ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರವೇ ಕಾಂಗ್ರೆಸ್ ಸರಕಾರದ ಮೆಡಲ್: ಅಮಿತ್ ಶಾ ವ್ಯಂಗ್ಯ

|
Google Oneindia Kannada News

Recommended Video

ಭ್ರಷ್ಟಾಚಾರವೇ ಕಾಂಗ್ರೆಸ್ ಸರ್ಕಾರದ ಮೆಡಲ್, ಎಂದ ಅಮಿತ್ ಶಾ | Oneindia Kannada

ಉಡುಪಿ, ಫೆಬ್ರವರಿ 21: ಕರಾವಳಿ ಪ್ರವಾಸದುದ್ದಕ್ಕೂ ಅಮಿತ್ ಶಾ ಕರ್ನಾಟಕ ರಾಜ್ಯ ಸರಕಾರದ ಮೇಲಿನ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಉಡುಪಿಯ ಮಲ್ಪೆಯಲ್ಲಿ ಸೋಮವಾರ ರಾತ್ರಿ ಆಯೋಜಿಸಲಾಗಿದ್ದ ಬೃಹತ್‌ ಮೀನುಗಾರರ ಸಮಾವೇಶದಲ್ಲಿಯೂ ಅವರು ರಾಜ್ಯ ಸರಕಾರದ ವಿರುದ್ದ ಕೆಂಡಕಾರಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರ ಬದಲಾಗುವ ಲಕ್ಷಣ ಗೋಚರಿಸುತ್ತಿದೆ. ಮುಂಬರುವ ಚುನಾವಣೆಯಲ್ಲಿ
ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.

ಗೂಂಡಾ ಕಾಂಗ್ರೆಸ್ ಕಿತ್ತೊಗೆಯಲು ಜನ ಸಿದ್ದ: ಶಾ ಗೂಂಡಾ ಕಾಂಗ್ರೆಸ್ ಕಿತ್ತೊಗೆಯಲು ಜನ ಸಿದ್ದ: ಶಾ

ಸಿದ್ದರಾಮಯ್ಯ ಸರ್ಕಾರ ಕರ್ನಾಟಕವನ್ನು ಭ್ರಷ್ಟ ರಾಜ್ಯವಾಗಿಸಿದೆ. ಭ್ರಷ್ಟಾಚಾರ ಮಾಡಿದವರಿಗೆ ನಾಚಿಕೆ ಇಲ್ಲ. ಅಂತವರಿಗೆ ಕಾಂಗ್ರೆಸ್‌ ಸರಕಾರದಲ್ಲಿ ದೊಡ್ಡ ಹುದ್ದೆ ನೀಡಲಾಗುತ್ತದೆ ಎಂದು ಅಮಿತ್ ಶಾ ಕಿಡಿಕಾರಿದರು.

ಭ್ರಷ್ಟಾಚಾರವೇ ಕಾಂಗ್ರೆಸ್ ಮೆಡಲ್

ಭ್ರಷ್ಟಾಚಾರವೇ ಕಾಂಗ್ರೆಸ್ ಮೆಡಲ್

"ಭ್ರಷ್ಟಾಚಾರವೇ ಈ ಕಾಂಗ್ರೆಸ್‌ ಸರಕಾರದ ಮೆಡಲ್. ಅದನ್ನು ಹಾಕಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಬೀಗುತ್ತಿದ್ದಾರೆ. ಬಡವರ ಹಣ ಭ್ರಷ್ಟಾಚಾರದಿಂದ ಲೂಟಿಯಾಗುತ್ತಿದೆ," ಎಂದು ಅವರು ಆರೋಪಿಸಿದರು. "ಸಂಪತ್ತೆಲ್ಲಾ ಭ್ರಷ್ಟ ಸಚಿವರ ಪಾಲಾಗಿದೆ. ಕರ್ನಾಟಕ ಮುಖ್ಯಮಂತ್ರಿ 40 ಲಕ್ಷದ ವಾಚ್ ತೊಡ್ತಾರೆ. ಯಾವ ನಾಚಿಕೆಯೂ ಅವರಿಗಿಲ್ಲ; ಲಜ್ಜೆಯೂ ಇಲ್ಲ," ಎಂದು ಅಮಿತ್ ಶಾ ವ್ಯಂಗ್ಯವಾಡಿದರು.

In Pics: ಕರಾವಳಿ ಜಿಲ್ಲೆಗಳಲ್ಲಿ ಅಮಿತ್ ಶಾ ಮಿಂಚಿನ ಸಂಚಾರ

ನೀಲಿ ಕ್ರಾಂತಿಗೆ ಕರ್ನಾಟಕ ಅಡ್ಡಿ

ನೀಲಿ ಕ್ರಾಂತಿಗೆ ಕರ್ನಾಟಕ ಅಡ್ಡಿ

ನೀವು ಕೊಟ್ಟ 17 ಲೋಕಸಭಾ ಸೀಟುಗಳು ಬಿಜೆಪಿ ಪಕ್ಷದ ಗೌರವ ಹೆಚ್ಚಿಸಿದೆ ಎಂದು ಹೇಳಿದ ಅವರು, "ನೀಲಿಕ್ರಾಂತಿ ಪ್ರಧಾನಿ‌ ನರೇಂದ್ರ ಮೋದಿ ಅವರ ಕನಸು. ದೇಶದ ಅಭಿವೃದ್ಧಿಗೆ ಮೀನುಗಾರಿಕೆಯೂ ಕೊಡುಗೆ ನೀಡಬೇಕು. ಆದರೆ ಈ ಕಾರ್ಯ ಮಾಡಲು ಕರ್ನಾಟಕ ಸರ್ಕಾರ ಅಡ್ಡಿಯಾಗಿದೆ," ಎಂದು ಅವರು ದೂರಿದರು.

ಮೀನುಗಾರರಿಗೆ ಆರೋಗ್ಯ ಸೌಲಭ್ಯ

ಮೀನುಗಾರರಿಗೆ ಆರೋಗ್ಯ ಸೌಲಭ್ಯ

ಬಡವರ ಆರೋಗ್ಯ ರಕ್ಷಣೆಗೆ ಕೇಂದ್ರ ವಿಶೇಷ ಸವಲತ್ತು ನೀಡಿದೆ. ಐದು ಲಕ್ಷದವರೆಗೆ ಆರೋಗ್ಯ ಸುರಕ್ಷಾ ಲಭ್ಯವಾಗಲಿದೆ ಎಂದು ಹೇಳಿದ ಅವರು, "ಮೀನುಗಾರರಿಗೆ ಇದರ ಪ್ರಯೋಜನ ಸಿಗಲಿದೆ," ಎಂದು ತಿಳಿಸಿದರು.

ರಾಜ್ಯ ಸರಕಾರ ಏನೂ ಮಾಡಿಲ್ಲ

ರಾಜ್ಯ ಸರಕಾರ ಏನೂ ಮಾಡಿಲ್ಲ

ಮುನ್ನೂರು ಕಿಲೋ ಮೀಟರ್ ಉದ್ದದ ಕರ್ನಾಟಕ ಕರಾವಳಿಗೆ ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಮೀನುಗಾರರ ಅಭಿವೃದ್ಧಿಗೆ ಗುಜರಾತ್ ಸರ್ಕಾರ ಮಾಡಿರುವ ಕೆಲಸ ಮಾದರಿಯಾಗಿದೆ ಎಂದು ಅವರು ಹೇಳಿದರು.

29 ಸಾವಿರ ಕೋಟಿ ಅನುದಾನ

29 ಸಾವಿರ ಕೋಟಿ ಅನುದಾನ

ಮೀನುಗಾರಿಕೆಗೆ ಕಾಂಗ್ರೆಸ್‌ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರ 1700 ಕೋಟಿ ಮಾತ್ರ ನೀಡಿತ್ತು. ಆದರೆ ಮೋದಿ ಸರ್ಕಾರ 29 ಸಾವಿರ ಕೋಟಿ ಮೀಸಲಿಟ್ಟಿದೆ. ಮೀನುಗಾರರಿಗೆ ಮನೆ ನಿರ್ಮಾಣಕ್ಕೆ 1.20 ಲಕ್ಷ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಕಿತ್ತೊಗೆಯಿರಿ

ಕಾಂಗ್ರೆಸ್ ಕಿತ್ತೊಗೆಯಿರಿ

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ನ್ನು ಕಿತ್ತೊಗೆಯಿರಿ . ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಅಮಿತ್ ಶಾ ಮೀನುಗಾರರಿಗೆ ಕರೆನೀಡಿದರು.

ತ್ರಿಪುರಾದಲ್ಲೂ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ನಿಶ್ಚಿತ ಎಂದು ಹೇಳಿದರು.

 ಅಮಿತ್ ಶಾ- ಪೇಜಾವರ ಶ್ರೀ ಭೇಟಿ

ಅಮಿತ್ ಶಾ- ಪೇಜಾವರ ಶ್ರೀ ಭೇಟಿ

ಪೇಜಾವರ ಮಠಕ್ಕೆ ಆಗಮಿಸಿದ ಅಮಿತ್ ಶಾ ಅನಾರೋಗ್ಯದಿಂದ ಬಳಲುತ್ತಿರುವ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದರು. ನಂತರ ಅವರು ಸಂತರೊಂದಿಗೆ ಸಮಾಲೋಚನಾ ಸಭೆ ಸಡೆಸಿದರು. ಸಭೆಯಲ್ಲಿ 20ಕ್ಕೂ ಹೆಚ್ಚು ಸಂತರು ಭಾಗಿಯಾಗಿದ್ದರು.

ಹಲವು ಸಂತರು ಭಾಗಿ

ಹಲವು ಸಂತರು ಭಾಗಿ

ಪೇಜಾವರ ಸ್ವಾಮೀಜಿ, ವಿಶ್ವಪ್ರಸನ್ನ ತೀರ್ಥ ಶ್ರೀ, ಪುತ್ತಿಗೆ ಸುಗುಣೇಂದ್ರ ಮಠಾಧೀಶರು, ಪಲಿಮಾರು ಶ್ರೀ, ಸುಬ್ರಹ್ಮಣ್ಯ ಸ್ವಾಮೀಜಿ, ವಜ್ರಾದೇಹಿ ಸ್ವಾಮೀಜಿ, ನರಸಿಂಹಾಶ್ರಮ ಶ್ರೀ, ಕೇಮಾರು ಶ್ರೀ, ರಾಘವೇಶ್ವರ ಸ್ವಾಮೀಜಿ, ಮರಕಡ ಸ್ವಾಮೀಜಿ, ಶ್ರೀ ಕಾರಿಂಜ ಸ್ವಾಮೀಜಿಗಳ ಜತೆಗೆ ಅಮಿತ್ ಶಾ ಸಮಾಲೋಚನೆ ನಡೆಸಿದರು.

ಎಲ್ಲಾ ಮಠಾಧೀಶರಿಗೆ ಅಮಿತ್ ಶಾ, ಬಿಎಸ್ ಯಡಿಯೂರಪ್ಪ ಶಾಲು ಹೊದಿಸಿ, ಹಣ್ಣು ಹಂಪಲು, ತುಳಸಿ ಹಾರ ಹಾಕಿ ಗೌರವ ಸಲ್ಲಿಸಿದರು.

ಸಮಾನ ನ್ಯಾಯ

ಸಮಾನ ನ್ಯಾಯ

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, "ಎಲ್ಲಾ ಧರ್ಮಗಳನ್ನು ಒಂದೇ ರೀತಿಯಾಗಿ ನೋಡಬೇಕು. ಅಲ್ಪ ಸಂಖ್ಯಾತರಿಗೆ ಒಂದು ನ್ಯಾಯ ಹಿಂದೂಗಳಿಗೆ ಒಂದು ನ್ಯಾಯ ಯಾಕೆ? ಸವಲತ್ತು ಎಲ್ಲರಿಗೂ ಸಿಗಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ಶಾ ಅವರ ಮುಂದೆ ಪ್ರಸ್ತಾಪ ಮಾಡಿದೆವು," ಎಂದು ಹೇಳಿದರು.

ಮಹಾದಾಯಿ ಸಮಸ್ಯೆ ಬಗೆಹರಿಸಿ

ಮಹಾದಾಯಿ ಸಮಸ್ಯೆ ಬಗೆಹರಿಸಿ

"ಕಾನೂನಿನ ವಿಚಾರದಲ್ಲಿ ಪಕ್ಷಪಾತ ಮಾಡಬಾರದು ಎಂಬುದು ನಮ್ಮ ಮತ್ತೊಂದು ಬೇಡಿಕೆಯಾಗಿತ್ತು. ಜತೆಗೆ ಮಹಾದಾಯಿ ವಿಚಾರದಲ್ಲಿ ರೈತರಿಗೆ ಸಹಾಯ ಮಾಡಬೇಕು. ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ. ಕಾಂಗ್ರೆಸ್ ಸಹಕರಿಸದಿದ್ದರೆ ಅದು ಅವರ ಸಮಸ್ಯೆ. ಕೇಂದ್ರ ಸರ್ಕಾರ ಕೈಲಾದ ಸಹಾಯ ಮಾಡಿ ಎಂದು ಒತ್ತಾಯಿಸಿದ್ದೇವೆ," ಎಂದು ಅವರು ಹೇಳಿದರು.

English summary
BJP national president Amith shah visited Krishna Math here in Udupi on February 20 . He also adressed fishermen's in Malpe beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X