ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಡಿಸಿ ವಿರುದ್ಧ ಸಿಎಂ ಗೆ ದೂರು ಕೊಟ್ಟ ಕಾಂಗ್ರೆಸ್ ಮುಖಂಡ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 27: ಉಡುಪಿಯಲ್ಲಿ ಗರ್ಭಿಣಿ ಮಹಿಳೆಯ ಕ್ವಾರಂಟೈನ್ ಅವಧಿ ಮುಗಿದರೂ ಹೊರಬಿಡುತ್ತಿಲ್ಲ ಎಂಬ ವಿಚಾರವಾಗಿ ಜಿಲ್ಲಾಧಿಕಾರಿ ವಿರುದ್ಧ ಮಾಜಿ ಸಚಿವರೊಬ್ಬರು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.

Recommended Video

ಫೆಬ್ರವರಿ 14 ಕ್ಕೆ ಕಾಲೇಜು ಬಳಿ ಏನ್ ಮಾಡುತ್ತೆ ಶ್ರೀರಾಮ ಸೇನೆ? | Feb14th | Valentines Day | Muthalik

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿರುದ್ಧ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ.

ಉಡುಪಿ ಜನತೆಗೆ ಐದು ದಿನ ಉಚಿತ ಬಸ್ ಸೇವೆಉಡುಪಿ ಜನತೆಗೆ ಐದು ದಿನ ಉಚಿತ ಬಸ್ ಸೇವೆ

ದುಬೈನಿಂದ ಬಂದಿದ್ದ ಗರ್ಭಿಣಿಯೊಬ್ಬರು 15 ದಿನದ ಹೋಟೆಲ್ ಕ್ವಾರಂಟೈನ್ ಅವಧಿ ಮುಗಿಸಿದ್ದು, ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ಕಳುಹಿಸದ ಜಿಲ್ಲಾಡಳಿತದ ವಿರುದ್ಧ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವೀಟ್ ಮಾಡಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

 Congress Leader Who Complained To CM Against Udupi DC

ಈ ಮಹಿಳೆಗೆ ಮನೆಯ ಆಹಾರಕ್ಕೂ ಜಿಲ್ಲಾಡಳಿತ ತಡೆ ನೀಡಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕವೂ ಜಿಲ್ಲಾಡಳಿತ ಈಕೆಗೆ ತೊಂದರೆ ನೀಡುತ್ತಿದೆ. ಉಡುಪಿ ಜಿಲ್ಲಾಧಿಕಾರಿಯ ಬೇಜವಾಬ್ದಾರಿ ನಡೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪ್ರಮೋದ್ ಮಧ್ವರಾಜ್ ಟ್ವೀಟ್ ಮೂಲಕ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದ್ದಾರೆ.

English summary
Former minister Pramod Madhwaraj has complaint to chief minister against Udupi DC G.Jagadish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X