ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ದಿನೇಶ್ ಅಮಿನ್ ಮಟ್ಟು ವಿರುದ್ಧ ಕೇಸ್ ಹಾಕಿದ ಚುನಾವಣಾ ಆಯೋಗ

|
Google Oneindia Kannada News

ಉಡುಪಿ, ಮಾರ್ಚ್ 20: ಉಡುಪಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹಾಗೂ ಇತರ ಐವರಿಗೆ ಸಂಕಷ್ಟ ಎದುರಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಭಾಷಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದ ಮೇಲೆ ದಿನೇಶ್ ಅಮೀನ್ ಮಟ್ಟು ಸಹಿತ ಐವರ ಮೇಲೆ ಚುನಾವಣಾ ಆಯೋಗ ಕೇಸು ದಾಖಲು ಮಾಡಿದೆ.

ಪ್ರಕಾಶ್ ರೈ ಈಗ ಮತ ವಿಭಜನೆಗೆ ಹೊರಟಿದ್ದಾರೆ:ದಿನೇಶ್ ಅಮೀನ್ ಮಟ್ಟು ಆರೋಪಪ್ರಕಾಶ್ ರೈ ಈಗ ಮತ ವಿಭಜನೆಗೆ ಹೊರಟಿದ್ದಾರೆ:ದಿನೇಶ್ ಅಮೀನ್ ಮಟ್ಟು ಆರೋಪ

ಉಡುಪಿಯಲ್ಲಿ ಮಾರ್ಚ್ 17 ರಂದು ಆಯೋಜಿಸಲಾಗಿದ್ದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ ಮಟ್ಟು, ಮಹೇಂದ್ರ ಕುಮಾರ್, ಇಂದೂಧರ ಹೊನ್ನಾಪುರ, ಜಿ ಎನ್ ನಾಗರಾಜ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು .

Case registered against Dinesha Amin Mattu and four others

ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ನಿಂದ ಈ ನಾಲ್ವರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದ ಎಂದು ಕೇಸ್ ದಾಖಲು ಮಾಡಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಮೃತ್ ಶೆಣೈ ಅವರ ಮೇಲು ಮೇಲೆ ಕೇಸು ದಾಖಲಿಸಲಾಗಿದೆ.

 ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 'ಕೈ' ತಪ್ಪಿದ ಲೆಕ್ಕಾಚಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 'ಕೈ' ತಪ್ಪಿದ ಲೆಕ್ಕಾಚಾರ

ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ದಿನೇಶ್ ಅಮೀನ್ ಮಟ್ಟು, ಉಡುಪಿ ಕೃಷ್ಣ ಮಠದಲ್ಲೂ ರಾಜಕೀಯ ಇದೆ. ಪೇಜಾವರ ಸ್ವಾಮಿಗಳು ಹಿಂದು ಯಾರು ಅಂತ ಹೇಳಬೇಕು? ಹಿಂದೂಗಳ ಪರ ಅಂತ ಧರ್ಮ ದ್ರೋಹ ಮಾಡ್ಬೇಡಿ ಎಂದು ಆರೋಪಿಸಿದ್ದರು.

 'ಬಿಜೆಪಿ ಪರ ಮಾತಾಡಿದ್ರೆ ದೇಶಭಕ್ತರು, ವಿರುದ್ಧವಾದರೆ ದೇಶದ್ರೋಹಿಗಳು' 'ಬಿಜೆಪಿ ಪರ ಮಾತಾಡಿದ್ರೆ ದೇಶಭಕ್ತರು, ವಿರುದ್ಧವಾದರೆ ದೇಶದ್ರೋಹಿಗಳು'

ಅದಲ್ಲದೇ ಪ್ರಕಾಶ್ ರೈ ವಿರುದ್ಧ ಮಾತನಾಡಿದ್ದ ದಿನೇಶ್ ಅಮೀನ್ ಮಟ್ಟು, ಪ್ರಕಾಶ್ ರೈ ಈಗ ಮತ ವಿಭಜನೆಗೆ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

English summary
A case has been registered against 5 people including former media advisor Dinesh Amin Mattu for violating the code of conduct and inciting speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X