ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇವಾಲಯದಿಂದ ಊಟ, ಆಕ್ರೋಶ

By Manjunatha
|
Google Oneindia Kannada News

ಕೊಲ್ಲೂರು, ಜನವರಿ 09: ಬೈಂದೂರಿನಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಆಹಾರ ಪೂರೈಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಹಾಗೂ ಈ ಬಗ್ಗೆ ದತ್ತಿ ಇಲಾಖೆಗೆ ದೂರು ನೀಡಲಾಗಿದ್ದು, ದೂರಿನ ಬಗ್ಗೆ ದೇವಾಲಯ ಆಡಳಿತ ಮಂಡಳಿ ಸ್ಪಷ್ಟೀಕರಣವನ್ನೂ ನೀಡಿದೆ.

ಕೊಲ್ಲೂರು ದೇವಸ್ಥಾನದಿಂದ ಆಹಾರ ತುಂಬಿಸಿಕೊಂಡು ಲಾರಿಯಲ್ಲಿ ಬೈಂದೂರಿನ ಸಮಾವೇಶಕ್ಕೆ ಸಾಗಿಸುತ್ತಿರುವುದನ್ನು ಕೆಲವು ಯುವಕರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಮಾಡಿದ ಯುವಕರು ವಿಶ್ವ ಹಿಂದೂ ಪರಿಷತ್ ಸದಸ್ಯರು ಎಂದು ಹೇಳಲಾಗಿದೆ.

Complaint against Kollur Mukambika Temple for supplying food to CM's Program

ವಿಡಿಯೋ ವೈರಲ್ ಆಗುತ್ತಿದ್ದಂತೆ, ದೇವಾಲಯಕ್ಕೆ ನೀಡಿದ ದೇಣಿಗೆಯನ್ನು ಬೇರೆಯ ಉದ್ದೇಶಕ್ಕಾಗಿ ಬಳಸದಂತೆ ದತ್ತಿ ಕಾನೂನಿನಲ್ಲಿ ಸೂಚಿಸಲಾಗಿದೆ, ಆದರೂ ಕೂಡ ಕೊಲ್ಲೂರು ಮೂಕಾಂಬಿಕೆ ದೇವಾಲಯದಿಂದ ಸಾಧನಾ ಸಮಾವೇಶಕ್ಕೆ ಊಟ ಸರಬರಾಜು ಮಾಡಿ ದೇವಾಲಯವು ಕಾನೂನು ಉಲ್ಲಂಘಿಸಿದೆ ಎಂದು ಭಾರತ ಪುನರುತ್ಥಾನ ಟ್ರಸ್ಟ್ ವತಿಯಿಂದ ಹಿಂದೂ ದತ್ತಿ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ದೂರಿನ ಪ್ರತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Complaint against Kollur Mukambika Temple for supplying food to CM's Program

ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೊಲ್ಲೂರು ಮೂಕಾಂಬಿಕೆ ದೇವಾಲಯ ಟ್ರಸ್ಟ್ 'ಸರ್ಕಾರಿ ಕಾರ್ಯಕ್ರಮಕ್ಕೆ ಆಹಾರ ಸರಬರಾಜು ಮಾಡಲು ಕಾನೂನಿನಲ್ಲಿ ಅವಕಾಶ ಇದೆ ಹಾಗಾಗಿ ನಾವು ಪ್ರಸಾದ ಸರಬರಾಜು ಮಾಡಿದ್ದೇವೆ, ಅಷ್ಟೇ ಅಲ್ಲದೆ ದೇವಾಲಯಕ್ಕೆ ಹೊರೆ ಆಗಬಾರದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಇದಕ್ಕೆಂದೇ ಒಂದು ಲಕ್ಷ ರೂಪಾಯಿ ಹಣವನ್ನು ಚೆಕ್ ಮೂಲಕ ದೇವಾಲಯಕ್ಕೆ ದಾನ ನೀಡಿದ್ದಾರೆ' ಎಂದು ಹೇಳಿದ್ದಾರೆ.

English summary
Food supplied from Kollur Mukambika temple to CM's Sadana Samavesha held in Byndoor. Now some Hindu activists complaint to endowment department against the temple alleging violating endowment law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X