ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಹ್ಮಗಿರಿ ವೃತ್ತದಲ್ಲಿ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಕೇಳಿದ ಯಶ್ ಪಾಲ್‌ ಸುವರ್ಣ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್‌ 18: ತೀವ್ರ ವಿವಾದ ಸೃಷ್ಠಿಸಿದ ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಅಳವಡಿಸಲಾದ ಸಾವರ್ಕರ್ ಬ್ಯಾನರ್ ಈಗ ಮತ್ತೊಂದು ಸ್ವರೂಪ ಪಡೆದಿದೆ. ಬ್ರಹ್ಮ ಗಿರಿವೃತ್ತದಲ್ಲಿ ಸಾವರ್ಕರ್ ಪುತ್ಥಳಿಯನ್ನು ನಿರ್ಮಾಣ ಮಾಡಲು ಅವಕಾಶ ಕೊಡುವಂತೆ ಉಡುಪಿ ಜಿಲ್ಲಾ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಉಡುಪಿ ನಗರಸಭೆಗೆ ಮನವಿ ಮಾಡಿದ್ದಾರೆ.

ಉಡುಪಿಯ ನಗರಸಭಾ ಅಧ್ಯಕ್ಷ ರಿಗೆ ಮನವಿ ಮಾಡಿರುವ ಯಶ್ ಪಾಲ್ ಸುವರ್ಣ ಉಡುಪಿ ನಗರಸಭೆ ಅಜ್ಜರಕಾಡು ವ್ಯಾಪ್ತಿಯ ಬ್ರಹ್ಮಗಿರಿ ವೃತ್ತದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸಿದ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ರವರ ಪುತ್ಥಳಿ ನಿರ್ಮಿಸಿ ವಿಡಿ ಸಾವರ್ಕರ್ ಅವರಿಗೆ ಸಮಸ್ತ ದೇಶಪ್ರೇಮಿಗಳ ಪರವಾಗಿ ಗೌರವ ಸಲ್ಲಿಸಲು ನಿರ್ಧರಿಸಿದ್ದೇವೆ.

ವೀರ ಸಾವರ್ಕರ್ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್ ಬುಕ್ ಲೆಟ್?ವೀರ ಸಾವರ್ಕರ್ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್ ಬುಕ್ ಲೆಟ್?

ಭಾರತ ಸ್ವಾತಂತ್ರ್ಯಗೊಂಡು 75 ಸಂವತ್ಸರಗಳನ್ನು ಪೂರೈಸಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಕ್ರಾಂತಿ ಕಾರಿ ಹೋರಾಟದ ಮೂಲಕ ಬ್ರಿಟಷರ ಪಾಲಿಗೆ ಸಿಂಹಸ್ವಪ್ನರಾಗಿದ್ದ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅತ್ಯಂತ ಸಮಂಜಸ ಸಮಯಬಂದೊದಗಿದೆ ಎಂದು ಮನವಿ ಮಾಡಿದ್ದಾರೆ.

BJP Leader Yash Pal Suvarna seeks Permission for Savarkar statue in Udupi

ವಿರೋಧ ಮಾಡಿದರೆ ಮನೆಮುಂದೆಯೇ ಫೋಟೋ!

ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಶ್ ಪಾಲ್ ಸುವರ್ಣ, " ದೇಶಪ್ರೇಮಿ ನಾಗರಿಕರು ಬ್ರಹ್ಮಗಿರಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಪುತ್ಥಳಿಯನ್ನು ನಿರ್ಮಾಣ ಮಾಡುವುದಕ್ಕೆ ತೀರ್ಮಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ಪುತ್ಥಳಿ ನಿರ್ಮಾಣಕ್ಕೆ ನಗರಸಭೆಯಲ್ಲಿ ಅವಕಾಶ ಕೇಳಿದ್ದೇವೆ. ನಿಜವಾದ ದೇಶಪ್ರೇಮಿಗಳು ಸ್ವಾತಂತ್ರ್ಯ ವೀರ ಸಾವರ್ಕರ್ ಪುತ್ಥಳಿ ‌ನಿರ್ಮಾಣಕ್ಕೆ ಬೆಂಬಲ ನೀಡುತ್ತಾರೆ. ದೇಶ ದ್ರೋಹಿಗಳು ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಸೇರಿದಂತೆ ಬೇರೆಯಾರದರೂ ವಿರೋಧ ಮಾಡಿದರೆ ಅಂತಹ ನಾಯಕರು ಮನೆಯ ಮುಂದೆ ಫೋಟೋ ಹಾಕುತ್ತೇವೆ " ಎಂದು ಯಶ್ ಪಾಲ್ ಹೇಳಿದ್ದಾರೆ‌‌.

ಬ್ರಹ್ಮಗಿರಿ ವೃತ್ತದಲ್ಲಿ ಹಿಂದೂ ರಾಷ್ಟ್ರ ಬ್ಯಾನರ್ ಅಳವಡಿಕೆಗೆ ಉಡುಪಿ ಜಿಲ್ಲಾ ಎಸ್ ಡಿ ಪಿ ಐ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಎಸ್ ಡಿ ಪಿಐ ಉಪಾಧ್ಯಕ್ಷ ಶಾಹಿದ್ ಅಲಿ, ವಿವಾದ, ಸಮಸ್ಯೆ, ದ್ವೇಷ ಇಲ್ಲದ ರಾಜ್ಯವಾಗಿತ್ತು. ದುರದೃಷ್ಟವಶಾತ್ ಯುಪಿ, ಎಂಪಿ, ರಾಜಸ್ಥಾನದ ರೀತಿಯ ಘಟನೆಗಳು ಇಲ್ಲಿ ಆರಂಭವಾಗಿದೆ. ಕರ್ನಾಟಕ ದಲ್ಲೂ ಉತ್ತರ ಭಾರತ ಮಾದರಿಯ ಘಟನೆ ಆರಂಭವಾಗಿದೆ. ಬುಲ್ಡೋಜರ್, ಹಿಜಾಬ್ ದ್ವೇಷದ ಸೃಷ್ಟಿ ಉಡುಪಿಯಲ್ಲೇ ಆರಂಭವಾಗಿತ್ತು ಎಂದು ನೆನಪಿಸಿದರು

Recommended Video

UAE ನಲ್ಲಿ ಅನುಭವವಿಲ್ಲದ ಭಾರತ ಪಾಕಿಸ್ತಾನದ‌ ಮುಂದೆ ಸೋಲೋದು‌ ಗ್ಯಾರೆಂಟಿ ಅಂತೆ!! | Oneindia Kannada
BJP Leader Yash Pal Suvarna seeks Permission for Savarkar statue in Udupi

ಬ್ರಹ್ಮಗಿರಿಯಲ್ಲಿ ಜೈ ಹಿಂದೂ ರಾಷ್ಡ್ರ ಬ್ಯಾನರ್ ಹಾಕಿದ್ದಾರೆ. ಜನಪ್ರತಿನಿಧಿಗಳು ಸಂವಿಧಾನದಂತೆ ನಡೆಯುತ್ತೇವೆ ಹೇಳುತ್ತಾರೆ. ಹಿಂದೂ ರಾಷ್ಟ್ರ ಆರ್ ಎಸ್ ಎಸ್ ಪರಿಕಲ್ಪನೆ. ಹಿಂದೂ ಮತ ಪಡೆಯಲು, ಬೇರೆಯವರಿಂದ ಬೇರ್ಪಡಿಸಲು ಈ ಷಡ್ಯಂತ್ರ ಮಾಡಲಾಗಿದೆ. ಹಿಂದೂ ರಾಷ್ಟ್ರ ಕೇವಲ ಹಿಂದೂ ಮತ ಪಡೆಯುವ ಪರಿಕಲ್ಪನೆ. ಎಂಟು ವರ್ಷದಿಂದ ಈ ಸರ್ಕಾರದ ಆಡಳಿತವನ್ನು ಹಿಂದೂಗಳು ನೋಡಿದ್ದಾರೆ. ಉದ್ಯೋಗ ಇಲ್ಲದೆ ಹಿಂದೂ ಯುವಕರು ಅತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹಿಂದೂಗಳು‌ ಕಷ್ಟದಲ್ಲಿದ್ದಾರೆ, ಹಾಗಾದ್ರೆ ಇದು ಯಾರ ರಾಷ್ಟ್ರ? ಇದು ಮನುಸ್ಮೃತಿ ರಾಷ್ಟ್ರ. ಬ್ರಾಹ್ಮಣರು ತಮ್ಮ ಕಪಿಮುಷ್ಟಿಯಲ್ಲಿ ಭಾರತವನ್ನು ಇಡಲು ಯತ್ನಿಸುತ್ತಿದ್ದಾರೆ. ಶಾಂತಿಭಂಗ ಮಾಡುವ, ಜನರನ್ನು ಉದ್ರೇಕಿಸಲು ಜನರ ಮತ ಗಳಿಸಲು ಈ ಷಡ್ಯಂತ್ರ ಮಾಡಲಾಗಿದೆ. ಮುಸಲ್ಮಾನರು ತಲೆ ಕೆಡಿಸಿಕೊಳ್ಳಬೇಡಿ, ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

English summary
National chief secretary of BJP Minority Morcha Yashpal Suvarna written a letter to the city municipality for seeks permission for Savarkar statue in at Brahmagiri Circle in Udupi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X