ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರ ದೌರ್ಜನ್ಯ

|
Google Oneindia Kannada News

ಉಡುಪಿ, ಜುಲೈ 08; ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಎಂಬುವವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಇದನ್ನು ಖಂಡಿಸಿದ್ದಾರೆ.

ರಾಧಾಕೃಷ್ಣ ನಾಯಕ್ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ ಎಂಬುದು ಆರೋಪ. ರಾಧಾಕೃಷ್ಣ ನಾಯಕ್‌ನನ್ನು ಠಾಣೆಗೆ ಕರೆಸಿ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಡಿಕೆಶಿಗೆ ದೈವದ ಆಯುಧ ನೀಡಿದ ಉಡುಪಿ ಕಾಂಗ್ರೆಸ್ ಮುಖಂಡರು; ತೀವ್ರ ಆಕ್ರೋಶಡಿಕೆಶಿಗೆ ದೈವದ ಆಯುಧ ನೀಡಿದ ಉಡುಪಿ ಕಾಂಗ್ರೆಸ್ ಮುಖಂಡರು; ತೀವ್ರ ಆಕ್ರೋಶ

Congress Condemns Police Harassment On Congress activist At Karkala

ಕಾರ್ಕಳ ತಾಲೂಕಿನ ಹಿರ್ಗಾನ ನಿವಾಸಿ ರಾಧಾಕೃಷ್ಣ ನಾಯಕ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಫೇಸ್‌ಬುಕ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಸಹ ಆರೋಪಿಸಲಾಗಿದೆ.

ಉಡುಪಿ; ಶ್ರೀ ಕೃಷ್ಣನ ದರ್ಶನಕ್ಕೆ ಇನ್ನೂ ಒಂದು ವಾರ ಕಾಯಬೇಕು ಉಡುಪಿ; ಶ್ರೀ ಕೃಷ್ಣನ ದರ್ಶನಕ್ಕೆ ಇನ್ನೂ ಒಂದು ವಾರ ಕಾಯಬೇಕು

ನಕಲಿ ಖಾತೆ ಮೂಲಕ ಪೋಸ್ಟ್; ಕಿಡಿಗೇಡಿಗಳು ರಾಧಾಕೃಷ್ಣ ನಾಯಕ್ ಹೆಸರಲ್ಲಿ ನಕಲಿ ಖಾತೆ ತೆರೆದು 2020ರ ಆಗಸ್ಟ್‌ನಲ್ಲಿ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಈ ಕುರಿತು ರಾಧಾಕೃಷ್ಣ ನಾಯಕ್ ಬೆಂಗಳೂರಿನ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಪೊಲೀಸರ ಮನವಿಯಂತೆ 4/9/2020ರಲ್ಲಿ 2ನೇ ದೂರು ಕೊಟ್ಟಿದ್ದರು.

ಸಂಪುಟ ವಿಸ್ತರಣೆ; ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಟ್ವೀಟ್ ಬಾಣ! ಸಂಪುಟ ವಿಸ್ತರಣೆ; ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಟ್ವೀಟ್ ಬಾಣ!

ಈ ಬಗ್ಗೆ ಪೊಲೀಸರು ರಾಧಾಕೃಷ್ಣ ನಾಯಕ್ ಹೇಳಿಕೆಯನ್ನು ಸಹ ಪಡೆದಿದ್ದರು. ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ರಾಧಾಕೃಷ್ಣ ನಾಯಕ್ ಕಾರ್ಕಳಕ್ಕೆ ವಾಪಸ್ ಆಗಿದ್ದರು. 4/4/2021ರಂದು ಹೃದಯಾಘಾತವಾಗಿದ್ದು ಸ್ಟಂಟ್ ಸಹ ಅಳವಡಿಕೆ ಮಾಡಲಾಗಿತ್ತು.

ಕಾರ್ಕಳ ನಗರ ಠಾಣೆ ಪೊಲೀಸರು ರಾಧಾಕೃಷ್ಣ ನಾಯಕ್ ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದ್ದರು. ಗುರುವಾರ ಪೊಲೀಸರು ಹಲ್ಲೆ ನಡೆಸಿದ ಪರಿಣಾಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಿಜೆಪಿ ಶಾಸಕರ ಕುಮ್ಮಕ್ಕಿನಿಂದ ಪೊಲೀಸರು ರಾಧಾಕೃಷ್ಣ ನಾಯಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಫೇಸ್‌ಬುಕ್‌ನಲ್ಲಿ ಆರೋಪಿ ಪೋಸ್ಟ್ ಹಾಕಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಹಲ್ಲೆಯನ್ನು ಖಂಡಿಸಿದ್ದು ಟ್ವೀಟ್ ಮಾಡಿದ್ದಾರೆ.

English summary
Opposition leader Siddaramaoaha and other Congress leaders condemned police harassment on party activist at Karkala, Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X