ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಪ್ರಣಾಳಿಕೆಯಲ್ಲಿರುವುದು ಕಾಂಗ್ರೆಸ್ ಕಾಪಿ: ಮೊಯಿಲಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 5 : ಬಿಜೆಪಿ ಚುನಾವಣಾ ಪ್ರಣಾಳಿಕೆ ಕಾಂಗ್ರೆಸ್ ನ ನಕಲು. ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ಕೊಟ್ಟಿದ್ದಾರೆ. ಆದ್ರೆ ಯಡಿಯೂರಪ್ಪನವರು ಸಿಎಂ ಆಗೋದೇ ಇಲ್ಲ. ರಾಷ್ಟ್ರದ ಕಾವಲುಗಾರ ವಿದೇಶ ಪ್ರಯಾಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಮೊಯಿಲಿ ದೇಶದ ಬ್ಯಾಂಕುಗಳು ಲೂಟಿಯಾಗುತ್ತಿವೆ. ಬಿಜೆಪಿ ಕಾಂಗ್ರೆಸ್ ನ ಪ್ರಣಾಳಿಕೆ ನಕಲು ಮಾಡಿದೆ. 10 ಕ್ಕೂ ಹೆಚ್ಚು ಅಂಶಗಳನ್ನು ಕಾಪಿ ಮಾಡಿದ್ದಾರೆ. ನಮ್ಮ ಪ್ರಣಾಳಿಕೆ ನೋಡಿ ಬಿಜೆಪಿ ಹತಾಶವಾಗಿದೆ ಎಂದು ಆರೋಪಿಸಿದ್ದಾರೆ.

'ನಮ್ಮ ಕರ್ನಾಟಕಕ್ಕೆ ನಮ್ಮ ವಚನ': ಬಿಜೆಪಿ ಪ್ರಣಾಳಿಕೆ ಮುಖ್ಯಾಂಶ'ನಮ್ಮ ಕರ್ನಾಟಕಕ್ಕೆ ನಮ್ಮ ವಚನ': ಬಿಜೆಪಿ ಪ್ರಣಾಳಿಕೆ ಮುಖ್ಯಾಂಶ

ಬಿಜೆಪಿ ದೇಶಾದ್ಯಂತ ಸೋಲುತ್ತಿದೆ ಎಂದ ವೀರಪ್ಪ ಮೊಯಿಲಿ, ಕರ್ನಾಟಕ, ರಾಜಸ್ಥಾನ, ಛತ್ತೀಸ್ ಘಡದಲ್ಲಿ ಬಿಜೆಪಿ ಇತೀಶ್ರಿ ಹಾಡುತ್ತಿದೆ. ಮೋದಿಯ ಮಾತಿಗೆ ಕ್ರೆಡಿಬಿಲಿಟಿ ಇಲ್ಲ. ವೇದಿಕೆ ಹತ್ತಿ ಸುಳ್ಳನ್ನೇ ಮಾತನಾಡುತ್ತಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾತನಾಡುತ್ತಾರೆ. ಪಟೇಲ್ ಪ್ರಧಾನಿಯಾಗಿದ್ದರೆ ಆರ್ ಎಸ್ ಎಸ್ ಬ್ಯಾನ್ ಮಾಡುತ್ತಿದ್ದರು.

BJPs election manifesto copy of Congress

ನೆಹರೂ ಆರ್ ಎಸ್ ಎಸ್ ಬ್ಯಾನ್ ಮಾಡುವುದನ್ನು ತಪ್ಪಿಸಿದ್ದಾರೆ. ದೇಶದಲ್ಲಿ ದಲಿತ ವಿರೋಧಿ ವಾತಾವರಣ ಇದೆ. ಮಹಿಳೆಯರಿಗೂ ದೇಶದಲ್ಲಿ ರಕ್ಷಣೆಯಿಲ್ಲ. ಬಿಜೆಪಿ ನಾಯಕರೇ ಅತ್ಯಾಚಾರದಲ್ಲಿ ತೊಡಗಿದ್ದಾರೆ. ರೆಡ್ಡಿ ಬ್ರದರ್ಸ್ ಗೂ ಟಿಕೆಟ್ ಕೊಟ್ಟಿದ್ದಾರೆ. ರೆಡ್ಡಿ ಟೀಂ ನ ಕಿಂಗ್ ಪಿನ್ ರಾಮುಲು. ರಾಮುಲುಗೆ ಟಿಕೆಟ್ ಕೊಟ್ಟಿದ್ದಾರೆ.

ಆಂತರಿಕ ವಿಪ್ಲವ ಬಿಜೆಪಿಯಲ್ಲೇ ಜಾಸ್ತಿಯಿದೆ. ಮಲ್ಲಿಕಾರ್ಜುನ ಖರ್ಗೆಗೆ ಅತ್ಯುತ್ತಮ ಸ್ಥಾನ ಕೊಟ್ಟಿದ್ದೇವೆ. ಬಿಜೆಪಿಯಲ್ಲಿ ಎಷ್ಟು ದಲಿತ ಸಿಎಂ ಇದ್ದಾರೆ ಎಂಬುದನ್ನು ಬಿಜೆಪಿಯವರು ಹೇಳಲಿ. ಎನ್ ಡಿ ಎ ಯಲ್ಲಿ ಎಷ್ಟು ದಲಿತ ಮಂತ್ರಿ ಇದ್ದಾರೆ?. ಆದರೆ ಕಾಂಗ್ರೆಸ್ ದಲಿತರಿಗೆ ರಕ್ಷಣೆ ನೀಡಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್, ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

English summary
karnataka assembly elections 2018: Congress leader, Manifesto committee chairperson Veerappa Moily Said BJP's election manifesto copy of Congress. More than 10 elements are copied. BJP desperate by congress manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X