ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಾಪುರದಲ್ಲಿ “ಸಿಂಪಲ್ಲಾಗ್ ಒಂದು ಮದುವೆ ಸ್ಟೋರಿ”

“ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ” ಹೀಗಂತ ಒಂದು ಮಾತು ಇದೆ. ಇದಕ್ಕೆ ಯಾವುದೇ ಜಾತಿ ಅಥವಾ ಧರ್ಮ ಅಡ್ಡವಾಗುವುದಿಲ್ಲ. ಈ ಮಾತಿಗೆ ನಿದರ್ಶನವೆಂಬಂತೆ ಕುಂದಾಪುರದಲ್ಲಿ ಬೇರೆ ಬೇರೆ ಧರ್ಮದ ಜೋಡಿಯೊಂದು ಮದುವೆಯಾದ ಅಪರೂಪದ ಘಟನೆ ನಡೆದಿದೆ.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 03: "ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ" ಹೀಗಂತ ಒಂದು ಮಾತು ಇದೆ. ಇದಕ್ಕೆ ಯಾವುದೇ ಜಾತಿ ಅಥವಾ ಧರ್ಮ ಅಡ್ಡವಾಗುವುದಿಲ್ಲ. ಈ ಮಾತಿಗೆ ನಿದರ್ಶನವೆಂಬಂತೆ ಕುಂದಾಪುರದಲ್ಲಿ ಬೇರೆ ಬೇರೆ ಧರ್ಮದ ಜೋಡಿಯೊಂದು ಮದುವೆಯಾದ ಅಪರೂಪದ ಘಟನೆ ನಡೆದಿದೆ.

ಕುಂದಾಪುರದ ಕುಂಭಾಶಿಯ ವಿನಯನಗರ ಕಾಲೋನಿಯ ವಿವೇಕ್ (24) ಹಾಗೂ ಸಲ್ಮಾ (22) ನಿವಾಸಿಗಳು ಪರಸ್ಪರ ಒಬ್ಬರೊಬ್ಬರನ್ನು ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಇಬ್ಬರ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಒಂದು ಹೆಜ್ಜೆ ಮುಂದೆ ಹೋದ ಹುಡುಗಿ ಧರ್ಮದ ಮುಖಂಡರು ಈ ಪ್ರೀತಿ ಮುಂದುವರೆದರೆ ಧರ್ಮದಿಂದ ಹೊರಹಾಕುವ ಎಚ್ಚರಿಕೆಯನ್ನೂ ನೀಡಿದ್ದರು.

Bride and groom from different communities unite amid opposition at Kundupar

ಈ ಮಧ್ಯೆ ವಿವೇಕ್ ತನ್ನ ಮನೆಯಲ್ಲಿ ತಾನು ಆ ಹುಡುಗಿಯನ್ನು ಮದುವೆಯಾದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂಬ ಬೆದರಿಕೆ ಒಡ್ಡಿದ. ಇದಕ್ಕೆ ಹೆದರಿದ ಆತನ ತಂದೆ-ತಾಯಿ ಮಗನ ಮದುವೆಗೆ ಅನುಮತಿ ನೀಡಿದರು. ಆದರೆ ಈ ಮದುವೆಗೆ ಹುಡುಗಿ ಮನೆಯವರಿಂದ ತೀವ್ರ ಪ್ರತಿರೋಧ ಬಂದಿತ್ತು. ಈ ಬಗ್ಗೆ ಫೆಬ್ರವರಿಯಲ್ಲಿ ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ಕೂಡಾ ನೀಡಲಾಗಿತ್ತು.

Bride and groom from different communities unite amid opposition at Kundupar

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ರಾಧಾ ದಾಸ್ ಮದುವೆಗೆ ಒಪ್ಪಿಗೆ ನೀಡಿದ್ದರು. ಅದಕ್ಕೂ ಮೊದಲು ಎರಡೂ ಕಡೆಯವರನ್ನು ವಿಶ್ವಾಸಕ್ಕೆ ತರಲು ಪ್ರಯತ್ನಿಸಿದಾಗ ಹುಡುಗಿ ಮನೆಯವರು ತಮ್ಮ ಧರ್ಮಕ್ಕೆ ಮತಾಂತರವಾದರೆ ಮಾತ್ರ ಈ ಮದುವೆಗೆ ಒಪ್ಪಿಗೆ ಸೂಚಿಸುತ್ತೇವೆಂಬ ಬೇಡಿಕೆ ಮುಂದಿಟ್ಟಾಗ ಸಲ್ಮಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು.ಇಷ್ಟೆಲ್ಲಾ ವಿರೋಧದ ಮಧ್ಯೆ ಮೇ 2ರಂದು ಕಾನೂನುಬದ್ದವಾಗಿ ಹಿಂದೂ ಸಂಪ್ರದಾಯದಂತೆ ಪರಸ್ಪರ ಹಾರ ಬದಲಿಸಿ ಮದುವೆಯಾದರು.

Bride and groom from different communities unite amid opposition at Kundupar

ಸಲ್ಮಾ ಮನೆಯಲ್ಲಿ ಮದುವೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಮತಾಂತರಕ್ಕೆ ಒಪ್ಪಿದರೆ ಕುಟುಂಬದೊಳಗೆ ಸೇರಿಸಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಆದ್ರೆ ಈ ಜೋಡಿ ಮತಾಂತರಕ್ಕೆ ಒಪ್ಪುತ್ತಿಲ್ಲ. ನಾನು ಸಲ್ಮಾ ಆಗಿಯೇ ಮುಂದುವರೆಯುತ್ತೇನೆ ಅಂತಿದ್ದಾರೆ ಈಕೆ. ನಾನೂ ನನ್ನ ಧರ್ಮ ಬಿಡುವುದಿಲ್ಲ ಎಂದಿರುವ ವಿವೇಕ್, ಎಷ್ಟೇ ಕಷ್ಟ ಬಂದ್ರೂ ಇಬ್ಬರೂ ಒಟ್ಟಿಗೆ ಬಾಳುತ್ತೇವೆ ಅಂತ ಕೈ ಕೈ ಹಿಡಿದು ನಿರ್ಧಾರ ಮಾಡಿದ್ದಾರೆ. ಮದುವೆಯ ನಂತರ ಪೊಲೀಸರು ರಕ್ಷಣೆ ಕೊಡಬೇಕು ಅಂತ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾ ದಾಸ್ ಒತ್ತಾಯಿಸಿದ್ದಾರೆ.

ಈ ವೇಳೆ ಹುಡುಗನ ತಂದೆ ಬಾಬು, ತಾಯಿ ಶಾರದೆ, ಪೊಲೀಸ್ ಸಿಬ್ಬಂದಿ, ಮಕ್ಕಳ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ವಿವೇಕ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಹುಡುಗಿ ಸಲ್ಮಾ ಕುಂದಾಪುರದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ.

English summary
Bride and groom from different communities unite amid opposition at Kundupar under the aegis of Mahila Santwana Kendra on May 02.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X