ಮುಂಬೈಯಿಂದ ಉಡುಪಿಗೆ ಬಂದಿದ್ದ ಗರ್ಭಿಣಿಗೆ ಕೊರೊನಾ ಸೋಂಕು
ಉಡುಪಿ, ಮೇ 18: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 11 ಕ್ಕೆ ಏರಿದೆ. ಇದೇ ಮೇ 12 ರಂದು ಮುಂಬೈನಿಂದ ಬಂದಿದ್ದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಯುವತಿಗೆ 27 ವರ್ಷ ವಯಸ್ಸಾಗಿದ್ದು, ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ಕ್ವಾರಂಟೈನ್ ನಲ್ಲಿದ್ದ ಈ ಮಹಿಳೆಯನ್ನು ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಉಡುಪಿಯಲ್ಲಿ ಹೃದಯಾಘಾತದಿಂದ ಸತ್ತಿದ್ದ ವ್ಯಕ್ತಿಯಲ್ಲಿತ್ತು ಕೊರೊನಾ
ಈಕೆ ಕುಂದಾಪುರದಲ್ಲಿ ಸರಕಾರಿ ಕ್ವಾರಂಟೈನ್ ನಲ್ಲಿ ಇದ್ದ ಮಹಿಳೆಯಾಗಿದ್ದು, ಪತಿ ಜೊತೆ ಒಂದೇ ಕೊಠಡಿಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ಗರ್ಭಿಣಿ ಪತ್ನಿಗೆ ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಪತಿಯ ಗಂಟಲ ದ್ರವವನ್ನು ಕೊರೊನಾ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಮುಂಬೈಯಿಂದ ಈ ಮಹಿಳೆಯ ಜೊತೆ ಬಸ್ ನಲ್ಲಿದ್ದ 25 ಮಂದಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಎಲ್ಲರ ಗಂಟಲು ಸ್ವಾಬ್ ತೆಗೆಯಲು ನಿರ್ಧಾರ ಮಾಡಲಾಗಿದೆ. ಪತಿಯನ್ನು ಈಗಾಗಲೇ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.