ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು- ಉಡುಪಿ ಸಂಪರ್ಕ ಬಂದ್ ಗೊಂದಲ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 23: ಮಂಗಳೂರಿನಲ್ಲಿ ಕೊರೊನಾ ವೈರಸ್ ಧೃಡಪಟ್ಟ ಹಿನ್ನೆಲೆಯಲ್ಲಿ ಉಡುಪಿ ಗಡಿ ಹೆಜಮಾಡಿಯಲ್ಲೇ ಪೊಲೀಸರು ರಸ್ತೆತಡೆ ಮಾಡಿದ್ದಾರೆ. ಮಂಗಳೂರಿನಿಂದ ಬರುವ ವಾಹನಗಳಿಗೆ ಉಡುಪಿ ಜಿಲ್ಲೆಗೆ ಸದ್ಯ ಎಂಟ್ರಿ ಇಲ್ಲ.

ಪರಿಣಾಮವಾಗಿ ಹೆಜಮಾಡಿ ಟೋಲ್ ಗೇಟ್ ಬಳಿ ಪ್ರಯಾಣಿಕರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿರುವ ದೃಶ್ಯ ಬೆಳಗ್ಗಿನಿಂದ ಸಾಮಾನ್ಯವಾಗಿದೆ. ದ್ವಿಚಕ್ರ ವಾಹನವೂ ಸೇರಿದಂತೆ ಯಾವುದೇ ವಾಹನಗಳನ್ನು ಗಡಿ ದಾಟಲು ಪೊಲೀಸರು ಬಿಡುತ್ತಿಲ್ಲ. ಇದರಿಂದಾಗಿ ಸಂಚಾರ ಸ್ಥಗಿತಗೊಂಡಿರುವ ಮಾಹಿತಿ ಇಲ್ಲದೆ ಹೊರಜಿಲ್ಲೆಯ ಪ್ರಯಾಣಿಕರು ಪರದಾಡುವಂತಾಯಿತು.

ಮೈಸೂರು ಸಂಪೂರ್ಣ ಲಾಕ್‌ ಔಟ್‌; ಏನಿದೆ, ಏನೇನಿಲ್ಲ?ಮೈಸೂರು ಸಂಪೂರ್ಣ ಲಾಕ್‌ ಔಟ್‌; ಏನಿದೆ, ಏನೇನಿಲ್ಲ?

ರಸ್ತೆ ತಡೆದಿರುವ ಕಾರಣ ಹೆಜಮಾಡಿಯಲ್ಲಿ ತೀವ್ರ ವಾಹನದಟ್ಟಣೆ ಉಂಟಾಗಿದೆ. ಇಂದು ಮುಂಜಾನೆಯಿಂದ ಹೆಜಮಾಡಿ ಟೋಲ್ ಗೇಟ್ ಬಳಿ ರಸ್ತೆತಡೆ ಕಾರ್ಯಾಚರಣೆ ನಡೆಯುತ್ತಿದೆ. ಈಗ ಜನರ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ವಾಹನ ನಿಷೇಧ ಸಡಿಲಿಕೆ ಮಾಡಲಾಯಿತು.

Confusion Over Mangaluru Udupi Transportation Due To Coronavirus

 ಕೊರೊನಾ ನಿಗ್ರಹಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ತುರ್ತು ನಿರ್ಧಾರಗಳ ಪಟ್ಟಿ ಕೊರೊನಾ ನಿಗ್ರಹಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ತುರ್ತು ನಿರ್ಧಾರಗಳ ಪಟ್ಟಿ

ಪೊಲೀಸ್ ವರಿಷ್ಠಾಧಿಕಾರಿಗಳ ಸ್ಪಷ್ಟ ಆದೇಶವಿಲ್ಲದ ಕಾರಣ ಪೊಲೀಸರಿಗೂ ವಾಹನ ತಡೆ ನಡೆಸಲು ಸಾಧ್ಯವಾಗುತ್ತಿಲ್ಲ. ರಜೆ ಆರಂಭವಾದ ಕಾರಣ ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಹೊರಟ ಪೋಷಕರಿಗೂ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಸ್ಪಷ್ಟ ಯೋಜನೆ ರೂಪಿಸದೆ ರಸ್ತೆ ತಡೆದ ಪೊಲೀಸರು ಪೇಚಿಗೀಡಾಗುವಂತಾಗಿದೆ.

English summary
Udupi border hejamadi has been blocked by police following coronavirus case in Mangaluru. This has created some confusion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X