ಉಡುಪಿ; ಕ್ರಿಕೆಟ್ ಪಂದ್ಯಾವಳಿ, ಬಹುಮಾನ ಪೆಟ್ರೋಲ್, ಡೀಸೆಲ್
ಉಡುಪಿ, ಮಾರ್ಚ್ 24: ಪೆಟ್ರೋಲ್, ಡೀಸೆಲ್ ದರ ಏರಿಕೆ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಉಡುಪಿಯಲ್ಲಿ ಕ್ರಿಕೆಟ್ ಪಂದ್ಯವೊಂದು ಆಯೋಜನೆಗೊಂಡಿದ್ದು, ಗೆದ್ದರೆ ಪೆಟ್ರೋಲ್ ಬಹುಮಾನವಾಗಿ ಸಿಗಲಿದೆ.
Friends M.G.M. Udupi ಹೆಸರಿನಲ್ಲಿ ಆಯೋಜನೆಗೊಂಡಿರುವ ಕ್ರಿಕೆಟ್ ಪಂದ್ಯಾವಳಿ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 4/4/2021ರಂದು ಈ ಪಂದ್ಯಾವಳಿ ನಡೆಯಲಿದೆ.
ಕೋಳಿ, ಕುರಿ, ಬಿಯರ್, ಈರುಳ್ಳಿ ಬಹುಮಾನ; ಕ್ರಿಕೆಟ್ ಪಂದ್ಯ ರದ್ದು!
Friends M.G.M. Udupi ಇವರ ಆಶ್ರಯದಲ್ಲಿ ನಡೆಯವ 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಇದಾಗಿದೆ. ಇದರ 15 ರೂ. ಲಕ್ಕಿ ಡಿಪ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಹೆಸರು
ಕ್ರಿಕೆಟ್ ಪಂದ್ಯಾವಳಿ ಗೆದ್ದರೆ ಪ್ರಥಮ ಬಹುಮಾನವಾಗಿ 10 ಲೀಟರ್ ಪೆಟ್ರೋಲ್ ಸಿಗಲಿದೆ. ದ್ವಿತೀಯ ಬಹುಮಾನವಾಗಿ 5 ಲೀಟರ್ ಡೀಸೆಲ್, ತೃತೀಯ ಬಹುಮಾನವಾಗಿ 3 ಲೀಟರ್ ವಾಹನದ ಗ್ಯಾಸ್ ನೀಡಲಾಗುತ್ತದೆ.
ಕ್ರಿಕೆಟ್ ಬೆಟ್ಟಿಂಗ್ ಆರೋಪಿಗಳಿಗೆ ಸಹಕರಿಸಿದ ಪೊಲೀಸ್ ಪೇದೆ ಅಮಾನತು
ಪ್ರಸ್ತುತ ಇರುವ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದುಬಾರಿ ಬಹುಮಾನವೇ ಗೆದ್ದವರಿಗೆ ಸಿಗಲಿದೆ. ತಂಡಗಳು ಪಂದ್ಯಾವಳಿಯಲ್ಲಿ ಸೆಣಸಾಟ ನಡೆಸಿ, ಪೆಟ್ರೋಲ್ ಪಡೆಯಲು ಉತ್ತಮ ಅವಕಾಶವಿದೆ.
ಬೇಸಿಗೆ ಸಮಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗುತ್ತೆ. ಆದರೆ, ಬಹುಮಾನವನ್ನು ಆಯ್ಕೆ ಮಾಡುವಲ್ಲಿ ತೋರಿಸಿರುವ ಜಾಣ್ಮೆ ಎಲ್ಲರ ಗಮನವನ್ನು ಸೆಳೆದಿದೆ.