ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ 600 ಬಡವರಿಗೆ ಚಿಕನ್ ಬಿರಿಯಾನಿ ವಿತರಣೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 03: ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ದಾನಿಗಳಿಂದ ಮಧ್ಯಾಹ್ನದ ಅನ್ನದಾನ ಮತ್ತು ರಾತ್ರಿಯ ಊಟ ಎಲ್ಲೆಡೆ ನಡೆಯುತ್ತಿದೆ.

ಬಡವರು ಮತ್ತು ಅಶಕ್ತರ ಹೊಟ್ಟೆ ತಣಿಸುವುದು ಇದರ ಹಿಂದಿನ‌ ಉದ್ದೇಶವಾಗಿದೆ. ಉಡುಪಿಯಲ್ಲೂ ಹಲವು ಕಡೆಗಳಲ್ಲಿ ನಿರಂತರ ಅನ್ನದಾನ ಕಾರ್ಯ ನಡೀತಾ ಇದೆ. ಇಂದು ಬಡವರಿಗೆ ಮತ್ತು ಅಶಕ್ತರಿಗೆ ಬಿರಿಯಾನಿ ವಿತರಿಸಿದ್ದು ವಿಶೇಷವಾಗಿತ್ತು.

ಕ್ವಾರಂಟೈನ್ ಗಳು ಹೊರಬಂದರೆ ಕಠಿಣ ಕ್ರಮ: ಉಡುಪಿ ಡಿಸಿಕ್ವಾರಂಟೈನ್ ಗಳು ಹೊರಬಂದರೆ ಕಠಿಣ ಕ್ರಮ: ಉಡುಪಿ ಡಿಸಿ

ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪ ನಿತ್ಯ ದಾನಿಗಳ ಸಹಾಯದಿಂದ ಮಧ್ಯಾಹ್ನ‌ ಮತ್ತು ರಾತ್ರಿ ವೆಜ್ ಪುಲಾವ್ ಮತ್ತು ಮೊಟ್ಟೆ ವಿತರಿಸಲಾಗುತ್ತಿದೆ.

Chicken Biryani Distribute To Poor People In Udupi

ಆದರೆ ಇಂದು ಚಿಕನ್ ಬಿರಿಯಾನಿ ಮಾಡಿ ಬಡವರಿಗೆ ಹಂಚಲಾಯಿತು. ಸುಮಾರು ಆರು ನೂರಕ್ಕೂ ಅಧಿಕ ನಿರ್ಗತಿಕರು, ಅಶಕ್ತರು ಬಿರಿಯಾನಿ ಊಟದ ಪೊಟ್ಟಣ ಸ್ವೀಕರಿಸಿದರು. ಬಿರಿಯಾನಿ ವಿತರಿಸಲಾಗುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಸಾಕಷ್ಟು ಬಡವರು ಆಗಮಿಸಿದ್ದರು. ಇದನ್ನು ಮೊದಲೇ ಊಹಿಸಿದ್ದ ಸಮಾಜ ಸೇವಕರು ಸಾಮಾಜಿಕ ಅಂತರ ಕಾಯ್ದುಕೊಂಡೇ ಬಂದವರಿಗೆ ಬಿರಿಯಾನಿ ನೀಡಿ ಕಳಿಸಿದರು.

English summary
Today Biryani distributed to the poor and the disabled in Udupi City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X