ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, ಕಾರ್ಕಳ ಅತಂತ್ರ ಫಲಿತಾಂಶ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್.03: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಒಟ್ಟು 261 ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದ್ದು, ಬಿಜೆಪಿ ಮೊದಲ ಬಾರಿಗೆ ನಾಲ್ಕೂ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ.

ಈಗಾಗಲೇ ಕಾರ್ಕಳ ಪುರಸಭೆ ಫಲಿತಾಂಶ ಜನರಿಗೆ ಅಚ್ಚರಿ ಮೂಡಿಸಿದ್ದು, ಆಡಳಿತ ಅತಂತ್ರ ಸ್ಥಿತಿ ಪಡೆದುಕೊಂಡಿದೆ. ಬಿಜೆಪಿ 11, ಕಾಂಗ್ರೆಸ್ 11, ಹಾಗೂ ಇತರ 1 ಸ್ಥಾನ ಪಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇನ್ನೇನು ಎಂಪಿ ಹಾಗೂ ಎಂಎಲ್ ಎ ಗಳ ವೋಟ್ ಮೂಲಕ ಕಾರ್ಕಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.

LIVE ಸ್ಥಳೀಯ ಸಂಸ್ಥೆ ಫಲಿತಾಂಶ : ಸದ್ಯದ ಬಲಾಬಲ: ಕಾಂಗ್ರೆಸ್ 560, ಬಿಜೆಪಿ 499, ಜೆಡಿಎಸ್ 178LIVE ಸ್ಥಳೀಯ ಸಂಸ್ಥೆ ಫಲಿತಾಂಶ : ಸದ್ಯದ ಬಲಾಬಲ: ಕಾಂಗ್ರೆಸ್ 560, ಬಿಜೆಪಿ 499, ಜೆಡಿಎಸ್ 178

ಉಡುಪಿ ನಗರಸಭೆಯಲ್ಲೂ ಬಿಜೆಪಿ ಕಾಂಗ್ರೆಸ್ ಅನ್ನು ಹಿಮ್ಮೆಟ್ಟಿಸಿ ಲಕ್ಕಿ ನಂಬರ್ ಪಡೆದು ಅಧಿಕಾರ ವಶದಲ್ಲಿರಿಸಿಕೊಂಡಿದೆ. ಒಟ್ಟು 35 ವಾರ್ಡ್ ಗಳಲ್ಲಿ 31 ಸ್ಥಾನಗಳನ್ನು ಪಡೆದ ಬಿಜೆಪಿ ಅಧಿಕಾರ ಕಾಯ್ದುಕೊಂಡಿದೆ. ಕಾಂಗ್ರೆಸ್ ಕೇವಲ ನಾಲ್ಕು ಸೀಟ್ ಗಳಿಗೆ ಸೀಮಿತವಾಗಿದ್ದು, ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

BJP has won four constituency for the first time in Udupi

ಕುಂದಾಪುರ ಪುರಸಭೆಯಲ್ಲೂ ಹಾಲಾಡಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ಗೆ ಸೋಲುಣಿಸಿದೆ. ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ 14, ಕಾಂಗ್ರೆಸ್ 8 ಹಾಗೂ ಇತರ 1 ಸ್ಥಾನಗಳನ್ನು ಪಡೆದುಕೊಂಡಿದೆ.

ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಲ್ಕರಲ್ಲೂ ಗೆಲವು ಸಾಧಿಸಿದ ಬಿಜೆಪಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲೂ ಗೆಲುವು ಸಾಧಿಸಿದ್ದು, ಬಿಜೆಪಿ 10, ಕಾಂಗ್ರೆಸ್ 5 ಹಾಗೂ ಇತರ 1 ಸ್ಥಾನ ಪಡೆದುಕೊಂಡಿದೆ.

ಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಖಾತೆ ತೆರೆದ ಎಸ್ ಡಿಪಿಐಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಖಾತೆ ತೆರೆದ ಎಸ್ ಡಿಪಿಐ

ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಿಜೆಪಿ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅದೇ ಮಾದರಿಯನ್ನು ಹೊರತಂದಿದೆ. ಜಿಲ್ಲಾದ್ಯಂತ ಕೇಸರಿ ಪತಾಕೆ ಹರಿದಾಡುತ್ತಿದೆ. ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ.

English summary
Polling process of the local bodies election in Udupi District has been completed. BJP has won four constituency for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X