ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ 50ಕ್ಕೂ ಹೆಚ್ಚು ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 19: ಬಾಬಾಸಾಹೇಬ್ ಅಂಬೇಡ್ಕರ್ ಅವರ 64ನೇ ಧರ್ಮ ಚಕ್ರ ಪ್ರವರ್ತನಾ ದಿನದ ಪ್ರಯುಕ್ತ ಉಡುಪಿಯಲ್ಲಿ ಹಲವು‌ ಮಂದಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. 64ನೇ ಧರ್ಮ ಚಕ್ರ ಪ್ರವರ್ತನಾ ದಿನದ ಆಚರಣೆ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ದಲಿತರಿಂದ ಭೌದ್ಧ ಧರ್ಮ ಸ್ವೀಕಾರ ನಡೆಯಿತು.

ಉಡುಪಿ ಜಿಲ್ಲಾ ಬೌದ್ಧ ಮಹಾ ಸಭಾದವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಜೀವನ ಬುದ್ಧ ವಿಹಾರ, ಕೊಳ್ಳೆಗಾಲ-ಮೈಸೂರಿನಿಂದ ಆಗಮಿಸಿದ್ದ ಸುಗತಪಾಲ ಭಂತೇಜಿ ಅವರು ಮತಾಂತರಗೊಂಡ ಬೌದ್ಧರಿಗೆ ಪ್ರಮಾಣವಚನ ಬೋಧಿಸಿದರು. ಮತಾಂತರಗೊಂಡ ಬೌದ್ಧರು ಈ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ನವರಾತ್ರಿ ಎಫೆಕ್ಟ್: ಉಡುಪಿ ಮಲ್ಲಿಗೆ ಬೆಲೆ ಗಗನಕ್ಕೆನವರಾತ್ರಿ ಎಫೆಕ್ಟ್: ಉಡುಪಿ ಮಲ್ಲಿಗೆ ಬೆಲೆ ಗಗನಕ್ಕೆ

ಉಡುಪಿ ಜಿಲ್ಲೆಯಲ್ಲಿ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಸಹಾಯಧನ ನೀಡಿ ಸನ್ಮಾನಿಸಲಾಯಿತು.

Buddhism Is Accepted By Over 50 Dalits In Udupi This Year

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ದಲಿತ ಮುಖಂಡ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ನಾರಾಯಣ ಮಣೂರು, ಶೇಖರ್ ಹೆಜಮಾಡಿ, ಶೇಖರ ಹಾವಂಜೆ, ಶಂಭು ಮಾಸ್ಟರ್, ಪುಷ್ಪಾಕರ್, ಮಂಜುನಾಥ್ ಗಿಳಿಯಾರು, ಅಣ್ಣಪ್ಪ ನಕ್ರೆ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್. ವಿ, ಕೀರ್ತಿಕುಮಾರ್ ಪಡುಬಿದ್ರಿ, ವಿಠಲ ತೊಟ್ಟಂ, ರವೀಂದ್ರ ಬಂಟಕಲ್ಲು, ರಾಘವೇಂದ್ರ ಬೆಳ್ಳೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

English summary
Many Dalits converted to Buddhism in Babasaheb Ambedkar's 64th Dharma Chakra Parivartana Day In Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X