ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ-ಶೋಭಾ ಕರಂದ್ಲಾಜೆ

|
Google Oneindia Kannada News

ಮಂಗಳೂರು, ಮೇ 22: ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಬಿಜೆಪಿ ಸೀಟು ಕರ್ನಾಟಕದಿಂದ ಆಯ್ಕೆಯಾಗಲಿದೆ. ಕರ್ನಾಟಕದಿಂದ 20 ಕ್ಕೂ ಹೆಚ್ಚು ಸಂಸದರು ಮೋದಿ ಕೈ ಬಲ ಪಡಿಸುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವ ಸಮೀಕ್ಷೆ ಮೋದಿ ಸರ್ಕಾರದ ಪರವಾಗಿದೆ. ಈ ಬಾರಿ 325 ರಿಂದ 350 ಸೀಟು ಎನ್ ಡಿಎ ಪಾಲಾಗಲಿದೆ. ದೇಶದ ಹಲವಾರು ನಿರ್ಧಾರಕ್ಕೆ 2/3 ಮೆಜಾರಿಟಿ ಬೇಕು. ಈ ಬಾರಿ ಲೋಕಸಭೆ, ರಾಜ್ಯಸಭೆಯಲ್ಲಿ ಬಹುಮತ ಸಿಗಲಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ಅಳುಮುಂಜಿ ಆಗ್ಬೇಡಿ: ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಸಲಹೆ!ಅಳುಮುಂಜಿ ಆಗ್ಬೇಡಿ: ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಸಲಹೆ!

ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಲ್ಲ. ಪಕ್ಷ ಬಿಟ್ಟ ನಂತರ ಶಾಸಕರನ್ನು ಬಿಜೆಪಿ ಮಾತನಾಡಿಸುತ್ತದೆ. ಬಿಜೆಪಿ ಒಂದು ದೊಡ್ಡ ಸಮುದ್ರ. ಯಾರು ಬೇಕಾದ್ರೂ ಬಿಜೆಪಿಗೆ ಬರಬಹುದು ಎಂದು ಅವರು ಹೇಳಿದರು.

Bjp will win full Majority – Shobha Karandlaje

ಮುಖ್ಯಮಂತ್ರಿಯವರ ಟೆಂಪಲ್ ರನ್ ವಿಚಾರವಾಗಿ ಮಾತನಾಡಿದ ಅವರು, ಜನಸೇವೆಯೇ ಜನಾರ್ದನ ಸೇವೆ ಅಂತ ಹಿರಿಯರು ಹೇಳಿದ್ದಾರೆ. ನಾಡಿನ ದೊರೆಯಾದವ ಇದನ್ನು ಪಾಲಿಸಬೇಕು. ಸಿಎಂ ಜನತಾ ಸೇವೆ ಬಿಟ್ಟು ಬಿಟ್ಟಿದ್ದಾರೆ. ಜನಾರ್ದನ- ದೇವರು ಕೈ ಹಿಡಿಯಬಹುದು ಎಂಬುದು ಅವರ ನಂಬಿಕೆ ಇರಬಹುದು. ಕರ್ತವ್ಯ ನಿಭಾಯಿಸದವನನ್ನು ದೇವರೂ ಕೈ ಹಿಡಿಯಲ್ಲ. ಇದನ್ನು ಅರಿತು ಕೆಲಸ ಮಾಡಿದ್ರೆ ಅವರಿಗೆ ಒಳ್ಳೆಯದಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಬಿಜೆಪಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ನಾನಿಲ್ಲ : ಶೋಭಾ ಕರಂದ್ಲಾಜೆಬಿಜೆಪಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ನಾನಿಲ್ಲ : ಶೋಭಾ ಕರಂದ್ಲಾಜೆ

ವಿವಿಪ್ಯಾಟ್ ಮೇಲೆ ವಿಪಕ್ಷಗಳ ಸಂಶಯದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗೆದ್ದಾಗ ವಿವಿ ಪ್ಯಾಟ್ ಏನಾಗಿತ್ತು? ಕುಣಿಯೋಕೆ ಬಾರದವ ನೆಲ ಡೊಂಕು ಅಂದನಂತೆ. ಈ ಗಾದೆಯಂತಾಗಿದೆ ವಿಪಕ್ಷಗಳ ಆರೋಪ ಎಂದು ವ್ಯಂಗ್ಯವಾಡಿದರು.

'ಬಳೆ ತೊಟ್ಟುಕೊಳ್ಳಿ' ಎಂದ ಶೋಭಾಗೆ ಸಿದ್ದರಾಮಯ್ಯ ಕ್ಲಾಸ್'ಬಳೆ ತೊಟ್ಟುಕೊಳ್ಳಿ' ಎಂದ ಶೋಭಾಗೆ ಸಿದ್ದರಾಮಯ್ಯ ಕ್ಲಾಸ್

ಈಗ ಗೆಲ್ಲೋದಕ್ಕೆ ಆಗೋದಿಲ್ಲ ಅಂತ ಈ ಸಂಶಯ ವ್ಯಕ್ತಪಡಿಸುತ್ತಾರೆ. ಪ್ರಪಂಚದಲ್ಲೇ ಅತ್ಯಂತ ಉತ್ತಮ ತಾಂತ್ರಿಕ ವ್ಯವಸ್ಥೆ ಇದೆ. ಮತಯಂತ್ರ ಯಾರ ಕಾಲದಲ್ಲಿ ಆಗಿದೆ. ಎರಡು ಬಾರಿ ಯುಪಿಎ ಅಧಿಕಾರಕ್ಕೆ ಬಂದಾಗ ಆಕ್ಷೇಪಿಸಿಲ್ಲ ಯಾಕೆ. ಮತಯಂತ್ರ ದುರ್ಬಲವಾಗಿಲ್ಲ, ನೀವು ದುರ್ಬಲರು ಎಂದು ಕಿಡಿಕಾರಿದರು.

English summary
MP Shobha Karandlaje said that, most of the exit polls are predicted Majority to the Bjp. This time we will win in huge margin in Udupi – Chikkamagaluru loka sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X