ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಟ ರಕ್ಷಣಾ ಪಡೆಯಿಂದ ಪಶ್ಚಿಮ ಕರಾವಳಿಯಲ್ಲಿ 2 ರಾಡಾರ್ ಸ್ಟೇಷನ್

|
Google Oneindia Kannada News

ಮಂಗಳೂರು, ಫೆಬ್ರವರಿ 01 : ಪಶ್ಚಿಮ ಕರಾವಳಿ ಸಮುದ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಎರಡು ನೂತನ ರಾಡಾರ್ ಗಳನ್ನು ಅಳವಡಿಸಲು ಭಾರತೀಯ ತಟ ರಕ್ಷಣಾ ಪಡೆ ಮುಂದಾಗಿದೆ.

ಪಶ್ಚಿಮ ಕರಾವಳಿಯ ಆಳ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಣ್ಗಾವಲಿಡುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯಲ್ಲಿ ಹೊಸ ಎರಡು ರಾಡಾರ್ ಕೇಂದ್ರಗಳು ತಲೆ ಎತ್ತಲಿವೆ ಎಂದು ಕರಾವಳಿ ರಕ್ಷಣಾ ಪಡೆ ಡಿಐಜಿ ಹಾಗೂ ಕಮಾಂಡರ್ ಎಸ್.ಎಸ್.ದಾಸಿಲ ತಿಳಿಸಿದ್ದಾರೆ.

ಕರಾವಳಿಯಲ್ಲಿ ಅವಧಿಗೂ ಮುನ್ನ ಫಲ ನೀಡಿದ ಮರಗಳು, ತಜ್ಞರ ಅಭಿಪ್ರಾಯವೇನು?ಕರಾವಳಿಯಲ್ಲಿ ಅವಧಿಗೂ ಮುನ್ನ ಫಲ ನೀಡಿದ ಮರಗಳು, ತಜ್ಞರ ಅಭಿಪ್ರಾಯವೇನು?

ಬೇಲೆಕೇರಿಯಲ್ಲಿ ಈಗಾಗಲೇ ರಾಡಾರ್ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮಗೊಂಡಿದೆ ಎಂದ ದಾಸಿಲ ಕುಂದಾಪುರದ ಲೈಟ್ ಹೌಸ್‌ನಲ್ಲಿ ರಾಡಾರ್ ಕೇಂದ್ರ ನಿರ್ಮಾಣ ಆಗಲಿದೆ. ಕರಾವಳಿ ತೀರದ ಭಟ್ಕಳ ಹಾಗೂ ಸುರತ್ಕಲ್ ಗಳಲ್ಲಿ ಈಗಾಗಲೇ ರಾಡಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

Coast guard going to setup 2 radar station in Coastal Karnataka:Surendra Sing Dasila

ಈ ಕೇಂದ್ರಗಳು ಸಮುದ್ರ ತಟದಿಂದ ಆಳ ಸಮುದ್ರದಲ್ಲಿ 60 ರಿಂದ80 ನಾಟಿಕಲ್ ಮೈಲ್ ದೂರದವರೆಗೆ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇರಿಸಬಲ್ಲವು. ಈ ರಾಡಾರ್‌ಗಳು ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿವೆ.

ಇನ್ನು ಮುಂದೆ ಸೈಕ್ಲೋನ್ ಕಡಲತಡಿಗೆ ಅಪ್ಪಳಿಸುವ ಮುಂಚೆಯೇ ಮೊಳಗಲಿದೆ ಸೈರನ್!ಇನ್ನು ಮುಂದೆ ಸೈಕ್ಲೋನ್ ಕಡಲತಡಿಗೆ ಅಪ್ಪಳಿಸುವ ಮುಂಚೆಯೇ ಮೊಳಗಲಿದೆ ಸೈರನ್!

ಸಮುದ್ರದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಜತೆಗೆ ಸಂಕಷ್ಟ, ಅಪಾಯದಲ್ಲಿರುವ ಮೀನುಗಾರರಿಗೆ ತಕ್ಷಣದ ಮಾನವೀಯ ನೆರವನ್ನು ಕೂಡಾ ತಟರಕ್ಷಣಾ ಪಡೆಯ ನೌಕೆಗಳ ಮೂಲಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

English summary
Speaking to media persons in Mangaluru DIG Coast Guard Surendra Sing Dasila said that for coastal surveillance two more radar station going to set up in coastal Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X