ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ಜೆ ಅರ್ಚಕರ ಬಟ್ಟೆ ಕಳಚಿ ಥಳಿಸಿದ ಬಿಜೆಪಿ ಕಾರ್ಯಕರ್ತರು

|
Google Oneindia Kannada News

ಉಡುಪಿ, ಡಿಸೆಂಬರ್ 08: ದೇವಸ್ಥಾನದ ಅರ್ಚಕರ ಮೇಲೆ ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಕರ್ಜೆ ಎಂಬಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಅರ್ಚಕರನ್ನು ‌ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್‌ ರಷ್ ಇದೆ ಹತ್ತಬೇಡಿ ಎಂದಿದ್ದಕ್ಕೆ ಕಂಡಕ್ಟರ್‌ ಮೇಲೆ ಹಲ್ಲೆಬಸ್‌ ರಷ್ ಇದೆ ಹತ್ತಬೇಡಿ ಎಂದಿದ್ದಕ್ಕೆ ಕಂಡಕ್ಟರ್‌ ಮೇಲೆ ಹಲ್ಲೆ

ಕರ್ಜೆಯ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ರಾಮಕೃಷ್ಣ ಅಡಿಗ ಹಾಗೂ ಶ್ರೀಕಾಂತ್ ಅಡಿಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕರ್ಜೆ ಬಿಜೆಪಿ ಮುಖಂಡ ಸುಧಾಕರ್ ಸುಗ್ಗಿ ,ಸುರೇಶ್ ಶೆಟ್ಟಿ ತಡಾಲ್ ಬಾಲಕೃಷ್ಣ ಶೆಟ್ಟಿ ಪಂಜಿ ಬೆಟ್ಟು ಹಾಗೂ ಇವರ ತಂಡ ದೇವಸ್ಥಾನದ ಒಳಗೆ ಆಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

 ಮಗಳನ್ನು ಮಾತನಾಡಿಸಿದಕ್ಕೆ ಯುವಕನಿಗೆ ತಂದೆ ಮಾಡಿದ್ದೇನು? ಮಗಳನ್ನು ಮಾತನಾಡಿಸಿದಕ್ಕೆ ಯುವಕನಿಗೆ ತಂದೆ ಮಾಡಿದ್ದೇನು?

ಪೂಜೆಯಲ್ಲಿ ನಿರತರಾಗಿದ್ದ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀಕಾಂತ್ ಹಾಗೂ ರಾಮಕೃಷ್ಣ ಅಡಿಗ ಅವರ ಬಟ್ಟೆ ಕಳಚಿ ಥಳಿಸಲಾಗಿದೆ. ಮಾರಕಸ್ತ್ರಗಳಿಂದ ಹಲ್ಲೆ ನಡೆಸಿದ್ದೂ ಅಲ್ಲದೆ, ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.

BJP activists assault two temple priests in Udupi

ಶಾಸಕ ರಘುಪತಿ ಭಟ್ ಬೆಂಬಲದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೊಳಗಾದ ಅರ್ಚಕರ ಕುಟುಂಬಿಕರು ಆರೋಪ ಮಾಡಿದ್ದಾರೆ.

 ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಬಂದಿದ್ದರೆ ಅವರ ಮೇಲೆ ಹಲ್ಲೆ ನಡೆಯುತ್ತಿತ್ತೇ? ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಬಂದಿದ್ದರೆ ಅವರ ಮೇಲೆ ಹಲ್ಲೆ ನಡೆಯುತ್ತಿತ್ತೇ?

ಹಲ್ಲೆ ನಡೆಸಿರುವ ಆರೋಪಿಗಳ ಪೈಕಿ ಓರ್ವ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ. 6 ತಿಂಗಳ ಹಿಂದೆ ಆರೋಪಿಗಳು ದೇವಸ್ಥಾನದ ಹುಂಡಿಯನ್ನು

ಕಳವುಗೈದಿದ್ದು ಇವರ ಮೇಲೆ 420 ಕೇಸು ಕೂಡ ದಾಖಲಾಗಿತ್ತು. ದೇವಸ್ಥಾನದ ವಿಚಾರವಾಗಿ ಪ್ರತಿ ಭಾರಿ ಹಸ್ತಕ್ಷೇಪ ಮಾಡುತ್ತಿದ್ದ ಇವರ ವಿರುದ್ಧ ಕುಂದಾಪುರ ಎಸಿ ಕೋರ್ಟ್ ಗೆ ದೇವಸ್ಥಾನದ ಆಡಳಿತ ಸಮಿತಿ ದೂರನ್ನೂ ನೀಡಿತ್ತು.

English summary
Two priests of Mahalingeshwara temple of Karje were assaulted by group of BJP and Bajrangadal activists over financial matter in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X