ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಸುನೀಲ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 12; "ತನ್ನನ್ನು ದೇಶದ್ರೋಹಿ ಎಂದು ಹೇಳಿರುವ ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುತ್ತದೆ" ಎಂದು ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಹೇಳಿದರು.

ಯೋಧರ ವಿರುದ್ಧವಾಗಿ ಅವಮಾನಕಾರಿಯಾಗಿ ಫೇಸ್‌ಬುಕ್ ಫೋಸ್ಟ್ ಹಾಕಿದ್ದ ಆರೋಪದ ಮೇಲೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕಾರ್ಕಳ ಪೊಲೀಸರು ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ರಾಧಾಕೃಷ್ಣ ನಾಯಕ್ ಹಿರ್ಗಾನ ಕಾರ್ಕಳದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದರು.

ಉಡುಪಿ; ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರ ದೌರ್ಜನ್ಯ ಉಡುಪಿ; ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರ ದೌರ್ಜನ್ಯ

"ನನ್ನ ಹೆಸರಿನ ನಕಲಿ ಫೇಸ್‌ಬುಕ್ ಖಾತೆಗಳನ್ನು ತೆರೆದು ಈ ಪೋಸ್ಟ್‌ ಹಾಕಲಾಗಿದೆ‌‌‌. ಈ ಪೋಸ್ಟ್‌ಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಕಾರ್ಕಳ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ" ಎಂದು ರಾಧಾಕೃಷ್ಣ ಹಿರ್ಗಾನ ಆರೋಪಿಸಿದರು.

ವಿಶೇಷ ಲೇಖನ; ಕಾಂಗ್ರೆಸ್ ಟಿಕೆಟ್‌ಗಾಗಿ ಶಿರಸಿಯಲ್ಲಿ ಪೈಪೋಟಿ! ವಿಶೇಷ ಲೇಖನ; ಕಾಂಗ್ರೆಸ್ ಟಿಕೆಟ್‌ಗಾಗಿ ಶಿರಸಿಯಲ್ಲಿ ಪೈಪೋಟಿ!

Congress Activist To File Defamation Case Against MLA Sunil Kumar

"ನಕಲಿ ಫೇಸ್‌ಬುಕ್ ಖಾತೆಗೆ ಸಂಬಂಧಿಸಿದಂತೆ ಬೆಂಗಳೂರಿನ ಉತ್ತರ ಗಂಗಮ್ಮನ ಗುಡಿ ಸೈಬರ್ ಠಾಣೆಯಲ್ಲಿ 2020ರ ಆಗಸ್ಟ್ 26ರಂದು ದೂರು ನೀಡಿದ್ದೇನೆ. ಆದರೂ ಕಾರ್ಕಳ ಠಾಣಾಧಿಕಾರಿ ಶ್ರೀ ಮಧು ಹಲ್ಲೆ ಮಾಡಿದ್ದಾರೆ" ಎಂದು ರಾಧಾಕೃಷ್ಣ ದೂರಿದರು.

ವಿಡಿಯೋ: ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ; ಡಿಕೆಶಿ ಸ್ಪಷ್ಟನೆ ವಿಡಿಯೋ: ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ; ಡಿಕೆಶಿ ಸ್ಪಷ್ಟನೆ

"ನನ್ನ ಮೇಲೆ ಯಾವುದೇ ಠಾಣೆಯಲ್ಲಿ ದೇಶ ದ್ರೋಹದ ಕೇಸು ದಾಖಲಾಗದಿದ್ದರೂ ನನ್ನನ್ನು ದೇಶ ದ್ರೋಹಿ ಎಂದು ಶಾಸಕ ಸುನೀಲ್ ಕುಮಾರ್ ಕರೆದಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ" ಎಂದು ರಾಧಾಕೃಷ್ಣ ಹೇಳಿದರು.

"ನನ್ನನ್ನು ದೇಶದ್ರೋಹಿ ಎಂದು ಸಾಬೀತುಪಡಿಸಲಿ. ಇಲ್ಲವಾದಲ್ಲಿ ಮಾಡಿದ ಅವಮಾನಕ್ಕಾಗಿ ಸುನೀಲ್ ಕುಮಾರ್ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ರಾಧಾಕೃಷ್ಣ ಹಿರ್ಗಾನ ತಿಳಿಸಿದರು.

ಪೊಲೀಸರು ಹಲ್ಲೆ ಮಾಡಿದ್ದರು; ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ನಾಯಕರು ಇದನ್ನು ಖಂಡಿಸಿದ್ದರು.

Recommended Video

ತಲೈವಾ ರಾಜಕೀಯದಿಂದ ಹಿಂದೆ ಸರಿಯಲು ಕಾರಣವಾಗಿದ್ದು ಏನು ಗೊತ್ತಾ? | Oneindia Kannada

ರಾಧಾಕೃಷ್ಣ ನಾಯಕ್ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ ಎಂದು ಆರೋಪಿಸಿ ಠಾಣೆಗೆ ಕರೆಸಿ ಹಲ್ಲೆ ಮಾಡಲಾಗಿತ್ತು, ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

English summary
Radhakrisnha Congress activist of Karkala, Udupi said that he will file defamation case against BJP MLA Sunil Kumar for called him as anti national.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X