ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಸಂಭ್ರಮದ ತೆನೆ ಹಬ್ಬ, ಕಬ್ಬು ತಿಂದು ಖುಷಿಪಟ್ಟ ಕ್ರೈಸ್ತರು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್.08: ಕರಾವಳಿಯಾದ್ಯಂತ ಇಂದು ಶನಿವಾರ ಕ್ರೈಸ್ತರು ಭಕ್ತಿ, ಶ್ರದ್ಧೆಯಿಂದ ತೆನೆ ಹಬ್ಬ ಆಚರಿಸಿದರು. ಮಾತೆ ಮೇರಿ ಹುಟ್ಟುಹಬ್ಬ ದಿನವನ್ನು ಈ ದಿನ ಕ್ರೈಸ್ತರು ತೆನೆ ಹಬ್ಬವನ್ನಾಗಿ ಆಚರಿಸುವುದು ಪದ್ಧತಿ.

ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಗೆ ಬೆಳಗಿನಿಂದಲೇ ಆಗಮಿಸಿದ ಭಕ್ತರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಲಿ ಪೂಜೆ ನಡೆಸಿದರು. ನಂತರ ಶುಭಾಷಯಗಳನ್ನು ಹಂಚಿಕೊಂಡರು.

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ 'ಮೊಂತಿ ಫೆಸ್ತ್': ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?ಕರಾವಳಿ ಕ್ರೈಸ್ತರ ವಿಶೇಷ ಹಬ್ಬ 'ಮೊಂತಿ ಫೆಸ್ತ್': ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

ಮುಖ್ಯವಾಗಿ ಭತ್ತದ ತೆನೆ, ಧವಸ ಧಾನ್ಯಗಳನ್ನು ಮೇರಿಯಮ್ಮನಿಗೆ ಸಮರ್ಪಿಸುವ ಮೂಲಕ ಹೊಸ ಫಲಗಳನ್ನು ಸ್ವಾಗತಿಸುವುದೂ ಈ ದಿನದ ಮಹತ್ವ. ತೆನೆ ಹಬ್ಬದಂದು ಹೂವಿಗೆ ವಿಶೇಷ ಮಹತ್ವ. ಈ ಹಿನ್ನೆಲೆಯಲ್ಲಿ ಕ್ರೈಸ್ತ ಬಾಂಧವರು ಇಂದು ಬೆಳಗ್ಗೆಯೇ ಹೂಗಳನ್ನು ಹಿಡಿದುಕೊಂಡು ಚರ್ಚ್ ಗಳಿಗೆ ಬಂದರು.

Christians celebrated Nativity fest throughout the Coast

ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೂಗಳನ್ನು ತಂದು ಬಲಿಪೀಠಕ್ಕೆ ಅರ್ಪಿಸಿ ಕೃತಾರ್ಥರಾದರು. ದೂರದೂರುಗಳಲ್ಲಿರುವ ಬಂಧುಗಳು ಈ ದಿನ ಒಂದೇ ಕಡೆ ಸೇರುವುದು ವಾಡಿಕೆ. ತೆನೆ ಹಬ್ಬದಂದು ಬಂಧುಗಳು ಯಾವುದೇ ಊರಿನಲ್ಲಿರಲಿ, ಒಂದೆಡೆ ಸೇರಿ ಹೊಸ ಫಲಗಳ ಅಡುಗೆ ಸೇವಿಸಿ ಖುಷಿಪಡುತ್ತಾರೆ.

 ಚಿತ್ರಗಳು : ಕೊಡಗಿನಲ್ಲಿ ಸರಳವಾಗಿ ಕೈಲ್ ಮೂರ್ತ ಹಬ್ಬ ಆಚರಣೆ ಚಿತ್ರಗಳು : ಕೊಡಗಿನಲ್ಲಿ ಸರಳವಾಗಿ ಕೈಲ್ ಮೂರ್ತ ಹಬ್ಬ ಆಚರಣೆ

Christians celebrated Nativity fest throughout the Coast

ಈ ವರ್ಷ ಹೊಸದಾಗಿ ಬೆಳೆದ ಧವಸ ಧಾನ್ಯ, ತರಕಾರಿಗಳನ್ನು ಎಲ್ಲೇ ಇದ್ದರೂ ತಂದು ಅದನ್ನು ಸೇವಿಸುವ ಮೂಲಕ ಸಸ್ಯಾಹಾರ ವ್ರತ ಕೈಗೊಳ್ಳುತ್ತಾರೆ. ಕ್ರೈಸ್ತರಿಗೆ ಕಬ್ಬು ಈ ದಿನದ ಸಿಹಿ ತಿನಿಸು. ಬಂದವರಿಗೆ ಚರ್ಚ್ ಗಳಲ್ಲಿ ಹೇರಳವಾಗಿ ಕಬ್ಬು ಹಂಚುವುದು ದಿನದ ವಿಶೇಷ.

ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಮೊಸರು ಕುಡಿಕೆ ಉತ್ಸವಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಮೊಸರು ಕುಡಿಕೆ ಉತ್ಸವ

Christians celebrated Nativity fest throughout the Coast

ಕ್ರೈಸ್ತರ ಪ್ರಾಬಲ್ಯ ಹೆಚ್ಚಿರುವ ಉಡುಪಿ ನಗರ, ಕಲ್ಯಾಣಪುರ, ಹೂಡೆ, ಸಂತೆಕಟ್ಟೆ , ಶಂಕರಪುರ, ಕಟಪಾಡಿ, ಉದ್ಯಾವರ ಮುಂತಾದೆಡೆಗಳಲ್ಲಿ ಮೇರಿ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು.

English summary
Christians celebrated Nativity fest throughout the coast Today. It is customary for Christians to celebrate Mary's birthday as a Nativity fest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X