ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಡುಬಿದ್ರಿ ಬಾಲ ಗಣಪತಿ ಶೋಭಾಯಾತ್ರೆಯಲ್ಲಿ ಇತ್ತಂಡಗಳ ಹೊಡೆದಾಟ; ಒಬ್ಬನಿಗೆ ಗಂಭೀರ ಗಾಯ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 10: ಉಡುಪಿ ಜಿಲ್ಲೆಯ ಪಡುಬಿದ್ರಿ ಪ್ರಸಿದ್ಧ ಬಾಲ ಗಣಪತಿ ಶೋಭಾಯಾತ್ರೆಯ ಸಂದರ್ಭ ಹಿಂದೂ ಸಂಘಟನೆಗಳ ನಡುವೆ ನಡೆದ ಹೊಡೆದಾಟ ನಡೆದಿದೆ.

ದೈವಪಾತ್ರಿಗೆ ಅಣಕ: ಕ್ಷಮೆ ಯಾಚಿಸಿದ ವೇಷಧಾರಿದೈವಪಾತ್ರಿಗೆ ಅಣಕ: ಕ್ಷಮೆ ಯಾಚಿಸಿದ ವೇಷಧಾರಿ

ಈ ಹೊಡೆದಾಟದಲ್ಲಿ ಕೃಷ್ಣ ಎಂಬಾತನ ತಲೆಗೆ ಕಲ್ಲೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ ಚತುರ್ಥಿಗೆ ಪಡುಬಿದ್ರೆಯಲ್ಲಿ ವರ್ಷಂಪ್ರತಿ ಗಣಪತಿ ಇರಿಸಲಾಗುತ್ತದೆ. ಒಂದೂವರೆ ತಿಂಗಳು ಈ ಗಣಪತಿಯನ್ನು ಕೂರಿಸಲಾಗುತ್ತದೆ. ಒಂದೂವರೆ ತಿಂಗಳುಗಳ ಕಾಲ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ ನಂತರ ವೈಭವದ ಶೋಭಾಯಾತ್ರೆ ಮೂಲಕ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ. ಈ ಶೋಭಾಯಾತ್ರೆ ಸಂದರ್ಭ ನಾಸಿಕ್ ಬ್ಯಾಂಡ್ ಮತ್ತು ಚೆಂಡೆಯ ತಂಡಗಳ ನಡುವೆ ತಿಕ್ಕಾಟ ನಡೆದಿದೆ.

Clash Between Hindu Groups In Bala Ganapathi Shobha Yatra in Padubidri

ನಾಸಿಕ್ ಬ್ಯಾಂಡ್ ತಂಡದ ಅತಿಯಾದ ಸದ್ದು, ಜೊತೆಗೆ ಯುವಕರ ಕುಣಿತ ಗದ್ದಲ ಎಬ್ಬಿಸಿತ್ತು. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗಿದೆ. ಸಾವಿರಾರು ಜನ ಜಮಾಯಿಸಿದ್ದ ಮೆರವಣಿಗೆಯ ಗಲಾಟೆಗೆ ಪೊಲೀಸರು ಮಧ್ಯಪ್ರವೇಶ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಕೃಷ್ಣ ಎಂಬಾತನ ತಲೆಗೆ ಕಲ್ಲೇಟು ಬಿದ್ದಿದೆ. ಈ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Clash Between Hindu Groups In Bala Ganapathi Shobha Yatra in Padubidri

ಬಾಲಗಣಪತಿ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗವಹಿಸಿದ್ದರು. ಹೆದ್ದಾರಿ ಮೆರವಣಿಗೆ ಸಂದರ್ಭ ಸಂಪೂರ್ಣ ಸಂಚಾರ ಅಸ್ತವ್ಯಸ್ತ ಆಗಿತ್ತು. ಓರ್ವ ಎಸ್ ಐ ನಾಲ್ವರು ಕಾನ್ ಸ್ಟೇಬಲ್ ಗಳು ಶೋಭಾಯಾತ್ರೆಗೆ ನೇಮಿಸಲಾಗಿತ್ತು.

English summary
The clash between Hindu groups took place during the famous Bala Ganapathi Shobha Yatra in Padubidri in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X