊಡೆತ ತಿಂದ ಹಲವಾರು ವರದಿಗಳಲ ನಂತರ ಈ ಪ್ಲಾನ್ ಮಾಡಲಾಗಿದೆಯಂತೆ.

Recommended Video

Ganga ನದಿಯ ಪರಿಸ್ಥಿತಿ ಈಗ ಹೇಗಿದೆ ನೋಡಿ | Oneindia Kannada

"ಅನೇಕ ವಾಹನ ಚಾಲಕರು ತಮ್ಮ ಪೃಷ್ಠದ ಮೇಲೆ ಒಂದೆರಡು ತೀಕ್ಷ್ಣವಾದ ಲಾಠಿ ಏಟು ಸ್ವೀಕರಿಸಿದ್ದರೆ, ಉಡುಪಿಯಲ್ಲಿರುವ ಈ ಸೈಕ್ಲಿಸ್ಟ್ ಹಿಂಭಾಗದ ರಕ್ಷಣೆ, ಹೆಲ್ಮೆಟ್ ಮತ್ತು ಮಾಸ್ಕ್ ಹೊಂದಿದ್ದರಿಂದ ಲಾಠಿ ತಪ್ಪಿದಂತಾಗಿದೆ' ಎಂದು ಬರೆದು ಪಿಂಟೊ ವಿಡಿಯೋ ಹಂಚಿಕೊಂಡಿದ್ದಾರೆ.

English summary
A man from Karnataka's Udupi was seen riding a cycle with makeshift rear protection, helmet and a mask to avoid thwacks of lathi from the police; video goes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X