ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಣಿಪಾಲ ಕೆಎಂಸಿಯ 18 ವೈದ್ಯರು ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 21: ಕಳೆದ ವಾರ ಉಡುಪಿಯ ಸರಕಾರಿ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ದಾದಿಯರಿಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಮಣಿಪಾಲದ ಪ್ರಸಿದ್ಧ ಕೆಎಂಸಿ ಆಸ್ಪತ್ರೆಯ ಸರದಿಯಾಗಿದೆ.

Recommended Video

Drone Prathap in Police Custody, what next..? | Oneindia Kannada

ಮಣಿಪಾಲ‌ ಕೆಎಂಸಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯ ಒಟ್ಟು 18 ವೈದ್ಯರಲ್ಲಿ ಮತ್ತು ಅನೇಕ ಮಂದಿ ದಾದಿಯರು, ಇತರ ಸಿಬ್ಬಂದಿಗಳಿಗೂ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿದೆ.

ಉಡುಪಿಯ ಪುತ್ತಿಗೆ ಶ್ರೀ, ನ್ಯಾಯಾಧೀಶರಿಗೆ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲುಉಡುಪಿಯ ಪುತ್ತಿಗೆ ಶ್ರೀ, ನ್ಯಾಯಾಧೀಶರಿಗೆ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲು

ಹೀಗಾಗಿ ಜುಲೈ 27 ರ ತನಕ ಒಪಿಡಿ ಸೇವೆ ಬಂದ್ ಮಾಡಲಾಗಿದೆ. ಅಲ್ಲಿಯವರೆಗೆ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ ಇದ್ದು, ಆನ್ ಲೈನ್ ಮೂಲಕ ವೈದ್ಯರ ಸಲಹೆ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ಸದ್ಯ ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Coronavirus Infection Confirmed In 18 Doctors And Staff Of Manipal KMC Hospital

ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ (ಕೊವಿಡ್ 19) ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಮತ್ತು ಕಳೆದ ಕೆಲವು ದಿನಗಳಿಂದ ನಮ್ಮ ಅನೇಕ ಆರೋಗ್ಯ ಕಾರ್ಯಕರ್ತರು ಕೊವಿಡ್ ಸೋಂಕಿಗೆ ತುತ್ತಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ.

Coronavirus Infection Confirmed In 18 Doctors And Staff Of Manipal KMC Hospital

ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯ ಒಪಿಡಿ ತಾತ್ಕಾಲಿಕ ಸ್ಥಗಿತ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯ ಒಪಿಡಿ ತಾತ್ಕಾಲಿಕ ಸ್ಥಗಿತ

ಆಸ್ಪತ್ರೆಯು ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲಿದೆ ಮತ್ತು 200 ಕೋವಿಡ್ 19 ಹಾಸಿಗೆಯನ್ನು ಸಿದ್ಧಪಡಿಸುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊರರೋಗಿ ವಿಭಾಗವನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ.

English summary
A total of 18 doctors and many nurses and other staff members of the Manipal KMC Hospital have been diagnosed with coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X