ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೋಭಾಗೆ ಉಡುಪಿ ಟಿಕೆಟ್: ಎಲ್ಲಾ ಅಡೆತಡೆಯನ್ನು ಮೆಟ್ಟಿನಿಂತ ಯಡಿಯೂರಪ್ಪ

|
Google Oneindia Kannada News

Recommended Video

ಕೊನೆಗೂ ಶೋಭಾ ಕರಂದ್ಲಾಜೆಗೆ ಉಡುಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದ ಬಿ ಎಸ್ ವೈ

ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದ ಏಳು ಕ್ಷೇತ್ರಗಳನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಮೂಲಕ, ಹಲವು ದಿನಗಳಿಂದ ಇದ್ದ ಗೊಂದಲಕ್ಕೆ ತೆರೆ ಎಳಿದಿದೆ.

ಎಲ್ಲಾ ಹಾಲೀ ಸಂಸದರಿಗೆ (ಕೊಪ್ಪಳ ಹೊರತು ಪಡಿಸಿ) ಟಿಕೆಟ್ ನೀಡಿರುವ ಬಿಜೆಪಿ, ಕ್ಷೇತ್ರದಲ್ಲಿನ ಕಾರ್ಯಕರ್ತರ ಮತ್ತು ಮುಖಂಡರ ಕುತೂಹಲಕ್ಕೆ ಪೂರ್ಣವಿರಾಮ ಇಟ್ಟಿದ್ದು, ಎಲ್ಲರೂ ಒಟ್ಟಾಗಿ ಸಾಗಿ ಎನ್ನುವ ಸಂದೇಶವನ್ನು ರವಾನಿಸಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಲಿಸ್ಟ್ ನಲ್ಲಿ, ವರಿಷ್ಠರಿಗೆ ಸಿಕ್ಕಾಪಟ್ಟೆ ತಲೆನೋವಾಗಿದ್ದ ಕ್ಷೇತ್ರಗಳೆಂದರೆ ಉಡುಪಿ-ಚಿಕ್ಕಮಗಳೂರು, ದಕ್ಷಿಣಕನ್ನಡ ಮತ್ತು ಬಳ್ಳಾರಿ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾಡಿದ ಅನುಮೋದಗೆ ವರಿಷ್ಠರು ಒಪ್ಪಿಗೆ ನೀಡಿದ್ದಾರೆ ಎನ್ನುವುದು ಮೊದಲ ಪಟ್ಟಿಯ ನಂತರ ಸ್ಪಷ್ಟವಾಗಿದೆ.

ಮೊದಲ ಪಟ್ಟಿಯಲ್ಲಿ ರಾಜ್ಯದ ಏಳು ಕ್ಷೇತ್ರಗಳ ಬಿಟ್ಟ ಬಿಜೆಪಿ, ಕಾರಣವೇನು?ಮೊದಲ ಪಟ್ಟಿಯಲ್ಲಿ ರಾಜ್ಯದ ಏಳು ಕ್ಷೇತ್ರಗಳ ಬಿಟ್ಟ ಬಿಜೆಪಿ, ಕಾರಣವೇನು?

ಪ್ರಮುಖವಾಗಿ, ಹಾಲೀ ಸಂಸದೆ ಶೋಭಾ ಕರಂದ್ಲಾಜೆಗೆ ಯಾವುದೇ ಕಾರಣಕ್ಕೆ ಟಿಕೆಟ್ ನೀಡಬಾರದೆಂದು ಭಾರೀ ಒತ್ತಡವಿತ್ತು. ಉಡುಪಿ-ಚಿಕ್ಕಮಗಳೂರು ಭಾಗದ ಪ್ರಭಾವಿ ಬಿಜೆಪಿ ಮುಖಂಡರೇ ಶೋಭಾಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆ

ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆ

ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹಲವು ಬಾರಿ ಶೋಭಾ ಹೆಸರು ಪ್ರಸ್ತಾವನೆಗೆ ಬಂದಿತ್ತು. ಪ್ರತೀಬಾರಿ ಯಡಿಯೂರಪ್ಪ ಪಟ್ಟನ್ನು ಸಡಿಲಿಸದೇ ಇದ್ದದ್ದರಿಂದ ವರಿಷ್ಠರು ಶೋಭಾಗೆ ಟಿಕೆಟ್ ನೀಡಿದರು ಎನ್ನುವ ಮಾಹಿತಿಯಿದೆ. ಒಂದು ಹಂತದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಯಪ್ರಕಾಶ್ ಹೆಗ್ಡೆ ಹೆಸರು ಬಹುತೇಕ ಅಂತಿಮವಾಗುವ ಸಾಧ್ಯತೆಯಿತ್ತು. ಆದರೆ, ಎಲ್ಲಾ ಅಡೆತಡೆಗಳನ್ನು ಸರಿಪಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು.

ಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಉಡುಪಿ -ಚಿಕ್ಕಮಗಳೂರು ಕ್ಷೇತ್ರ

ಉಡುಪಿ -ಚಿಕ್ಕಮಗಳೂರು ಕ್ಷೇತ್ರ

ಈ ಬಾರಿಯ ಲೋಕಸಭಾ ಚುನಾವಣೆಗೆ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಚಾಲ್ತಿಯಲ್ಲಿದ್ದ ಹೆಸರು ಮೂವರದ್ದು. ಶೋಭಾ ಕರಂದ್ಲಾಜೆ, ಜಯಪ್ರಕಾಶ್ ಹೆಗಡೆ ಮತ್ತು ಯಶಪಾಲ್ ಸುವರ್ಣ. ಮೀನುಗಾರ ನಾಯಕರೂ ಆಗಿರುವ ಸುವರ್ಣ ಅವರನ್ನು ದೆಹಲಿಗೆ ಬಿಜೆಪಿ ವರಿಷ್ಠರು ಕರೆಸಿಕೊಂಡಿದ್ದರು ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು.

ನಮ್ಮ ಅಭ್ಯರ್ಥಿ ನರೇಂದ್ರ ಮೋದಿ ಎಂದ ಶೋಭಾ

ನಮ್ಮ ಅಭ್ಯರ್ಥಿ ನರೇಂದ್ರ ಮೋದಿ ಎಂದ ಶೋಭಾ

ಕ್ಷೇತ್ರದ ಕಾರ್ಯಕರ್ತರೂ ಶೋಭಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಗೊತ್ತೇ ಇದೆ. ಶೋಭಾ ಗೋಬ್ಯಾಕ್ ಆಂದೋಲನವನ್ನೇ ನಡೆಸಲಾಗಿತ್ತು. ಇದೆಲ್ಲಾ, ಸ್ವಪಕ್ಷೀಯರಿಂದಲೇ ಆಗುತ್ತಿರುವಂತಹ ಕೆಲಸವೆಂದು ಶೋಭಾ ಬಹಿರಂಗ ಹೇಳಿಕೆಯನ್ನೂ ನೀಡಿದ್ದರು. ನಮ್ಮ ಅಭ್ಯರ್ಥಿ ನರೇಂದ್ರ ಮೋದಿ ಎಂದು ಶೋಭಾ ಹೇಳುವ ಮೂಲಕ, ಮೋದಿಗಾಗಿ ಕೆಲಸ ಮಾಡಿ ಎಂದು ಪರೋಕ್ಷವಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾರ್ಯಕರ್ತರಿಗೆ ಸಂದೇಶವನ್ನು ರವಾನಿಸಿದ್ದರು.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಕ್ಲೀನ್ ಇಮೇಜಿನ ಜಯಪ್ರಕಾಶ್ ಹೆಗ್ಡೆ, ಟಿಕೆಟಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು

ಕ್ಲೀನ್ ಇಮೇಜಿನ ಜಯಪ್ರಕಾಶ್ ಹೆಗ್ಡೆ, ಟಿಕೆಟಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು

ಇನ್ನೊಂದು ಕಡೆ ಸ್ಥಳೀಯ ಪ್ರಭಾವಿ ಮುಖಂಡ, ಕ್ಲೀನ್ ಇಮೇಜಿನ ಜಯಪ್ರಕಾಶ್ ಹೆಗ್ಡೆ, ಟಿಕೆಟಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಹೆಗ್ಡೆ ವಿಫಲರಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕುಂದಾಪುರ ಅಥವಾ ಬೈಂದೂರು ಕ್ಷೇತ್ರದ ಟಿಕೆಟ್ ಬಯಸಿದ್ದ ಹೆಗ್ಡೆಗೆ, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ತಲೆ ಸವರಲಾಗಿತ್ತು. ಜಯಪ್ರಕಾಶ್ ಹೆಗ್ಡೆ ಪರ ಟ್ವಿಟ್ಟರ್ ನಲ್ಲಿ ಆಂದೋಲನವೂ ನಡೆದು ಹೋಯಿತು.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಕಾರ್ಯಕರ್ತರ ವಿರೋಧದ ನಡುವೆಯೂ ಶೋಭಾಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿ

ಕಾರ್ಯಕರ್ತರ ವಿರೋಧದ ನಡುವೆಯೂ ಶೋಭಾಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿ

ಸ್ವಪಕ್ಷೀಯ ಮುಖಂಡರು, ಕ್ಷೇತ್ರದ ಕಾರ್ಯಕರ್ತರ ವಿರೋಧದ ನಡುವೆಯೂ ಶೋಭಾಗೆ ಟಿಕೆಟ್ ಕೊಡಿಸುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಕ್ಷೇತ್ರ ಗೆಲ್ಲಿಸಿಕೊಂಡು ಬರುವುದಾಗಿ ಬಿಎಸ್ವೈ ಭರವಸೆ ನೀಡಿದ ನಂತರ, ಶೋಭಾಗೆ ಮಣೆಹಾಕಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಸೀಟು ಹೊಂದಾಣಿಕೆಯ ನಂತರ ಉಡುಪಿ-ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದ್ದು, ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಗೆ ಈಗಾಗಲೇ ದೇವೇಗೌಡ್ರು ಬಿಫಾರಂ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.

English summary
BJP announced first list for the upcoming Loksabha elections 2019, Shobha Karandlaje contesting from Udupi-Chikkamagaluru. BJP State President BS Yeddyurappa pressure worked out to get the ticket to Shobha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X