ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ: ನಾಟಿ ಕಾರ್ಯ ಚುರುಕು, ಭಿತ್ತನೆಗೆ ಬಂದ ದಾವಣಗೆರೆ ಟ್ರಾಕ್ಟರ್ ಗಳು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್.26: ಒಂದು ವಾರದಿಂದ ಉಡುಪಿಯಲ್ಲಿ ಬಿಟ್ಟೂ ಬಿಡದಂತೆ ಮಳೆಯಾಗುತ್ತಿದೆ. ಆಕಾಶದಲ್ಲಿ ಸೂರ್ಯನ ದರ್ಶನವೇ ಆಗದಷ್ಟು ಮೋಡ ಕವಿದ ವಾತಾವರಣವಿದೆ. ಕೊಲ್ಲೂರು ಹೆಬ್ರಿ , ಹಾಲಾಡಿ , ಬೈಲೂರು ಭಾಗದಲ್ಲಿ ಉಡುಪಿ ನಗರಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಕರ್ನಾಟಕದ ಕರಾವಳಿ, ಮುಂಬೈಯಲ್ಲಿ ಇಂದು ಸಹ ಭಾರೀ ಮಳೆ ಸಂಭವಕರ್ನಾಟಕದ ಕರಾವಳಿ, ಮುಂಬೈಯಲ್ಲಿ ಇಂದು ಸಹ ಭಾರೀ ಮಳೆ ಸಂಭವ

ಮಳೆಯ ತೀವ್ರತೆಗೆ ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಂತಿದೆ. ಮಳೆಯಿಂದ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಜನರು ಮನೆಯಿಂದ ಹೊರಬರುವ ಮುಂಚೆ ಆಲೋಚಿಸವಷ್ಟು ಮಳೆ ಸುರಿಯುತ್ತಿವುದಂತೂ ಸುಳ್ಳಲ್ಲ.

continuous rainfall in Udupi

ಹಾಗೆಯೇ ಇತ್ತ ವರುಣನ ಕೃಪೆಯಿಂದ ಕೃಷಿಕರ ಮೊಗದಲ್ಲಿ ಮಂದಾಹಾಸ ಮೂಡಿದ್ದು, ನಾಟಿ ಕಾರ್ಯ ಚುರುಕುಗೊಂಡಿದೆ. ಭಿತ್ತನೆ ಕಾರ್ಯಕ್ಕೆ ಕೂಲಿ ಕಾರ್ಮಿಕರ ಕೊರತೆಯಿದ್ದು, ಭಿತ್ತನೆ ನಡೆಸಲು ದಾವಣಗೆರೆ ಕಡೆಯಿಂದ ಕರಾವಳಿ ಭಾಗಕ್ಕೆ ಬಂದು ನಿಂತಿವೆ ಟ್ರಾಕ್ಟರ್ ಗಳು.

continuous rainfall in Udupi

ಐವತ್ತಕ್ಕೂ ಅಧಿಕ ಟ್ರಾಕ್ಟರ್ ಗಳು ಇಲ್ಲಿಗೆ ಬಂದಿದ್ದು, ಕೃಷಿಗೆ ಬೇಡಿಕೆ ಹೆಚ್ಚಿದೆ. ಈ ಬಾರಿಯ ಮುಂಗಾರು ಮಳೆ ಕೃಷಿ ತೊರೆದವರಿಗೂ ಮತ್ತೆ ಕೃಷಿ ಆರಂಭಿಸುವ ಉತ್ಸಾಹ ನೀಡಿದೆ. ಟ್ರಾಕ್ಟರ್ ಗಳಿಗೆ ಗಂಟೆ 900 ರೂ. ನೀಡಿಯಾದರೂ ಗದ್ದೆ ಉಳುಮೆ ಮಾಡಿ ನಾಟಿ ಕಾರ್ಯ ಮುಗಿಸುವ ಆತುರದಲ್ಲಿ ರೈತರಿದ್ದಾರೆ.

English summary
There is a continuous rainfall in Udupi from one week. Tractors have come from Davanagere side to make a planting seeds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X