ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಮೇಲೂ ಕೊರೊನಾ ಎಫೆಕ್ಟ್: ಕಲ್ಲಂಗಡಿ ಬೆಲೆ ಪಾತಾಳಕ್ಕೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 16: ಜಾಗತಿಕ ಮಟ್ಟದಲ್ಲಿ ಸಾಕಷ್ಟು ಭಯ ಹುಟ್ಟಿಸಿ, ಸಾವು-ನೋವಿಗೆ ಕಾರಣವಾಗಿರುವ ಕೊರೊನಾ ಮಹಾಮಾರಿ ಈಗ ಕೃಷಿ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ.

ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಎಫೆಕ್ಟ್ ಮತ್ತು ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣಿನ ಬೆಲೆ ಪಾತಾಳಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳ ಹಿಂದಿನ ಕಲ್ಲಂಗಡಿ ಹಣ್ಣಿನ ದರಕ್ಕೆ ಹೋಲಿಸಿದರೆ ಈ ವರ್ಷ ಅದರ ಅರ್ಧದಷ್ಟು ಕೂಡ ಬೆಲೆ ಇಲ್ಲದೆ ಇರುವುದು ಕಲ್ಲಂಗಡಿ ಕೃಷಿಕರ ಆತಂಕ ಹೆಚ್ಚು ಮಾಡಿದೆ.

ಕೊರೊನಾ ಎಫೆಕ್ಟ್: ವಿದ್ಯಾಕಾಶಿ ಮಣಿಪಾಲ ಅಕ್ಷರಶಃ ಬಂದ್ಕೊರೊನಾ ಎಫೆಕ್ಟ್: ವಿದ್ಯಾಕಾಶಿ ಮಣಿಪಾಲ ಅಕ್ಷರಶಃ ಬಂದ್

ಕಳೆದ ಕೆಲವು ವರ್ಷಗಳಿಂದ ಒಂದು ಕೆ.ಜಿಗೆ 14, 15 ರುಪಾಯಿ ದರದಲ್ಲಿ ಕೃಷಿಕರಿಂದ ಕಲ್ಲಂಗಡಿ ಖರೀದಿಯಾಗುತ್ತಿತ್ತು. ಆದರೆ ಕೊರೊನಾ ಎಫೆಕ್ಟ್‌ನಿಂದಾಗಿ ಕಲ್ಲಂಗಡಿಯನ್ನು ಸದ್ಯ 5 ರಿಂದ 7 ರುಪಾಯಿ ಪ್ರತಿ ಕಿಲೋ ಗೆ ಕೃಷಿಕರಿಂದ ಖರೀದಿಸಲಾಗುತ್ತಿದೆ.

 Corona Effect On Agriculture: Watermelon Price To Low

ಈ ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಅತೀ ಹೆಚ್ಚು ಬೇಡಿಕೆಯಿರುವ ಹಣ್ಣಾದರೂ ಕೂಡ ಸಾಂಕ್ರಾಮಿಕ ರೋಗ ಭೀತಿ ಹಿನ್ನೆಲೆಯಲ್ಲಿ ಬೆಳೆದ ಕಲ್ಲಂಗಡಿ ಗದ್ದೆಯಲ್ಲೇ ಉಳಿದಿದೆ.

 Corona Effect On Agriculture: Watermelon Price To Low

ಕೊರೊನಾ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಮಹತ್ವದ ಪ್ರಕಟಣೆ ಕೊರೊನಾ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಮಹತ್ವದ ಪ್ರಕಟಣೆ

ಈ ವರ್ಷ ಉತ್ತಮ ಫಸಲು ಬಂದಿದ್ದರೂ, ಮಾರುಕಟ್ಟೆಯಲ್ಲಿ ಕೊರೊನಾ ಭೀತಿಯಿಂದಾಗಿ ಕಲ್ಲಂಗಡಿ ಬೆಳೆಗೆ ಸಮಸ್ಯೆಯಾಗಿದೆ. ಮುಖ್ಯವಾಗಿ ಕಲ್ಲಂಗಡಿ ಸೇವಿಸಿದರೆ ಶೀತ, ಕೆಮ್ಮು ಶುರುವಾಗಬಹುದು ಎಂಬ ಭಯವೇ ಇದಕ್ಕೆ ಕಾರಣ. ಕೋಟದ ಕೃಷಿಕ ಭೋಜ ಪೂಜಾರಿ ತಿಂಗಳ ಹಿಂದೆ ಕೇರಳಕ್ಕೆ ಒಂದು ಲಾರಿ ಕಲ್ಲಂಗಡಿ ಮಾರಾಟ ಮಾಡಿದ್ದಾರೆ, ಆದರೆ ಎರಡನೇ ಕಟಾವು ಕೇಳುವವರಿಲ್ಲದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

English summary
In the Corona Emergency, the price of watermelon fruit has fallen into Very Low in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X