ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನ ಮೆಚ್ಚಿದ ಸಂಸದ ಜೆಪಿ ಹೆಗ್ಡೆ ಪಾದಯಾತ್ರೆ

By Mahesh
|
Google Oneindia Kannada News

ಚಿಕ್ಕಮಗಳೂರು, ಮಾ.18: ಯುಪಿಎ ಸರ್ಕಾರ ಅಡಿಕೆ ನಿಷೇಧದ ಬಗ್ಗೆ ಪ್ರಸ್ತಾವನೆ ಇಟ್ಟಾಗ ಈ ಭಾಗದ ಸಂಸದರಾದ ಜಯಪ್ರಕಾಶ್ ಹೆಗ್ಡೆ ಅವರು ಸರಿಯಾಗಿ ದನಿ ಎತ್ತಲಿಲ್ಲ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾಡಿರುವ ಆರೋಪಕ್ಕೆ ಜೆಪಿ ಹೆಗ್ಡೆ ಅವರು ತಕ್ಕ ಉತ್ತರ ನೀಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿರುವ ಹಾಲಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಡಿಕೆ ಬೆಳೆಗಾರರ ಪರವಾಗಿ ಯಾವುದೇ ಹೇಳಿಕೆ ನೀಡದೆ ಸರಿಯಾಗಿ ಆಲೋಚನೆ ಮಾಡದೆ ಈಗ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ಮೇಲೆ ಅಡಿಕೆ ಬೆಳೆಗಾರರನ್ನು ಮರೆತುಬಿಟ್ಟರು. ಆಗ ಮೌನವಾಗಿದ್ದು, ಈಗ ಯುಪಿಎ ವಿರುದ್ಧ ದನಿ ಎತ್ತುವುದು ಏಕೆ? ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ. [ಮೋದಿ ಗೆಲ್ಲಿಸಿ ದೇಶ, ಮಹಿಳೆ ರಕ್ಷಿಸಿ : ಶೋಭಾ]

ಗೋರಕ್ ಸಮಿತಿ ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದೆ. ಅದರಂತೆ ಹಲವಾರು ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಲಾಗಿದೆ. ಸಂಸದನಾಗಿ ಒಂದು ವರ್ಷ ಮಾಡಿರುವ ಕೆಲಸಗಳಿಗೂ ಐದು ವರ್ಷಗಳ ಹಿಂದೆ ಆಗಿದ್ದ ಕೆಲಸಕ್ಕೂ ತಾಳೆ ಹಾಕಿ ನೋಡಲಿ ಎಂದು ಹೆಗ್ಡೆ ಹೇಳಿದ್ದಾರೆ. ಉಡುಪಿ-ಮಣಿಪಾಲ ರಸ್ತೆ ವಿಸ್ತರಣೆ ಗೊಂದಲ, ಕಡೂರು-ಚಿಕ್ಕಮಗಳೂರು-ಸಕಲೇಶಪುರ ರೈಲು ಮಾರ್ಗ ಮುಂತಾದ ವಿಚಾರಗಳ ಬಗ್ಗೆ ಹೆಗ್ಡೆ ಹೇಳಿದ್ದೇನು? ಮುಂದೆ ಓದಿ...

ಉಡುಪಿ-ಮಣಿಪಾಲ ರಸ್ತೆ ಚತುಷ್ಪಥ ಬಗ್ಗೆ

ಉಡುಪಿ-ಮಣಿಪಾಲ ರಸ್ತೆ ಚತುಷ್ಪಥ ಬಗ್ಗೆ

ಉಡುಪಿ-ಮಣಿಪಾಲ ರಸ್ತೆ ಚತುಷ್ಪಥ ಮಾಡಲು ಮತ್ತೆ ಭೂ ಸ್ವಾಧೀನ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಸಂಸದ ಜಯಪ್ರಕಾಶ್ ಹೆಗ್ಡೆ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಜನತೆ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಭೂ ಸ್ವಾಧೀನ ಈಗಾಗಲೇ ಆಗಿದೆ ಎಂದರು. ಅಡಿಕೆ ನಿಷೇಧ ಬಗ್ಗೆ ಆತಂಕ ಬೇಡ. ಇದಕ್ಕೆ ಆಸ್ಪದ ನೀಡಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಒಂದು ವರ್ಷ ಅವಧಿಯಲ್ಲಿ ಅನುಷ್ಠಾನಗೊಂಡಿದ್ದು

ಒಂದು ವರ್ಷ ಅವಧಿಯಲ್ಲಿ ಅನುಷ್ಠಾನಗೊಂಡಿದ್ದು

*ಕಡೂರು-ಚಿಕ್ಕಮಗಳೂರು ರೈಲ್ವೆ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಂಡಿದ್ದು
* ಚಿಕ್ಕಮಗಳೂರು- ಸಕಲೇಶಪುರ ರೈಲು ಮಾರ್ಗಕ್ಕೆ ಶಂಕು ಸ್ಥಾಪನೆ
* ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಕ್ಷೇತ್ರದಲ್ಲಿ 77.71 ಕೋಟಿ ರು ಕಾಮಗಾರಿ
* ಕೇಂದ್ರ ರಸ್ತೆ ನಿಧಿಯಿಂದ 45 ಕೋಟಿ, ಸಂಸದರ ಅನುದಾನ 7.5 ಕೋಟಿ ರು, ಸಂಸದರ ಹಿಂದಿನ ನಿಧಿ 1.30 ಕೋಟಿ ರುಗಳಲ್ಲಿ ವಿವಿಧ ಅಭಿವೃದ್ಧಿ
* ಮೂಡಿಗೆರೆ -ಚಿಕ್ಕಮಗಳೂರು -ಕಡೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ.

ಇನ್ನಷ್ಟು ಪ್ರಸ್ತಾವನೆಗಳಿಗೆ ಅನುಮೋದನೆ

ಇನ್ನಷ್ಟು ಪ್ರಸ್ತಾವನೆಗಳಿಗೆ ಅನುಮೋದನೆ

* ತುಮಕೂರು-ಶಿವಮೊಗ್ಗ ರಸ್ತೆ ಚತುಷ್ಪತ ರಸ್ತೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
* ಭದ್ರಾವತಿ-ಎನ್ ಆರ್ ಪುರ, ಶೃಂಗೇರಿ ರೈಲ್ವೆ ಮಾರ್ಗಕ್ಕೂ ಪ್ರಸ್ತಾವನೆ

ಫೇಸ್ ಬುಕ್ ನಲ್ಲಿ ಭಾರತ್ ನಿರ್ಮಾಣ್ ಯಾತ್ರೆ ಪಾದಯಾತ್ರೆಗಳ ಬಗ್ಗೆ ಅಭಿಮಾನಿಗಳಿಗೆ ಮತದಾರರಿಗೆ ಕಾಲ ಕಾಲಕ್ಕೆ ಸೂಚನೆ ನೀಡುವ ಮೂಲಕ ಜೆಪಿ ಹೆಗ್ಡೆ ಅವರು ಜನಪ್ರಿಯತೆ ಗಳಿಸಿದ್ದಾರೆ.

ಭಾರತ್ ನಿರ್ಮಾಣ್ ಯಾತ್ರೆ ಎಲ್ಲೆಲ್ಲಿ ಸಾಗಿದೆ

ಭಾರತ್ ನಿರ್ಮಾಣ್ ಯಾತ್ರೆ ಎಲ್ಲೆಲ್ಲಿ ಸಾಗಿದೆ

ಅಖಿಲ ಭಾರತ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರವೇಶಿಸಿದ ಜೆಪಿ ಹೆಗ್ಡೆ ಅವರು 2009ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದ ಅವರು ಡಿ.ವಿ.ಸದಾನಂದ ಗೌಡರಿಂದ ಕೇವಲ 27,018 ಮತಗಳಿಂದ ಸೋತರೂ ಕ್ಷೇತ್ರದಾದ್ಯಂತ ಸಂಚರಿಸಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.

ಈಗ ಭಾರತ್ ನಿರ್ಮಾಣ್ ಯಾತ್ರೆ, ಪಾದಯಾತ್ರೆಗೂ ಮುನ್ನ ಪಕ್ಷದ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಲು ಮಾ.13ರಿಂದ ಆರಂಭಿಸಿದರು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ, ಎನ್ ಆರ್ ಪುರ, ಆಲ್ದೂರು, ಬಾಳೆಹೊನ್ನೂರು,ಕಳಸ, ಉಡುಪಿ, ಕಾರ್ಕಳ, ಕುಂದಾಪುರ ಸಮಾವೇಶ ನಡೆಸಿದ್ದಾರೆ.

English summary
Udupi-Chikmagalur Congress candidate Jayaprakash Hegde begin his campaign much before his counterpart Shobha Karandlaje. MP JP Hegde spoke about Areca nuts, Kadur-Chikmagalur railway and many issued in the constituency during his Padayatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X