ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಿದ ಚಡ್ಡಿಗಳನ್ನು ಕಾಂಗ್ರೆಸ್ ಕಚೇರಿಗೆ ಕಳುಹಿಸಿದ ಉಡುಪಿ ಬಿಜೆಪಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂ. 8: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚಡ್ಡಿ ವಾರ್ ಜೋರಾಗಿದೆ. ಉಡುಪಿ ಜಿಲ್ಲೆಯಿಂದಲೂ ಕಾಂಗ್ರೆಸ್ ಕಚೇರಿಗೆ ಚಡ್ಡಿ ಕಳುಹಿಸುವ ಅಭಿಯಾನ ನಡೆಯುತ್ತಿದೆ. ಉಡುಪಿಯಿಂದ ಬೆಂಗಳೂರಿನ ಕಾಂಗ್ರೆಸ್ ರಾಜ್ಯ ಕಚೇರಿಗೆ ಚಡ್ಡಿಗಳು ಕಳುಹಿಸಲು ಉಡುಪಿ ಬಿಜೆಪಿ ಚಡ್ಡಿ ಸಂಗ್ರಹ ಅಭಿಯಾನ ನಡೆಸುತ್ತಿದೆ. ಈಗಾಗಲೇ ವಿವಿಧ ಗ್ರಾಮಗಳಿಂದ ಚಡ್ಡಿಯನ್ನು ಸಂಗ್ರಹಿಸಲಾಗಿದ್ದು , ಬುಧವಾರ ಸಂಜೆ ಉಡುಪಿ ಜಿಲ್ಲೆಯಿಂದ ಬೆಂಗಳೂರಿಗೆ ಸಾವಿರಾರು ಹಳೆಯ ಚಡ್ಡಿಗಳನ್ನು ಕೋರಿಯರ್ ಮೂಲಕ ಪಾರ್ಸಲ್ ಮಾಡಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ಜಿಲ್ಲೆಯಲ್ಲೂ ಚಡ್ಡಿಗಳ ಸಂಗ್ರಹವಾಗುತ್ತಿದೆ. ಉಡುಪಿ ಜಿಲ್ಲೆಯಿಂದ ಬೆಂಗಳೂರಿಗೆ ಕೊರಿಯರ್ ನಲ್ಲಿ ಚಡ್ಡಿ ಕಳುಹಿಸುತ್ತೇವೆ. ಕಾಂಗ್ರೆಸ್ ಚಡ್ಡಿಯ ಬಗ್ಗೆ ಹಗುರವಾಗಿ ಮಾತನಾಡಿದೆ. ಆರೆಸ್ಸೆಸ್ ಚಡ್ಡಿಯ ತಾಕತ್ತು ಕಾಂಗ್ರೆಸ್ ಗೆ ಗೊತ್ತಿಲ್ಲ. ಚಡ್ಡಿಯ ವಿಚಾರಕ್ಕೆ ಬಂದರೆ ಕರ್ನಾಟಕದಿಂದಲೇ ಕಾಂಗ್ರೆಸ್ ನ ಅಂತಿಮಯಾತ್ರೆ ಆರಂಭವಾಗುತ್ತದೆ.

ಉಡುಪಿ; ರಸ್ತೆಗೆ ನಾಥುರಾಂ ಗೋಡ್ಸೆ ಹೆಸರು, ಬೋರ್ಡ್‌ ತೆರವುಉಡುಪಿ; ರಸ್ತೆಗೆ ನಾಥುರಾಂ ಗೋಡ್ಸೆ ಹೆಸರು, ಬೋರ್ಡ್‌ ತೆರವು

 ಹಳೆಯ ಚಡ್ಡಿಗಳನ್ನು ಸಿದ್ದರಾಮಯ್ಯ ನಲಪಾಡ್ ಸುಡಲಿ

ಹಳೆಯ ಚಡ್ಡಿಗಳನ್ನು ಸಿದ್ದರಾಮಯ್ಯ ನಲಪಾಡ್ ಸುಡಲಿ

ಕೊನೆಗೊಂದು ದಿನ ಅವರಿಗೆ ಚಡ್ಡಿ ಹಾಕಲು ಗತಿ ಇರೋದಿಲ್ಲ ಅದು ಗ್ಯಾರಂಟಿ. ನಾವು ಆರೆಸ್ಸೆಸ್ ನ ಖಾಕಿ ಚಡ್ಡಿ ಕಳುಹಿಸುವುದಿಲ್ಲ. ನಮ್ಮ ಜನ ಬಳಸದೆ ಇರುವ ಚಡ್ಡಿಗಳನ್ನು ಕಳಿಸುತ್ತೇವೆ. ಬಳಸಲು ಯೋಗ್ಯತೆ ಇಲ್ಲದ ಚಡ್ಡಿಗಳನ್ನು ಕಳಿಸುತ್ತೇವೆ. ಹಾಳಾದ, ಹರಿದುಹೋದ ಚಡ್ಡಿಗಳನ್ನು ಕಾಂಗ್ರೆಸ್ ಗೆ ಕಳಿಸುತ್ತೇವೆ ಅಂತಾ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಹೇಳಿದ್ದಾರೆ.

ಆರೆಸ್ಸೆಸ್ ಚಡ್ಡಿಯ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಗೆ ಇಲ್ಲ. ಈಗಾಗಲೇ ಜನತೆಯಲ್ಲಿ ಚಡ್ಡಿ ಕಳುಹಿಸಲು ಹೇಳಿದ್ದೇವೆ. ಅವರು ಚಡ್ಡಿ ಸುಡ್ತಾ ಇರಲಿ ನಾವು ಪೂರೈಸುತ್ತಾ ಇರುತ್ತೇವೆ ಅಂತಾ ಸುರೇಶ್ ನಾಯಕ್ ಕುಯಿಲಾಡಿ ಹೇಳಿದ್ದಾರೆ. ಇನ್ನು ಬಿಜೆಪಿ ಯ ಚಡ್ಡಿ ಸಂಗ್ರಹದ ಬಗ್ಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೆಪಿಸಿಸಿ ಕಚೇರಿಗೆ ಚಡ್ಡಿ ಕಳಿಸುತ್ತಿದ್ದಾರೆ. ಜಿಲ್ಲಾ ಕಚೇರಿಗೆ ಕಳಿಸಿದ್ದರೆ ಸೂಕ್ತ ಬಟವಾಡೆ ಮಾಡುತ್ತಿದ್ದೆವು. ನಮ್ಮ ಕೈಗೆ ಇನ್ನೂ ಚಡ್ಡಿ ಸಿಗಲಿಲ್ಲ, ಸಿಕ್ಕಿದರೆ ಬಟವಾಡೆ ಮಾಡುತ್ತೇವೆ ಅಂತಾ ವಿನಯ ಕುಮಾರ್ ಸೊರಕೆ ಲೇವಡಿ ಮಾಡಿದ್ದಾರೆ.

ಅಜ್ಜನ ನೆನಪಿಗಾಗಿ ಕೈಯ್ಯಾರೆ ಅಜ್ಜನ ಮೂರ್ತಿ ಮಾಡಿದ ಮೊಮ್ಮಕ್ಕಳು!ಅಜ್ಜನ ನೆನಪಿಗಾಗಿ ಕೈಯ್ಯಾರೆ ಅಜ್ಜನ ಮೂರ್ತಿ ಮಾಡಿದ ಮೊಮ್ಮಕ್ಕಳು!

 ಪ್ರಗತಿಪರವಾದ ಪ್ರಯೋಗಶಾಲೆಯಾಗಿ ಕರಾವಳಿ ಜಿಲ್ಲೆ

ಪ್ರಗತಿಪರವಾದ ಪ್ರಯೋಗಶಾಲೆಯಾಗಿ ಕರಾವಳಿ ಜಿಲ್ಲೆ

ತಮ್ಮ ಲೋಪದೋಷಗಳನ್ನು ಮುಚ್ಚಿಹಾಕಲು ಬಿಜೆಪಿ ಚಡ್ಡಿ ಅಭಿಯಾನ ಮಾಡುತ್ತಿದ್ದಾರೆ. ಬುಧವಾರ ಸಂಜೆ ಉಡುಪಿ ಜಿಲ್ಲೆಯಿಂದ ಬೆಂಗಳೂರಿಗೆ ಸಾವಿರಾರು ಹಳೆಯ ಚಡ್ಡಿಗಳನ್ನು ಕೋರಿಯರ್ ಮೂಲಕ ಪಾರ್ಸಲ್ ಮಾಡಲಾಗಿದೆ. ಉಡುಪಿ ಜಿಲ್ಲೆಯನ್ನು ಪ್ರಯೋಗಶಾಲೆಯನ್ನಾಗಿ ಮಾಡುತ್ತಿದ್ದಾರೆ. ನಾವು ಶಿಕ್ಷಣದಲ್ಲಿ ನಂಬರ್1 ಜಿಲ್ಲೆಯಾಗಿದ್ದೆವು. ಆದರೆ ಇಂತಹ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮಾಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡು ಹೋದರು. ರಾಜ್ಯದ ವಿದ್ಯಾಂಗ ಇಲಾಖೆ ಏನು ಮಾಡುತ್ತಿದೆ? ಮುಂದಿನ ಚುನಾವಣೆಗೋಸ್ಕರ ಹೀಗೆಲ್ಲಾ ಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಗತಿಪರವಾದ ಕರಾವಳಿ ಜಿಲ್ಲೆಯನ್ನು ಪ್ರಯೋಗಶಾಲೆ ಮಾಡಿದ್ದಾರೆ ಅಂತಾ ವಿನಯ ಕುಮಾರ್ ಸೊರಕೆ ಆರೋಪ ಮಾಡಿದ್ದಾರೆ.

 ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಸಂಘ

ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಸಂಘ

ಒಂದು ವೇಳೆ ಅವರು ಚಡ್ಡಿಗಳನ್ನು ಸುಡುವುದಾದರೆ ನಾವುಗಳೆ ಅವರು ಇರುವ ಸ್ಥಳಕ್ಕೆ ಲಕ್ಷಾಂತರ ಚಡ್ಡಿಗಳನ್ನು ಕಳುಹಿಸುತ್ತೇವೆ ಅವರು ಅವುಗಳನ್ನು ಸುಟ್ಟುಕೊಂಡೆ ಕಾಲ ಕಳೆಯಲಿ ಎಂದು ಆರ್‌ಎಸ್‌ಎಸ್ ಮುಖಂಡ ಮಂಜುನಾಥ ಟೀಕಿಸಿದರು.

ಕಾಂಗ್ರೆಸ್ ಯುವ ಅಧ್ಯಕ್ಷ ನಲಪಾಡ್ ಪ್ರತಿ ಜಿಲ್ಲೆಗೂ ಬಂದು ಚಡ್ಡಿ ಸುಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ಯಾವುದೆ ಕಷ್ಟ ಅಗಬಾರದು ಅಂತಾ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ಚಡಿಗಳನ್ನು ಕೆಪಿಸಿಸಿ ಕಚೇರಿಗೆ ನಾವೇ ಕಳುಹಿಸುತ್ತೇವೆ. ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಿಂದ ಚಡ್ಡಿಗಳು ಕೆಪಿಸಿಸಿ ಕಚೇರಿಗೆ ಬರುತ್ತವೆ. ಆಗ ನಲಪಾಡ್ ಮತ್ತು ಕಾಂಗ್ರೆಸ್ ಮುಖಂಡರು ಎಲ್ಲಾ ಜಿಲ್ಲೆಗಳ ಚಡ್ಡಿಗಳ ಸುಡುವೆ ಕೆಲಸವನ್ನು ಮಾಡಲಿ ಎಂದು ಅವರು ವ್ಯಂಗ್ಯ ಮಾಡಿದರು.

ಯಾವುದೇ ರಾಜಕೀಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತೊಂದು ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡಲಿ ಅದನ್ನು ಬಿಟ್ಟು ಸದಾಕಾಲ ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಸಂಘದ ವಿರುದ್ಧ ಮಾತನಾಡಬಾರದು ಎಂದು ಒತ್ತಾಯಿಸಿದರು. ಈ ಸಮಯದಲ್ಲಿ ಬಸವರಾಜ ಸ್ವಾಮಿಗಳು, ಹಿಂದೂ ಸಂಘಟನೆಯ ಹಿರಿಯ ಮುಖಂಡ ಕುಕ್ಕಿಲಿ ಮಂಜುನಾಥ್, ಮುರುಗೇಶ್, ಲೋಕೇಶ್, ತೆರ್ನೆನಹಳ್ಳಿಪ್ರದೀಪ್, ಅರುಣ್‌ಕುಮಾರ್ ಮತ್ತಿತ್ತರರು ಹಾಜರಿದ್ದರು.

 ಹಳೆ ಚಡ್ಡಿಗಳನ್ನು ಕಳುಹಿಸುವ ಮೂಲಕ ಆಕ್ರೋಶ

ಹಳೆ ಚಡ್ಡಿಗಳನ್ನು ಕಳುಹಿಸುವ ಮೂಲಕ ಆಕ್ರೋಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ನವರ ಚಡ್ಡಿ ಸುಡುವ ಅಭಿಯಾನ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಹಳೆ ಚಡ್ಡಿಗಳನ್ನು ಕೆಪಿಸಿಸಿ ಕಚೇರಿಗೆ ಕಳುಹಿಸುವ ಮೂಲಕ ಮಂಡ್ಯದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಆರ್.ಎಸ್.ಎಸ್. ಮುಖಂಡ ಮಂಜುನಾಥ ಮಾತನಾಡಿ, ಸಿದ್ದರಾಮಯ್ಯನವರು ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರಾಗಿದ್ದರೂ ಸಹ ತಮ್ನ ರಾಜಕೀಯ ಲಾಭಕ್ಕಾಗಿ ದೇಶಭಕ್ತ ಸಂಘಟನೆಯಾಗಿರುವ ಆರ್.ಎಸ್.ಎಸ್ ಟೀಕಿಸುವುದು ಖಂಡನೀಯ. ಅವರಿಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲಾ, ಮುಂದಿನ ತಿಂಗಳು ಬೆಂಗಳೂರಿನ ರಾಮೂಹಳ್ಳಿ ಸಮೀಪ ಆರ್.ಎಸ್.ಎಸ್.ನ ಕ್ಯಾಂಪ್ ನಡೆಯುತ್ತದೆ ಅಲ್ಲಿ ಹೋಗಿ ಅವರು ಕ್ಯಾಂಪಿಗೆ ಸೇರಿಕೊಂಡು ಸಂಘದ ಬಗ್ಗೆ ಮಾಹಿತಿ ಪಡೆಯುವ ಜೊತೆಗೆ ಸಂಘದ ತತ್ವ ಸಿದ್ದಾಂತವನ್ನು ತಿಳಿದುಕೊಳ್ಳಲಿ. ಅದನ್ನು ಬಿಟ್ಟು ಸಂಘದ ತತ್ವ ಸಿದ್ದಾಂತಗಳನ್ನೇ ತಿಳಿಯದೆ ವಿನಾಕಾರಣ ಸಂಘದವನ್ನು ಟೀಕಿಸುವುದು ಸರಿಯಲ್ಲ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯವನರು ಚಡ್ಡಿ ವಿಷಯಕ್ಕೆ ದೊಡ್ಡ ಬೆಲೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

(ಒನ್ಇಂಡಿಯಾ ಸುದ್ದಿ)

Recommended Video

Bengaluru: ಶಂಕಿತ ಉಗ್ರನ ರಹಸ್ಯ ಬಯಲು | *Politics | OneIndia Kannada

English summary
Udupi BJP intensified Chaddi campaign to counter Congress protests. It collected soiled knickers from various villages and sent it to KPCC office in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X