• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈಲು ಡಿಕ್ಕಿಯಾಗಿ ಅಪರೂಪದ ಕರಿಚಿರತೆ ಸಾವು

By ಉಡುಪಿ ಪ್ರತಿನಿಧಿ
|

ಉಡುಪಿ, ಫೆಬ್ರವರಿ 3: ಉಡುಪಿ ಜಿಲ್ಲೆಯಲ್ಲಿ ರೈಲು ಡಿಕ್ಕಿಯಾಗಿ ಅಪರೂಪದ ವನ್ಯಜೀವಿ ಕರಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಗ್ರಾಮದ ಬಡಾಕೆರೆ ರೈಲ್ವೆ ಮೇಲ್ಸೇತುವೆ ಬಳಿ ಈ ಘಟನೆ ಸಂಭವಿಸಿದೆ.

ಈ ಚಿರತೆಯು ಅಂದಾಜು ಮೂರ್ನಾಲ್ಕು ವರ್ಷ ಪ್ರಾಯದ್ದಾಗಿದ್ದು, ಈ ಗಂಡು ಚಿರತೆಯು ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದು ರೈಲ್ವೆ ಹಳಿ ದಾಟುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಉಡುಪಿ ಡಿಸಿ ಗ್ರಾಮ ವಾಸ್ತವ್ಯ: ವಿದ್ಯಾರ್ಥಿಗಳ ಜೊತೆ ಸಂವಾದ, ಗ್ರಾಮಸ್ಥರ ಅಹವಾಲು ಸ್ವೀಕಾರಉಡುಪಿ ಡಿಸಿ ಗ್ರಾಮ ವಾಸ್ತವ್ಯ: ವಿದ್ಯಾರ್ಥಿಗಳ ಜೊತೆ ಸಂವಾದ, ಗ್ರಾಮಸ್ಥರ ಅಹವಾಲು ಸ್ವೀಕಾರ

ಕೂಡಲೇ ಸ್ಥಳೀಯರು ಮೃತದೇಹವನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಮೃತದೇಹವನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

   ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್‌ವೈ ಭೋಜನಕೂಟ, ಹಲವರು ಶಾಸಕರು ಗೈರು | Oneindia Kannada

   ಉಡುಪಿ ಜಿಲ್ಲೆ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಅರಣ್ಯ ಪ್ರದೇಶ ಇದ್ದು, ಕರಿ ಚಿರತೆ ಅಲ್ಲಿಂದ ಆಹಾರಕ್ಕಾಗಿ ರೈಲ್ವೆ ಮೇಲ್ಸೇತುವೆ ಬಳಿ ಬಂದಿತ್ತು ಎನ್ನಲಾಗಿದೆ.

   English summary
   A rare Black Panther has been killed in a train collision in kundapura, Udupi district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X